ನವದೆಹಲಿ: ಹಾಲಿವುಡ್ (Hollywood) ಚಿತ್ರರಂಗದ ಖ್ಯಾತ ನಿರ್ಮಾಪಕ, ಆಸ್ಕರ್ ವಿಜೇತ ಜಾನ್ ಲ್ಯಾಂಡೌ(63) ನಿಧನರಾಗಿದ್ದಾರೆ.
ಶುಕ್ರವಾರ (ಜು.5ರಂದು) ಅವರು ನಿಧನರಾಗಿದ್ದು, ಶನಿವಾರ ಮಾಧ್ಯಮಕ್ಕೆ ಈ ವಿಚಾರವನ್ನು ತಿಳಿಸಲಾಗಿದೆ.
ಹಾಲಿವುಡ್‌ನ ಖ್ಯಾತ ನಿರ್ದೇಶಕ ಜೇಮ್ಸ್ ಕ್ಯಾಮರೂನ್ (James Cameron) ಅವರ ದೀರ್ಘಾವಧಿಯ ನಿರ್ಮಾಪಕ ಪಾಲುದಾರರಾಗಿದ್ದ ಜಾನ್ ಲ್ಯಾಂಡೌ (Jon Landau) ಕಳೆದ ಕೆಲ ಸಮಯದಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು ಎಂದು ವರದಿಯಾಗಿದೆ.
ದೊಡ್ಡ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ಜಾನ್ ಲ್ಯಾಂಡೌ: ವಿಶ್ವ ಚಿತ್ರರಂಗದ ದೊಡ್ಡ ಸಿನಿಮಾವೆಂದೇ ಹೇಳಲಾಗುವ ಜೇಮ್ಸ್ ಕ್ಯಾಮರೂನ್ ಅವರ ʼಟೈಟಾನಿಕ್ʼ (Titanic) ಹಾಗೂ ʼಅವತಾರ್ʼ (Avatar) ಸಿನಿಮಾಗಳಿಗೆ ಜಾನ್ ಲ್ಯಾಂಡೌ ಸಹ ನಿರ್ಮಾಪಕರಾಗಿದ್ದರು.
ಜೇಮ್ಸ್ ಕ್ಯಾಮರೂನ್ ಅವರೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದ ಅವರು, ಹಾಲಿವುಡ್ ನಲ್ಲಿ ಇನ್ನು ಹಲವು ಸಿನಿಮಾಗಳಿಗೆ ನಿರ್ಮಾಣ ಮಾಡಿದ್ದರು.
ʼಹನಿ ಐ ಶ್ರಂಕ್ ದಿ ಕಿಡ್ಸ್ʼ (Honey, I Shrunk the Kids) ʼಡಿಕ್ ಟ್ರೇಸಿʼ (Dick Tracy) ಸಿನಿಮಾಗಳಿಗೆ ಬಂಡವಾಳ ಹಾಕಿದ್ದರು.
ತನ್ನ ಸ್ನೇಹಿತನ ನಿಧನಕ್ಕೆ “ಒಬ್ಬ ದೊಡ್ಡ ನಿರ್ಮಾಪಕ ಮತ್ತು ಒಬ್ಬ ಮಹಾನ್ ಮನುಷ್ಯ ನಮ್ಮನ್ನು ಅಗಲಿದ್ದಾರೆ” ಎಂದು ಜೇಮ್ಸ್ ಕ್ಯಾಮರೂನ್ ಹೇಳಿದ್ದಾರೆ.
ಅವರ ನಿಧನಕ್ಕೆ ಹಾಲಿವುಡ್ ನ ಖ್ಯಾತ ಕಲಾವಿದರು ಹಾಗೂ ನಿರ್ದೇಶಕ, ನಿರ್ಮಾಪಕರು ಸಂತಾಪ ಸೂಚಿಸಿದ್ದಾರೆ.