ಚಿಕ್ಕೋಡಿ: ಗಣೇಶ ಚತುರ್ಥಿಯ ಅಂಗವಾಗಿ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಸಂಸದ ಅಣ್ಣಾಸಾಹೇಬ ಜೊಲ್ಲೆ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಮನೆಯಲ್ಲಿ ವೈದ್ಯನ ರೂಪದಲ್ಲಿರುವ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಾಡಿ ವಿಶೇಷ ಪೂಜೆ ಸಲ್ಲಿಸಿದರು.
ಕೊವಿಡ್-19 ನ ಹಾವಳಿಯು ಇಡೀ ಮಾನವ ಜನಾಂಗವನ್ನೇ ತಲ್ಲಣಗೊಳಿಸಿದೆ. ಈ ಸಂದರ್ಭದಲ್ಲಿ ಕೋವಿಡ್-19 ವಾರಿಯರ್ಸ್ ಮಾತ್ರ ನಿಸ್ವಾರ್ಥವಾಗಿ, ತಮ್ಮ ಜೀವದ ಹಂಗನ್ನು ತೊರೆದು ಕೇವಲ ಜನಸೇವೆಯನ್ನೇ ಉಸಿರಾಗಿಸಿಕೊಂಡು, ನಮಗಾಗಿ ದುಡಿಯುತ್ತಾ, ಇಂದು ನಮ್ಮ ಪಾಲಿನ ದೇವತಾಸ್ವರೂಪಿಗಳಾಗಿದ್ದಾರೆ.
ಗಣೇಶ ಹಬ್ಬದ ಸುಸಂದರ್ಭವನ್ನು, ಈ ಧೀರರಿಗೆ ಧನ್ಯವಾದಗಳನ್ನು ಅರ್ಪಿಸಲು ಬಳಸಿದ್ದೇವೆ. ವೈದ್ಯನ ರೂಪದಲ್ಲಿರುವ ಗಣೇಶನ ಮೂರ್ತಿಯನ್ನು ಸಚಿವೆ ಹಾಗೂ ಸಂಸದರ ಮನೆಗೆ ತಂದು, ಕೋವಿಡ್-19 ವಾರಿಯರ್ ಗಳ ಚಿತ್ರಗಳೊಂದಿಗೆ ಪ್ರತಿಷ್ಟಾಪಿಸಿ, ವಿಧಿವತ್ತಾಗಿ ಪೂಜಿಸಿ, ಲೋಕದ ಸರ್ವ ವಿಘ್ನಗಳನ್ನೂ ನಿವಾರಿಸಲೇಂದು ಗಣಪತಿಯಲ್ಲಿ ಪ್ರಾರ್ಥಿಸಲಾಗಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.
ಸಂಸದ ಅಣ್ಣಾಸಾಹೇಬ ಜೊಲ್ಲೆ, ಬಸವಪ್ರಸಾದ ಜೊಲ್ಲೆ, ಜ್ಯೋತಿಪ್ರಸಾದ ಜೊಲ್ಲೆ ಇದ್ದರು.