Advertisement

BJP: ಮೋದಿ ಮತ್ತೆ ಪ್ರಧಾನಿಯಾಗಲಿ ಎಂಬ ಉದ್ದೇಶದಿಂದ ಬಿಜೆಪಿ ಸೇರ್ಪಡೆ: ಶೆಟ್ಟರ್‌

08:39 PM Jan 28, 2024 | Team Udayavani |

ತುಮಕೂರು: ಹತ್ತು ವರ್ಷಗಳ ದೇಶದ ಪ್ರಧಾನಿಗಳಾಗಿ ಮೋದಿಯವರು ಸಮರ್ಥ ಆಡಳಿತ ನೀಡಿದ್ದಾರೆ, ಅವರು ಮತ್ತೆ ಈ ದೇಶದ ಪ್ರಧಾನಿಗಳಾಗಬೇಕು ಎನ್ನುವ ಉದ್ದೇಶದಿಂದ ನಾನು ಮತ್ತೆ ನಮ್ಮ ಮನೆಗೆ ಬಂದಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ತಿಳಿಸಿದರು.

Advertisement

ನಗರದ ಸಿದ್ಧಗಂಗಾ ಮಠಕ್ಕೆ ಭಾನುವಾರ ಭೇಟಿ ನೀಡಿ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಪಡೆದು, ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಬಿಜೆಪಿ ಕಳೆದ 34 ವರ್ಷಗಳಿಂದ ನಾನು ಸಂಘಟನೆ ಮಾಡಿದಂತಹ ಮನೆ. ಹಾಗಾಗಿ ನಮ್ಮ ಮನೆಗೆ ವಾಪಸ್ಸಾಗಿದ್ದೇನೆ ಎಂದು ಪ್ರತಿಕ್ರಿಯಿಸಿದರು.
ಕಾಂಗ್ರೆಸ್‌ ಪಕ್ಷದ ನಾಯಕರು ನನ್ನನ್ನು ಅತ್ಯಂತ ಗೌರವಯುತವಾಗಿ ನಡೆಸಿಕೊಂಡಿದ್ದಾರೆ. ಸೂಕ್ತ ಸ್ಥಾನಮಾನವನ್ನೂ ನೀಡಿದ್ದರು. ಕಾಂಗ್ರೆಸ್‌ ಬಿಡಲಿಕ್ಕೆ ಯಾವುದೇ ರೀತಿಯ ಕಾರಣಗಳಿಲ್ಲ. ನನ್ನನ್ನು ಗೌರವಯುತವಾಗಿ ನಡೆಸಿ ಕೊಂಡ ಕಾಂಗ್ರೆಸ್‌ ನಾಯಕರಿಗೆ ಧನ್ಯವಾದ ಹೇಳುತ್ತೇನೆ ಎಂದ ಅವರು, ನಮ್ಮ ಪಕ್ಷದ ಕಾರ್ಯಕರ್ತರ ಭಾವನೆಗಳಿಗೆ ಸ್ಪಂದಿಸಿ ಮರು ಸೇರ್ಪಡೆಯಾಗಿದ್ದೇನೆ ಎಂದು ಪುನರುಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next