Advertisement

ಗಂಗಾ ನದಿಯಲ್ಲಿ ರೋಡ್ಸ್‌ ಸ್ನಾನ

07:50 AM Jan 23, 2018 | Team Udayavani |

ಹೃಷಿಕೇಶ: ಜಾಂಟಿ ರೋಡ್ಸ್‌ ಹೆಸರು ಕ್ರಿಕೆಟ್‌ ಜಗತ್ತಿನಲ್ಲಿ ಚಿರಪರಿಚಿತ. ತಮ್ಮ ಅಪ್ರತಿಮ ಕ್ಷೇತ್ರರಕ್ಷಣೆಯಿಂದಲೇ ಬ್ಯಾಟ್ಸ್‌ಮನ್‌ಗಳನ್ನು ನಡುಗಿಸಿದವರು. ಭಾರತದಲ್ಲಿ ಐಪಿಎಲ್‌ ಶುರುವಾದ ಮೇಲೆ ಬಹುತೇಕ ಇಲ್ಲೇ ನೆಲೆಯಾಗಿದ್ದಾರೆ. ಅವರ ಮಗಳು ಹುಟ್ಟಿದ್ದೂ ಭಾರತದಲ್ಲೇ.

Advertisement

ಭಾರತದೊಂದಿಗೆ ಇಷ್ಟೆಲ್ಲ ನಂಟು ಹೊಂದಿರುವ ಜಾಂಟಿ ಮೊನ್ನೆಯಷ್ಟೇ ಮಕರ ಸಂಕ್ರಾಂತಿಯಂದು ಉತ್ತರಾಖಂಡದ ಹೃಷಿಕೇಶದ ಗಂಗಾನದಿಯಲ್ಲಿ ಪುಣ್ಯಸ್ನಾನ ಮಾಡಿದ್ದಾರೆ. ಮೋಕ್ಷಕ್ಕೆ ನಿಮ್ಮದೇ ದಾರಿ ಕಂಡುಕೊಳ್ಳಿ ಎಂದು ಬರೆದುಕೊಂಡಿದ್ದಾರೆ. ಇದು ಭಾರತೀಯ ಅಭಿಮಾನಿಗಳ ಪ್ರೀತಿಗೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next