Advertisement

ಮುಂಬೈ ಇಂಡಿಯನ್ಸ್ ವಿರುದ್ಧ ಶತಕ ಸಿಡಿಸಿ ಸಂಭ್ರಮಿಸಿದ ಜೋಸ್ ಬಟ್ಲರ್

05:49 PM Apr 02, 2022 | Team Udayavani |

ಮುಂಬೈ: ರಾಜಸ್ಥಾನ ರಾಯಲ್ಸ್ ನ ಆರಂಭಿಕ ಆಟಗಾರ ಜೋಸ್ ಬಟ್ಲರ್ ಅವರು 2022ರ ಐಪಿಎಲ್ ನ ಮೊದಲ ಶತಕ ಬಾರಿಸಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ದ ಇಲ್ಲಿನ ಡಿವೈ ಪಾಟೀಲ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಬಟ್ಲರ್ 66 ಎಸೆತದಲ್ಲಿ ಶತಕ ಪೂರೈಸಿದರು.

Advertisement

ಶತಕ ಬಾರಿಸಿದ ಬಳಿಕ ಬಟ್ಲರ್ ಅವರು ಜಸ್ಪ್ರೀತ್ ಬುಮ್ರಾ ಎಸೆತದಲ್ಲಿ ಬೌಲ್ಡಾದರು.  ಒಟ್ಟು 68 ಎಸೆತ ಎದುರಿಸಿದ ಜೋಸ್ ಬಟ್ಲರ್ ಭರ್ತಿ 100 ರನ್ ಗಳಿಸಿದರು. ಬಟ್ಲರ್ ಈ ಇನ್ನಿಂಗ್ಸ್ ನಲ್ಲಿ 11 ಬೌಂಡರಿ ಮತ್ತು ಐದು ಸಿಕ್ಸರ್ ಬಾರಿಸಿದರು.

ಐಪಿಎಲ್ ನಲ್ಲಿ ಜೋಸ್ ಬಟ್ಲರ್ ತಮ್ಮ ಎರಡನೇ ಶತಕ ಬಾರಿಸಿದರು. 2011ರ ಐಪಿಎಲ್ ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಅಜೇಯ 124 ರನ್ ಗಳಿಸಿದ್ದರು.

ಇದನ್ನೂ ಓದಿ:ಅಂದು ನನ್ನ ಕ್ರಿಕೆಟ್ ಜೀವನದ ಅತ್ಯಮೂಲ್ಯ 35 ರನ್ ಗಳಿಸಿದ್ದೆ: ಕೊಹ್ಲಿ ವಿಶ್ವಕಪ್ ಮೆಲುಕು

ರಾಜಸ್ಥಾನದ ಪರ ಶಿಮ್ರನ್ ಹೆಟ್ಮೈರ್ ಸ್ಫೋಟಕ ಇನ್ನಿಂಗ್ಸ್ ಆಡಿದರು. ಕೇವಲ 14 ಎಸೆತ ಎದುರಿಸಿದ ಹೆಟ್ಮೈರ್ ಮೂರು ಬೌಂಡರಿ ಮತ್ತು ಮೂರು ಸಿಕ್ಸರ್ ಸಹಿತ 35 ರನ್ ಬಾರಿಸಿದರು.

Advertisement

ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ರಾಜಸ್ಥಾನ ರಾಯಲ್ಸ್ ತಂಡ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 193 ರನ್ ಗಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next