Advertisement

ನದಿಗೆ ಸೇರುತ್ತಿದೆ ಹೊಟೇಲ್‌ ತ್ಯಾಜ್ಯ ನೀರು

09:48 PM Apr 09, 2019 | mahesh |

ಬೆಳ್ತಂಗಡಿ: ಚಾರ್ಮಾಡಿ ಗ್ರಾಮದ ಗೋಳಿಕಟ್ಟೆ ಸಮೀಪ ಹೊಟೇಲ್‌ ಒಂದರ ತ್ಯಾಜ್ಯ ನೀರು ಸಮೀಪದ ನದಿಗೆ ಸೇರುತ್ತಿರುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಗ್ರಾ.ಪಂ.ಗೆ ದೂರು ನೀಡಿದರೆ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.

Advertisement

ಜನವಸತಿ ಪ್ರದೇಶದಲ್ಲಿರುವ ಹೊಟೇಲ್‌ ತ್ಯಾಜ್ಯ ಹಾಗೂ ಶೌಚಾಲಯದ ನೀರನ್ನು ನೇರವಾಗಿ ತೋಡಿನ ಮೂಲಕ ನೇತ್ರಾವತಿ ನದಿಗೆ ಬಿಡಲಾಗುತ್ತಿದೆ. ಸ್ಥಳೀಯರು ರೋಗ ಭೀತಿಯಿಂದ ಮಾಲಕರ ಗಮನಕ್ಕೆ ತಂದರೆ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಕುರಿತು ಸ್ಥಳೀಯ 25 ಮಂದಿ ಸಹಿಯೊಂದಿಗೆ ಗ್ರಾ.ಪಂ., ತಾ.ಪಂ. ಅಧಿಕಾರಿಗಳಿಗೆ, ಜಿಲ್ಲಾಧಿಕಾರಿ, ಚುನಾವಣ ಅಧಿಕಾರಿಗಳಿಗೆ ದೂರು ನೀಡಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಮೀನಿನ ತ್ಯಾಜ್ಯ, ಶೌಚಾಲಯದ ನೀರಿನಿಂದ ಸುತ್ತಮುತ್ತ ಗಬ್ಬು ನಾರುತ್ತಿದ್ದು, ಸೊಳ್ಳೆ ಉತ್ಪತ್ತಿ ತಾಣವಾಗಿದೆ. ಪರಿಸರ ಸುತ್ತ ಜನವಸತಿ ಇರುವುದರಿಂದ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿದೆ ಎಂದು ಸ್ಥಳೀಯರಾದ ಪವನ್‌ಕುಮಾರ್‌, ನಿತಿನ್‌ ಕುಮಾರ್‌, ರಾಜು, ಜನಾರ್ದನ, ಸತೀಶ್‌, ಜಯಂತ, ಸುರೇಶ್‌, ಮೋನಪ್ಪ, ದಾಮೋದರ್‌ ಮತ್ತಿತರರು ಅಳಲು ತೋಡಿಕೊಂಡಿದ್ದಾರೆ.

ತ್ಯಾಜ್ಯ ನೀರನ್ನು ತೋಟದ ತೋಡಿನ ಮೂಲಕ ನದಿಗೆ ಬಿಟ್ಟಿರುವುದು.

Advertisement

Udayavani is now on Telegram. Click here to join our channel and stay updated with the latest news.

Next