ಅಡ್ಡಡ್ಡ ಮಳೆ ಬಂದು, ದೊಡ್ಡ ದೊಡ್ಡ ಕೆರೆ ತುಂಬಿ,
ದೊಡ್ಡೆಮ್ಮಿ ಗೊಡ್ಡೆಮ್ಮಿ ಹೈನಾಗಿ
ಮಡಿವಾಳ ಕೇರಿ ಹೊಕ್ಕಾನ, ಮುಡಿತುಂಬ ಹೂ ಮುಡಿದಾನ…
ಆಡುತಾ ಬಂದ ಜೋಕುಮಾರ, ಬೇಡುತಾ ಬಂದ ಜೋಕುಮಾರ..
ಲೋಕವಲ್ಲ ಬೆಳಗಲಿ, ಆಕಳು ಹಾಲು ಕರೆಯಲಿ
ಮನೆಮನೆಗಳಲ್ಲಿ, ನಿಮ್ಮ ಮನೆಗೆ ಜಯ ಜಯ
ಧನ ಧಾನ್ಯ ನೀಡಿದ ಮನೆತನಕ್ಕೆ ಒಳಿತಾಗಲಿ…
Advertisement
ಉತ್ತರ ಕರ್ನಾಟಕದ ಭಾಗದಲ್ಲಿ ಜೋಕುಮಾರ ಹುಣ್ಣಿಮೆಯನ್ನು ಗ್ರಾಮೀಣ ಭಾಗದ ಜನರು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಾರೆ. ಭಾದ್ರಪದ ಮಾಸ ಶುಕ್ಲ ಪಕ್ಷದ ಚತುರ್ಥಿ ದಿನದಂದು ಗಣೇಶನ ಮೂರ್ತಿ ಪ್ರತಿಷ್ಠಾಪಿಸಲಾಗುತ್ತದೆ. 5 ದಿನಗಳ ಅನಂತರ ಗಣೇಶನನ್ನು ವಿಸರ್ಜನೆ ಮಾಡಿದ ಬಳಿಕ ಜೋಕುಮಾರ ಕುಂಬಾರ ಮನೆಯಲ್ಲಿ ಜನಿಸಿ, ತಳವಾರ ಮನೆಯಲ್ಲಿ ಮೇರೆದಾಡಿ, ಕೇರಿಯಲ್ಲಿ ಜಿಗದಾಡಿ ಕೊನೆಗೆ ದಾಸರ ಮನೆಯಲ್ಲಿ ಮರಣ ಹೊಂದುತ್ತಾನೆ ಎನ್ನುವ ಪ್ರತೀತಿ ಇದೆ. ಪೂರ್ವಜರು ಆಚರಿಸುತ್ತಾ ಬಂದಂತಹ ಧಾರ್ಮಿಕ ಕಾರ್ಯ ಕ್ರಮಗಳು ಇಂದಿಗೂ ನಮ್ಮಲ್ಲಿ ಆಚರಿಸಲಾಗುತ್ತಿದೆ. ಅವು ಗಳಲ್ಲಿ ಒಂದೆಂದರೆ ಜೋಕ್ಯಾನ ಹುಣ್ಣಿಮೆ. ತಳವಾರ ಸಮುದಾಯದ ಜೋಕುಮಾರನನ್ನು ಮಣ್ಣಿನಿಂದ ಗೊಂಬೆಯ ರೂಪದಲ್ಲಿ ಅಗಲವಾದ ಮುಖ, ಹುರಿಮೀಸೆ, ಗಿಡ್ಡ ಕಾಲುಗಳು, ಕೈಯಲ್ಲಿ ಕತ್ತಿ ಹಿಡಿದಿರುವಂತೆ ಮೂರ್ತಿ ತಯಾರಿಸಿ ಬೆಣ್ಣೆ, ಬೇವಿನ ತುಪ್ಪ, ಬೇವಿನ ಎಲೆಯ ಮೂಲಕ ಬುಟ್ಟಿಯಲ್ಲಿ ಇಟ್ಟು ಅಲಂಕರಿಸಿ ಹೆಣ್ಣುಮಕ್ಕಳು ತಲೆಮೇಲೆ ಹೊತ್ತು ಮನೆ ಮನೆಗೆ ಹೊತ್ತುಯ್ಯುತ್ತಾರೆ.
Related Articles
Advertisement
- ಅಕ್ಷತಾ ನಂದಿಕೇಶ್ವರಮಠ, ವಿಜಯಪುರ