Advertisement
ಆದರೆ ಮತ್ತೊಂದು ತುದಿಯಲ್ಲಿದ್ದ ನಾಯಕ ಇಮ್ರಾನ್ ಖಾನ್ ರನ್ ಓಡಲು ನಿರಾಕರಿಸುತ್ತಾರೆ. ಅಷ್ಟೇ ಸಾಕಿತ್ತು ಬ್ಯಾಕ್ ವರ್ಡ್ ಪಾಯಿಂಟ್ ನಲ್ಲಿದ್ದ ಆ ಫೀಲ್ಡರ್ ಗೆ. ಓಡಿ ಬಂದು ಚೆಂಡನ್ನು ಹಿಡಿದ ಆತ ಅಷ್ಟೇ ವೇಗದಲ್ಲಿ ಚಿಗರೆಯ ಮರಿಯಂತೆ ಹಾರಿ ವಿಕೆಟ್ ಮೇಲೆ ಎಗರಿಯಾಗಿತ್ತು. ಮೂರು ವಿಕೆಟ್ ಗಳು ನೆಲದ ಮೇಲೆ; ಇಂಜಮಮ್ ಉಲ್ ಹಕ್ ರನ್ ಔಟ್ ! ಆಗಷ್ಟೇ ವಿಶ್ವ ಕ್ರಿಕೆಟ್ ನ ಅತ್ಯುತ್ತಮ ಫೀಲ್ಡರ್ ಅಲ್ಲಿ ಎದ್ದು ನಿಂತಿದ್ದ .ಆತನೇ ಜೋನಾಥನ್ ನೈಲ್ ರೋಡ್ಸ್ ಅಥವಾ ಜಾಂಟಿ ರೋಡ್ಸ್.
Related Articles
Advertisement
ಇಂಜಮಮ್ ಉಲ್ ಹಕ್ ರನ್ ಔಟ್ ಜಾಂಟಿ ರೋಡ್ಸ್ ರನ್ನು ಪ್ರಸಿದ್ದಿಗೊಳಿಸಿದ್ದು ನಿಜ. ಆದರೆ ಅದೊಂದೇ ಅಲ್ಲ. ನಂತರದ ದಿನಗಳಲ್ಲಿ ಕೇವಲ ತನ್ನ ಫೀಲ್ಡಿಂಗ್ ನಿಂದಾಗಿಯೇ ಜಾಂಟಿ ತಂಡದಲ್ಲಿ ಸ್ಥಾನ ಪಡೆಯುತ್ತಿದ್ದರು. ಕೆಲವು ಅದ್ಭುತ ಕ್ಯಾಚ್ ಗಳು, ನಂಬಲಸಾಧ್ಯ ವೇಗದ ರನ್ ಔಟ್ ಗಳು, ಓರ್ವ ಅತ್ಯದ್ಭುತ ಕ್ಷೇತ್ರರಕ್ಷಕನಾಗಿ ಜಾಂಟಿ ಮಿಂಚತೊಡಗಿದರು.ಅಂದಮಾತ್ರಕ್ಕೆ ಜಾಂಟಿ ಕೇವಲ ಫೀಲ್ಡಿಂಗ್ ಮಾತ್ರವಲ್ಲ ಬ್ಯಾಟಿಂಗ್ ನಲ್ಲೂ ಮಿಂಚುತ್ತಿದ್ದರು. ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ ಗಳೆರಡರಲ್ಲೂ 35ಕ್ಕಿಂತ ಹೆಚ್ಚಿನ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. 2003ರಲ್ಲಿ ಕ್ರಿಕೆಟ್ ಗೆ ವಿದಾಯ ಹೇಳಿದ ಜ್ಯಾಂಟಿ ಸದ್ಯ ಫೀಲ್ಡಿಂಗ್ ಕೋಚ್ ಆಗಿ, ಕಾಮೆಂಟೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಭಾರತದಲ್ಲಿ ಐಪಿಎಲ್ ಆರಂಭವಾದ ದಿನಗಳಿಂದಲೂ ಮುಂಬೈ ಇಂಡಿಯನ್ಸ್ ತಂಡದ ಫೀಲ್ಡಿಂಗ್ ಕೋಚ್ ಆಗಿರುವ ಜಾಂಟಿಗೆ ಭಾರತವೆಂದರೆ ಅಚ್ಚುಮೆಚ್ಚು. ಅದೇ ಕಾರಣಕ್ಕೆ ತನ್ನ ಮಗಳಿಗೆ ‘ಇಂಡಿಯಾ’ ಎಂದು ಹೆಸರಿಟ್ಟಿದ್ದಾರೆ ಜಾಂಟಿ ದಂಪತಿ. ವಿಶ್ವ ಕ್ರಿಕೆಟ್ ನ ಇತಿಹಾಸದಲ್ಲಿ ಜಾಂಟಿ ರೋಡ್ಸ್ ನಂತಹ ಮತ್ತೊಬ್ಬ ಫೀಲ್ಡರ್ ಇದುವರೆಗೆ ಬಂದಿಲ್ಲ. ಎಷ್ಟು ದೂರದವರೆಗೂ ಡೈವ್ ಹೊಡೆಯಲೂ ಹಿಂಜರಿಯದ ಜಾಂಟಿ, ಕೇವಲ ಫೀಲ್ಡರ್ ಆಗಿ ಅದೆಷ್ಟೋ ಜನರ ಫೇವರೇಟ್ ಆದವರು. ಅದಕ್ಕೆ ಇರಬೇಕು ಈಗಲೂ ಕ್ಷೇತ್ರರಕ್ಷಣೆ ಎಂದು ಬಂದಾಗ ಮೊದಲು ನೆನಪಿಗೆ ಬರುವ ಹೆಸರು ಜಾಂಟಿ ರೋಡ್ಸ್.
*ಕೀರ್ತನ್ ಶೆಟ್ಟಿ ಬೋಳ