Advertisement

ಜೋರ್ಡಾನ್‌ನಲ್ಲೂ ಲಾಕ್‌ಡೌನ್‌ ಸಡಿಲಿಕೆ

12:38 PM Jun 07, 2020 | sudhir |

ಅಮ್ಮಾನ್‌: ಜಗತ್ತಿನೆಲ್ಲೆಡೆ ಕೋವಿಡ್‌ ಲಾಕ್‌ಡೌನ್‌ ಸಡಿಲಿಕೆಯಾಗುತ್ತಿದ್ದಂತೆ ಅತ್ತ ಮಧ್ಯಪ್ರಾಚ್ಯದ ಪ್ರಮುಖ ದೇಶ, ಅತಿ ಪ್ರಾಚೀನ ನಗರಿಗಳನ್ನು ಹೊಂದಿದ ಜೋರ್ಡಾನ್‌ನಲ್ಲೂ ಲಾಕ್‌ಡೌನ್‌ ಸಡಿಲಿಕೆಯಾಗಿದೆ. ಇದರೊಂದಿಗೆ ಆ ದೇಶ ಮತ್ತೆ ಕೋವಿಡ್‌ ಹರಡದಂತೆ ಎಚ್ಚರಿಕೆಯ ಹೆಜ್ಜೆಗಳನ್ನೂ ಇಟ್ಟಿದೆ.

Advertisement

ಶನಿವಾರದಿಂದ ಇಲ್ಲಿ ವ್ಯಾಪಾರ-ವಹಿವಾಟು ಆರಂಭವಾಗಿದ್ದು, ಕೆಫೆ, ರೆಸ್ಟೋರೆಂಟ್‌ಗಳು ತೆರೆದುಕೊಂಡಿವೆ. ನಗರಗಳ ಮಧ್ಯೆ ಜನ ಸಂಚಾರಕ್ಕೆ ಅವಕಾಶ ನೀಡಲಾಗಿದೆ.

ನಗರದಲ್ಲಿರುವ ಜನರು ಬೆಳಗ್ಗೆ 6ರಿಂದ ಮಧ್ಯಾಹ್ನ 12ರವರೆಗೆ ತಮ್ಮ ವಾಹನಗಳನ್ನು ಉಪಯೋಗಿಸುವುದಕ್ಕೆ ಅವಕಾಶವಿದೆ. ಇದಕ್ಕೆ ಯಾವುದೇ ವಿಶೇಷ ಪರವಾನಿಗೆ ಬೇಡ. ಜತೆಗೆ ದೇಶೀಯ ವಿಮಾನ ಯಾನಕ್ಕೂ ಅವಕಾಶ ಕಲ್ಪಿಸಲಾಗಿದೆ.

ದೇಶದ ವಿವಿಧ ಮಸೀದಿ, ಚರ್ಚ್‌ಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಅಂ.ರಾ. ವಿಮಾನಗಳಿಗೆ ನಿರ್ಬಂಧ, ಪ್ರಯಾಣ ನಿರ್ಬಂಧ ಮುಂದುವರಿದಿದಿದೆ.
ಅಂಗನವಾಡಿ, ಶಾಲಾ ಕಾಲೇಜುಗಳು, ಪಾರ್ಕ್‌ಗಳು, ಥಿಯೇಟರ್‌ಗಳು, ಹಬ್ಬ ಆಚರಣೆಗೆ ನಿಷೇಧ ಮುಂದುವರಿದಿದೆ.

ಹಾಗೆ ನೋಡಿದರೆ ಜೋರ್ಡಾನ್‌ನಲ್ಲಿ ಕೋವಿಡ್‌ ಅಟ್ಟಹಾಸ ಅಷ್ಟೊಂದು ಇರಲಿಲ್ಲ. ಆದರೆ ಸಮಯಕ್ಕೆ ಸರಿಯಾಗಿ ಅಲ್ಲಿ ಲಾಕ್‌ಡೌನ್‌ ಮತ್ತು ಇತರ ನಿರ್ಬಂಧಗಳನ್ನು ವಿಧಿಸಲಾಗಿತ್ತು. ಒಟ್ಟು 784 ಪ್ರಕರಣಗಳು ಅಲ್ಲಿ ವರದಿಯಾಗಿದ್ದು, 571 ಮಂದಿ ಚೇತರಿಸಿ ಕೊಂಡಿದ್ದರು. ಮಾ.17ರ ಬಳಿಕ ಹಂತಹಂತವಾಗಿ ನಿರ್ಬಂಧಗಳನ್ನು ಸಡಿಲಗೊಳಿಸಲಾಗುತ್ತಿದೆ. ಆದರೂ ಅಲ್ಲಿ ಮಿಲಿಟರಿ ತುರ್ತುಪರಿಸ್ಥಿತಿ ಕಾನೂನುಗಳ ಜಾರಿ ಆಜ್ಞೆಯನ್ನು ಹಿಂಪಡೆದಿಲ್ಲ.

Advertisement

ಆರ್ಥಿಕತೆ ಹಿಂಜರಿತದ ಭೀತಿ
ಕೋವಿಡ್‌ ಅಷ್ಟೊಂದು ತಲ್ಲಣ ಮೂಡಿಸದಿದ್ದರೂ ಮಾರುಕಟ್ಟೆ ಗಳು ಬಂದ್‌ ಆದ್ದರಿಂದ ಅಲ್ಲಿ ಆರ್ಥಿಕತೆ ಮೇಲೆ ಕರಿಛಾಯೆ ಬಡಿಸಿದೆ. ಇದನ್ನು ಸರಿಪಡಿಸಲು ಇಲ್ಲಿನ ಆಡಳಿತ ಹೆಣಗಾಡುತ್ತಿದೆ.

ಮಾಜಿ ಉಪ ಪ್ರಧಾನಿ ಜವಾದ್‌ ಅನಾಮಿ ಅವರು, ಸರಕಾರದ ದುರ್ಬಲ ಆರ್ಥಿಕ ನೀತಿಗಳನ್ನು ಇಂತಹ ಸೋಂಕುಗಳು ಬಯಲು ಮಾಡಿವೆ. ಈ ವರ್ಷ ಜೋರ್ಡಾನ್‌ನ ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ಶೇ.3-4ರಷ್ಟು ಇಳಿಕೆಯಾಗಲಿದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next