Advertisement
ಸುಖ ಸಮೃದ್ಧಿಯನ್ನು ಸಂಕೇತವೇ ಜೋಕುಮಾರನ ಆಗಮನ ಎಂದು ಜಾನಪದರ ನಂಬಿಕೆಯಾಗಿದೆ.ಪ್ರತಿ ವರ್ಷ ಗಣೇಶ ಚತುರ್ಥಿಯ ನಂತರ ಜೋಕುಮಾರ ಸ್ವಾಮಿಯ ಜನನವಾಗುತ್ತದೆ ನಿತ್ಯ ಸುಮಂಗಲಿಯರು ಜೋಕುಮಾರಸ್ವಾಮಿಗೆ ಅಲಂಕರಿಸಿ ಬುಟ್ಟಿಯಲ್ಲಿಟ್ಟುಕೊಂಡು ಮನೆಮನೆಗೆ ಹೋಗಿ ಭಿಕ್ಷೆಯನ್ನು ಬೇಡುತ್ತಾರೆ ಜೋಕುಮಾರ ಹಾಡನ್ನ ಹಾಡುತ್ತಾರೆ.
ಜೋಕುಮಾರನ್ಮು ಬೇವಿನತಪ್ಪಲ ತುಂಬಿದ ಬುಟ್ಟಿಯಲ್ಲಿಟ್ಡುಕೊಂಡು ಮನೆ ಮನೆಗೆ ತೆರಳಿ ಜೋಕುಮಾರ ಬಂದಾಗ ಜೋಕಾಮಾರಾ ಎಂದು ಜೋಕಮಾರ ಗುಣಗಾನದ ಹಾಡು ಹಾಡುವ ಮಹಿಳೆಯರು ಜನರಿಂದ ನೈವೇದ್ಯ ಪಡೆದು. ಬೇವಿನ ಎಲೆಯಲ್ಲಿ ಕಾಡಿಗೆಯನ್ನು ನೀಡುತ್ತಾರೆ .
Related Articles
Advertisement
ಜಮೀನಿನಲ್ಲಿ ಹೊಳಿದರೆ ಉತ್ತಮ ಫಸಲು ನೀಡುತ್ತದೆ. ಮಕ್ಕಳು ಹಣೆಗೆ ಹಚ್ಚಿದರೆ ಕೆಟ್ಟ ದೃಷ್ಟಿ ಬೀಳುವುದಿಲ್ಲ ಎಂಬುದು ನಂಬಿಕೆ ಹೀಗೆ ಏಳುದಿನಗಳವರೆಗೆ ಊರು ಸುತ್ತುವ ಜೋಕುಮಾರ ಕುರಿತು ಜನಪದದಲ್ಲಿ ಅನೇಕ ಕಥೆಗಳು ಹಾಸುಹೊಕ್ಕಾಗಿವೆ. ಹುಣ್ಣೆಮೆ ಹಿಂದಿನ ರಾತ್ರಿ ಜೋಕುಮಾರನ ತಲೆ ಒಡೆದು ಹಳ್ಳಿಯಲ್ಲಿ ಇಡುವ ಪದ್ದತಿ ಇದೆ ಜೋಕುಮಾರ ಸ್ಬಾಮಿಯ ಆಚರಣೆಉತ್ತರ ಕರ್ನಾಟಕದಲ್ಲಿ ಆಚರಣೆಯಲ್ಲಿದೆ .