Advertisement
ವಿಧಾನಸಭೆಯಲ್ಲಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸಂತಾಪ ನಿರ್ಣಯ ಮಂಡಿಸಿದರು.
Related Articles
ವಿಧಾನ ಪರಿಷತ್ತಿನಲ್ಲಿ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರಿಗೆ ನುಡಿನಮನ ಸಲ್ಲಿಸಲಾಯಿತು. ಅಧಿವೇಶನದ ಆರಂಭದ ದಿನ ಅಗಲಿದ ಗಣ್ಯರು ಮತ್ತು ಸಾಧಕರಿಗೆ ಸದನದಲ್ಲಿ ಸಂತಾಪ ಸೂಚಿಸುವುದು ಸಂಪ್ರದಾಯ. ಆದರೆ ಸಿದ್ದೇಶ್ವರ ಸ್ವಾಮೀಜಿಯವರಿಗೆ ಶ್ರದ್ಧಾಂಜಲಿ ಬದಲಿಗೆ ನುಡಿನಮನ ಸಲ್ಲಿಸಿದ್ದು ಪಕ್ಷಾತೀತ ಪ್ರಶಂಸೆ ವ್ಯಕ್ತವಾಯಿತು. ಆಗಲಿದ ಗಣ್ಯರಿಗೆ ಸಂತಾಪ ಸೂಚಿಸಿದ ಬಳಿಕ ಸಭಾಪತಿ ಬಸವರಾಜ ಹೊರಟ್ಟಿಯವರು ಸಿದ್ದೇಶ್ವರ ಸ್ವಾಮೀಜಿಯವರಿಗೆ ನುಡಿನಮನ ಪ್ರಸ್ತಾವವನ್ನು ಸದನದ ಮುಂದೆ ಮಂಡಿಸಿದರು.
Advertisement
ಸಿದ್ದೇಶ್ವರ ಶ್ರೀಗಳು ಬದುಕು ಶ್ರೀಮಂತವಾಗಿರಬೇಕೆಂದು ಸದಾ ಹೇಳುತ್ತಿದ್ದರು. ಆದರೆ ಅದು ಲೌಕಿಕ ಶ್ರೀಮಂತಿಕೆಯಲ್ಲ. ಈ ತರದ ಸಂತರೊಬ್ಬರು ನಮ್ಮೊಂದಿಗೆ ಜೀವಿಸಿದ್ದರು ಎಂದು ಹೇಳಿದರೆ ಇನ್ನು ಹತ್ತು ಹದಿನೈದು ವರ್ಷದ ನಂತರ ಜನ ನಂಬುವುದು ಕಷ್ಟ. ನನಗೆ ಆಸ್ತಿಯೂ ಬೇಡ, ಅಸ್ತಿಯೂ ಬೇಡ ಎಂದು ಹೇಳಿದರು. ಹೀಗಾಗಿ ತಮ್ಮ ಸ್ಮಾರಕವನ್ನೂ ಕಟ್ಟುವುದು ಬೇಡ ಎಂದು ಅವರು ಸೂಚಿಸಿದ್ದರು ಎಂದು ಹೇಳಿದರು.
ಪರಿಷತ್ವಿಧಾನ ಪರಿಷತ್ತಿನಲ್ಲಿ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರಿಗೆ ನುಡಿನಮನ ಸಲ್ಲಿಸಲಾಯಿತು.
ಅಧಿವೇಶನದ ಆರಂಭ ದಿನ ಆಗಲಿಗ ಗಣ್ಯರು ಮತ್ತು ಸಾಧಕರಿಗೆ ಸದನದಲ್ಲಿ ಸಂತಾಪ ಸೂಚಿಸುವುದು ಸಂಪ್ರಾದಾಯ. ಆದರೆ, ಸಿದ್ದೇಶ್ವರ ಸ್ವಾಮೀಜಿಯವರಿಗೆ ಶ್ರದ್ಧಾಂಜಲಿ ಬದಲಿಗೆ ನುಡಿನಮನ ಸಲ್ಲಿಸಿದ್ದು ಪಕ್ಷಾತೀತ ಪ್ರಶಂಸೆ ವ್ಯಕ್ತವಾಯಿತು. ಆಗಲಿದ ವಿವಿಧ ಗಣ್ಯರಿಗೆ ಸಂತಾಪ ಸೂಚಿಸಿದ ಬಳಿಕ ಸಭಾಪತಿ ಬಸವರಾಜ ಹೊರಟ್ಟಿಯವರು ಸಿದ್ದೇಶ್ವರ ಸ್ವಾಮೀಜಿಯವರಿಗೆ ನುಡಿನಮನ ಪ್ರಸ್ತಾಪವನ್ನು ಸದನದ ಮುಂದೆ ಮಂಡಿಸಿದರು. ಸಿದ್ದೇಶ್ವರ ಸ್ವಾಮೀಜಿಯವರು ಅಂತಿಮ ಅಭಿವಾದನ ಪತ್ರದ ಆಪೇಕ್ಷೆಯಂತೆ ಹಾಗೂ ಶ್ರೀಗಳ ಅಸಂಖ್ಯಾತ ಭಕ್ತಾದಿಗಳ ಇಚ್ಛೆಯಂತೆ ಇಂತಹ ಮಹಾತ್ಮರಿಗೆ ಶ್ರದ್ಧಾಂಜಲಿ ಬೇಡ, ಕೇವಲ ನುಡಿ ನಮನ ಸಾಕು’ ಎಂದು ಭಾವಿಸಿ ಈ ಸದನದ ಮುಂದೆ ಪ್ರಸ್ತಾಪ ಮಂಡಿಸಿ ನುಡಿ ನಮನದ ಮೂಲಕ ನನ್ನ ಭಾವನೆಗಳನ್ನು ವ್ಯಕ್ತಪಡಿಸಿದ್ದೇನೆ ಎಂದರು. ನುಡಿನಮನ ಪ್ರಸ್ತಾಪ ಬೆಂಬಲಿಸಿ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ, ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ಜೆಡಿಎಸ್ ನಾಯಕ ಭೋಜೇಗೌಡ, ಸದಸ್ಯರಾದ ತೇಜಸ್ವಿನಿ ರಮೇಶ್, ಹಣಮಂತ ನಿರಾಣಿ, ಸಲೀಂ ಅಹ್ಮದ್, ರುದ್ರೇಗೌಡ, ಅ. ದೇವೇಗೌಡ ಮತ್ತಿತರರು ಮಾತನಾಡಿದರು. ಗಣ್ಯರಿಗೆ ಶ್ರದ್ಧಾಂಜಲಿ
ಇದಕ್ಕೂ ಮೊದಲು ಮಾಜಿ ಸಚಿವ ಡಾ. ಎಚ್.ಡಿ. ಲಮಾಣಿ, ಹಿರಿಯ ಸಾಹಿತಿ ಡಾ. ಎಚ್. ಚಂದ್ರಶೇಖರ್, ಲೇಖಕಿ ಸಾರಾ ಅಬೂಬಕ್ಕರ್, ಶಿಕ್ಷಣ ತಜ್ಞ ಪಾಂಡುರಂಗ ಶೆಟ್ಟಿ, ಹಿರಿಯ ಗಮಕಿ ಹಾರ್ಯಾಡಿ ಚಂದ್ರಶೇಖರ್ ಕೆದ್ಲಾಯ, ಭಾಷಾ ವಿಜ್ಞಾನಿ ಕೆ.ವಿ. ತಿರುಮಲೇಶ್, ಗಾಯಕಿ ವಾಣಿ ಜಯರಾಂ, ಚಿತ್ರ ಕಲಾವಿದ ಬಿ.ಕೆ.ಎಸ್ ವರ್ಮ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.