Advertisement
ಆದರೆ ಇಂದು ಮನುಷ್ಯನಲ್ಲಿ ನಾನು ನನ್ನದು ಎಂಬ ಸ್ವಾರ್ಥಭಾವನೆ ಮನೆ ಮಾಡುತ್ತಿರುವ ಕಾರಣ ಅವಿಭಕ್ತ ಕುಟುಂಬಗಳು ಕಣ್ಮರೆಯಾಗುತ್ತಿದೆ ಎಂದು ಕೆರೆಗೋಡಿ ರಂಗಾಪುರ ಸುಕ್ಷೇತ್ರದ ಶ್ರೀಗುರುಪರದೇಶಿ ಕೇಂದ್ರ ಸ್ವಾಮೀಜಿ ವಿಷಾದಿಸಿದರು.ತಾಲೂಕಿನ ಕಣಕಟ್ಟೆ ಹೋಬಳಿ ರಾಂಪುರ ತಾಂಡ್ಯದಲ್ಲಿ ಆಯೋಜಿಸಿದ್ದ ದೊಡ್ಡಮ್ಮ ದೇವಿಯವರನೂತನ ವಿಗ್ರಹ ಪ್ರತಿಷ್ಠಾಪನೆ ದೇವಾಲಯದ ಉದ್ಘಾಟನಾ ಸಮಾರಂಭದ ಧಾರ್ಮಿಕ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
Related Articles
Advertisement
ಮುಂದೆ ಗುರಿ ಹಿಂದೆ ಗುರು ಬದುಕಿನಲ್ಲಿ ಯಾರು ಹೊಂದಿರುತ್ತಾರೋ ಅವರ ಬದುಕು ಇತರರಿಗೆ ಮಾದರಿಯಾಗಿರುತ್ತದೆ. ಹಾಗಾಗಿ ಗುರು ಶಿಷ್ಯರ ಸಂಬಂಧ ದೈವ ಸಂಬಂಧ ಎಂದು ಹೇಳಿದರು.
ಭಕ್ತರು ಮಠದ ಆಸ್ತಿ: ಭಕ್ತ ದೈವ ಅಧೀನ ದೈವ ಭಕ್ತ ಅದೀನ ಅದೇ ರೀತಿ ಮಠ ಮಂದಿರಗಳು ಭಕ್ತರ ಆಸ್ತಿಯಾದರೆ ಭಕ್ತರು ಮಠದ ಆಸ್ತಿ ಇದ್ದಂತೆ. ಯಾವುದೇ ಮಠ ಮಂದಿರದ ಗುರುವಿನ ಕಾಯಕವೆಂದರೆ ಜಾತಿ, ಮತ, ಧರ್ಮ, ಬಡವ-ಬಲ್ಲಿಗ, ಮೇಲು-ಕೀಳು ನೋಡದೆ ಎಲ್ಲಾ ಭಕ್ತರನ್ನು ಒಪ್ಪಿಕೊಳ್ಳುವ ಹಾಗೂ ಅಪ್ಪಿ ಕೊಳ್ಳುವ ಆ ಮೂಲಕ ಭಕ್ತರ ಒಳಿತಿಗೆ ಮಾರ್ಗದರ್ಶನ ನೀಡುವ ಮಹತ್ತರ ಜವಬ್ದಾರಿ ಮಠಾಧೀಶರ ಮೇಲಿದೆ ಎಂದು ಕಿವಿಮಾತು ಹೇಳಿದರು.
ಸ್ವಾಭಿಮಾನದ ಬದುಕು ನಡೆಸುವವರು ಬಂಜಾರರು: ಚಿತ್ರದುರ್ಗ ಬಂಜಾರ ಗುರು ಪೀಠದ ಸರ್ದಾರ್ ಸೇವಾ ಲಾಲ್ ಸ್ವಾಮೀಜಿ ಮಾತನಾಡಿ, ಇಡೀ ಭಾರತ ದೇಶದಲ್ಲೆ ಬಂಜಾರ ಸಮಾಜಶ್ರೇಷ್ಠತೆಯನ್ನು ಪಡೆದಿದೆ ಬಂಜಾರರು ಪ್ರಕೃತಿ ಪ್ರಿಯರು ಯಾವುದೇ ಮೂಲ ಸೌಲಭ್ಯವಿಲ್ಲದ ಗ್ರಾಮ ಗಳಲ್ಲಿ ಬಂಜಾರ ಸಮಾಜದವರು ಬದುಕುತ್ತಿದ್ದಾರೆ.ಯಾರಿಗೂ ತೊಂದರೆ ಕೊಡದ ಸಮಾಜವೆಂದರೆ ಬಂಜಾರ ಸಮಾಜವಾಗಿದೆ. ಗ್ರಾಮಗಳಿಂದ ಹೊರಗೆ ತಂಡೋಪ ತಂಡವಾಗಿ ವಾಸಿಸುತ್ತಿರುವುದರಿಂದಬಂಜಾ ರರು ವಾಸಿಸುವ ಗ್ರಾಮಗಳನ್ನು ತಾಂಡ್ಯ ಎಂದು ಕರೆಯಾಗುತ್ತದೆ. ಬಂಜಾರರು ಸ್ವಾಭಿಮಾನದ ಬದುಕು ನಡೆಸುವ ಸಮಾಜವಾಗಿದೆ ಎಂದರು.
ಮಾಡಾಳು ವಿರಕ್ತಮಠದ ರುದ್ರಮುನಿ ಸ್ವಾಮೀಜಿ, ಕುಪ್ಪೂರು ಗದ್ದಿಗೆ ಮಠದ ಯತೀಶ್ವರ ಶಿವಾಚಾರ್ಯ ಸ್ವಾಮೀಜಿ, ತಿಪಟೂರು ತಾಲೂಕು ಹೊನ್ನವಳ್ಳಿ ಗುರುಕರಿಸಿದ್ದೇಶ್ವರ ಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ, ಬಳ್ಳಾರಿ ಜಿಲ್ಲೆಯ ಕೊಟ್ಟೂರು ಬಸಾಪುರತಾಂಡ್ಯದ ಶಕ್ತಿ ಬಂಜಾರ ಗುರುಪೀಠದ ಶಿವಪ್ರಕಾಶ ಮಹಾರಾಜ್ ಸ್ವಾಮೀಜಿ, ರಾಂಪುರ ಗ್ರಾಪಂ ಅಧ್ಯಕ್ಷಸುರೇಶ, ಮಾಡಾಳು ಗ್ರಾಪಂ ಸದಸ್ಯ ಬಸವರಾಜ್, ಸುಕ್ಷೇತ್ರ ಅಭಿಮಾನಿಗಳ ಸಂಘದ ಅಧ್ಯಕ್ಷ ಓಂಕಾರಮೂರ್ತಿ ಹಾಗೂ ಎಸ್.ಪಿ.ಎಸ್.ವಿದ್ಯಾಪೀಠದಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಯು.ಎಸ್. ಬಸವರಾಜು ಉಪಸ್ಥಿತರಿದ್ದರು