Advertisement

NCP ಚಿಹ್ನೆಯಲ್ಲೇ ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ: ಡಿಸಿಎಂ ಅಜಿತ್ ಪವಾರ್

05:41 PM Jul 02, 2023 | Team Udayavani |

ಮುಂಬಯಿ: ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರು, ದೇಶದ ಅಭಿವೃದ್ಧಿಗಾಗಿ ಏಕನಾಥ್ ಶಿಂಧೆ ಸರ್ಕಾರದ ಭಾಗವಾಗಲು ತಮ್ಮ ಪಕ್ಷ ನಿರ್ಧರಿಸಿದೆ ಎಂದು ಭಾನುವಾರ ಹೇಳಿದ್ದಾರೆ.

Advertisement

ಪ್ರಮಾಣವಚನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವವನ್ನು ಶ್ಲಾಘಿಸಿದರು. ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದಲ್ಲಿ (ಎನ್‌ಸಿಪಿ) ಯಾವುದೇ ಒಡಕು ಇಲ್ಲ ಎಂದು ಹೇಳಿದ ಅವರು, ಮುಂದಿನ ಎಲ್ಲಾ ಚುನಾವಣೆಗಳಲ್ಲಿ ಎನ್‌ಸಿಪಿ ಹೆಸರು ಮತ್ತು ಚಿಹ್ನೆಯ ಮೇಲೆ ಸ್ಪರ್ಧಿಸುವುದಾಗಿ ಹೇಳಿದರು.

ಬಿಜೆಪಿಯೊಂದಿಗೆ ಅಧಿಕಾರ ಹಂಚಿಕೊಳ್ಳುವ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡ ಅವರು, ಪಕ್ಷದ ಎಲ್ಲಾ ಚುನಾಯಿತ ಪ್ರತಿನಿಧಿಗಳು ಶಿಂಧೆ ಸರ್ಕಾರಕ್ಕೆ ಸೇರುವ ನಿರ್ಧಾರವನ್ನು ಬೆಂಬಲಿಸಿದ್ದಾರೆ.ಕೆಲವು ಶಾಸಕರು ಹೊರಗಿರುವ ಕಾರಣ ಅವರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ ಆದರೆ ನಾನು ಅವರೆಲ್ಲರ ಜೊತೆ ಮಾತನಾಡಿದೆ ಮತ್ತು ಅವರು ನಮ್ಮ ನಿರ್ಧಾರವನ್ನು ಒಪ್ಪಿದ್ದಾರೆ ಎಂದು ಪವಾರ್ ಹೇಳಿದರು.

“ನಾವು ಶಿವಸೇನೆಯೊಂದಿಗೆ ಹೋಗಬಹುದಾದರೆ, ನಾವು ಬಿಜೆಪಿಯೊಂದಿಗೂ ಹೋಗಬಹುದು. ನಾಗಾಲ್ಯಾಂಡ್‌ನಲ್ಲೂ ಅದೇ ಸಂಭವಿಸಿದೆ. ಒಟ್ಟಾರೆ ಮತ್ತು ಸಮಗ್ರ ಅಭಿವೃದ್ಧಿಯನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ನಮಗೆ ಆಡಳಿತದ ಅಪಾರ ಅನುಭವವಿದ್ದು, ಅದನ್ನು ಒಳ್ಳೆಯದಕ್ಕೆ ಬಳಸಿಕೊಳ್ಳಬಹುದು ಎಂದರು.

ಒಂದೆರಡು ದಿನಗಳಲ್ಲಿ ಕ್ಯಾಬಿನೆಟ್ ಖಾತೆಗಳನ್ನು ಪ್ರಕಟಿಸಲಾಗುವುದು ಮತ್ತು ನಾವು ತತ್ ಕ್ಷಣ ಅದರ ಕೆಲಸವನ್ನು ಪ್ರಾರಂಭಿಸುತ್ತೇವೆ ಎಂದು ಪವಾರ್ ಹೇಳಿದರು.

Advertisement

ಒತ್ತಡದಲ್ಲಿ ನಿರ್ಧಾರ ಕೈಗೊಂಡಿಲ್ಲ

ಸಚಿವ ಛಗನ್ ಭುಜಬಲ್ ಮಾತನಾಡಿ “ನಾವು ಮೂರನೇ ಪಕ್ಷವಾಗಿ ಸರ್ಕಾರಕ್ಕೆ ಸೇರಿದ್ದೇವೆ. ನಾವು ಪಕ್ಷವನ್ನು ಒಡೆದಿದ್ದೇವೆ ಎಂದು ಕೆಲವರು ಹೇಳುತ್ತಿದ್ದಾರೆ ಆದರೆ ಅದು ಸರಿಯಲ್ಲ. ನಾವು ಎನ್‌ಸಿಪಿಯಾಗಿ ಇಲ್ಲಿಗೆ ಬಂದಿದ್ದೇವೆ. ನಾವು ಹಲವಾರು ಸಂದರ್ಭಗಳಲ್ಲಿ ಮೋದಿ ಸರ್ಕಾರವನ್ನು ಟೀಕಿಸಿದ್ದೇವೆ ಆದರೆ ಇಂದು ಅವರ ಕೈಯಲ್ಲಿ ದೇಶ ಸುರಕ್ಷಿತವಾಗಿದೆ ಎಂಬುದು ನಿಜ” ಎಂದರು.

ನಮ್ಮ ಮೇಲೆ ಕೇಸುಗಳಿದ್ದು, ಒತ್ತಡಕ್ಕೆ ಸಿಲುಕಿರುವುದರಿಂದ ನಾವು ಇಲ್ಲಿದ್ದೇವೆ ಎಂದು ಹೇಳುತ್ತಿದ್ದಾರೆ. ನಮ್ಮಲ್ಲಿ ಹೆಚ್ಚಿನವರು ಯಾವುದೇ ಪ್ರಕರಣಗಳನ್ನು ಹೊಂದಿಲ್ಲ, ಕೆಲವರ ವಿರುದ್ಧ ತನಿಖೆಗಳು ನಡೆಯುತ್ತಿವೆ. ನ್ಯಾಯಾಲಯವು ನಮ್ಮ ವಿರುದ್ಧ ಯಾವುದೇ ಬಲವಂತದ ಕ್ರಮಗಳನ್ನು ತೆಗೆದುಕೊಂಡಿಲ್ಲ ಏಕೆಂದರೆ ನಮ್ಮ ವಿರುದ್ಧ ಯಾವುದೇ ಕಾಂಕ್ರೀಟ್ ಇಲ್ಲ. ಹೀಗಾಗಿ ನಾವು ಒತ್ತಡದಲ್ಲಿ ಇದ್ದೇವೆ ಎಂದು ಹೇಳುವುದು ಸರಿಯಲ್ಲ ಎಂದು ಭುಜಬಲ್ ಹೇಳಿದರು.

ಪವಾರ್ ಅವರು ಉಪಮುಖ್ಯಮಂತ್ರಿಯಾಗಿಪ್ರಮಾಣ ವಚನ ಸ್ವೀಕರಿಸಿದ್ದು, ಪಕ್ಷದ ಎಂಟು ಶಾಸಕರು ಶಿಂಧೆ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next