Advertisement
ಜಿಲ್ಲಾಡಳಿತ, ನೆಹರೂ ಯುವ ಕೇಂದ್ರ, ಯುವ ಸಬಲೀ ಕರಣ ಮತ್ತು ಕೀಡಾ ಇಲಾಖೆ, ಜಿಲ್ಲಾ ಯುವ ಒಕ್ಕೂಟ ಹಾಗೂ 3 ತಾಲೂಕು ಯುವ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆದ ಜಿಲ್ಲಾ ಯುವ ಸಮಾವೇಶ, ಕ್ರೀಡಾ ಸಾಮಾಗ್ರಿ ವಿತರಣೆ, ಸಂಘ ಪ್ರಶಸ್ತಿ, ಯುವ ಕೃತಿ ಪ್ರದರ್ಶನ ಹಾಗೂ ಜಿಲ್ಲಾ ಯುವ ಸಮ್ಮೇಳನ, ಯುವ ಕಾರ್ಯಾಗಾರ, ಯುವ ಪ್ರಶಸ್ತಿ ಪ್ರಧಾನ, ಸಹಾಯಧನ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ದೇಶದಲ್ಲಿ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಯುವ ಶಕ್ತಿಯು ದೇಶದ ಶಕ್ತಿಯಾಗಿದ್ದು, ಅಭಿವೃದ್ಧಿ ಪರ ಚಿಂತನೆ ಮಾಡಬೇಕಾಗಿದೆ. ರಾಷ್ಟ್ರೀಯತೆ ಬೆಳೆಸಿಕೊಳ್ಳುವುದ ರೊಂದಿಗೆ ಯುವಶಕ್ತಿ ಜಾಗೃತರಾಗಬೇಕು ಎಂದು ಬೋಪಯ್ಯ ಕರೆ ನೀಡಿದರು.
Related Articles
Advertisement
ಯುವ ಸಂಘಗಳಿಗೆ ಪ್ರಶಸ್ತಿ, ಕ್ರೀಡಾ ಸಾಮಗ್ರಿ ವಿತರಿಸಲಾಯಿತು. ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷರಾದ ಮೂಕೊಂಡ ಶಶಿ ಸುಬ್ರ ಮಣಿ, ತಾ.ಪಂ. ಅಧ್ಯಕ್ಷರಾದ ಶೋಭಾ ಮೋಹನ್, ನೆಹರೂ ಯುವ ಕೇಂದ್ರದ ಜಿಲ್ಲಾ ಸಮನ್ವಯಾಧಿಕಾರಿ ನಟರಾಜು, ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಕೆ.ಸಿ. ದಯಾನಂದ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಜಯಲಕ್ಷ್ಮೀ ಬಾಯಿ, ತಾಲೂಕು ಯುವ ಒಕ್ಕೂಟದ ಅಧ್ಯಕ್ಷರಾದ ರವಿ, ಇತರರು ಇದ್ದರು. ನವೀನ್ ದೇರಳ, ಸಾ.ಬಾ. ಸುಬ್ರಮಣಿ ನಿರೂಪಿಸಿದರು. ಎಂ.ಬಿ. ಜೋಯಪ್ಪ ಸ್ವಾಗತಿಸಿದರು.
ಪ್ರಶಸ್ತಿ ಪ್ರಧಾನ ಈ ಬಾರಿ ಪೊನ್ನಂಪೇಟೆಯ ಚೈತನ್ಯ ಕಲಾ ಮಂಡಳಿ ಯು ನೆಹರು ಯುವ ಕೇಂದ್ರ ನೀಡುವ ಉತ್ತಮ ಸಂಘ ಪ್ರಶಸ್ತಿಯನ್ನು ಪಡೆಯಿತು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ನೀಡುವ ಉತ್ತಮ ಸಂಘ ಪ್ರಶಸ್ತಿಯನ್ನು ಚೆಂಬು ಗ್ರಾಮದ ಶ್ರೀರಾಮ ಯುವಕ ಸಂಘ ಹಾಗೂ ಪೊನ್ನಂಪೇಟೆಯ ಡಾ| ಅಂಬೇಡ್ಕರ್ ಕಲಾ ಯುವತಿ ಮಂಡಳಿ ಪಡೆದುಕೊಂಡಿತು. ವೈಯಕ್ತಿಕ ಯುವ ಪ್ರಶಸ್ತಿಯನ್ನು ಬಿಳಿಗೇರಿಯ ಶ್ರೀ ಭಗವತಿ ಯುವಕ ಸಂಘದ ಎಂ.ಎ. ಟಾಟಾ ದೇವಯ್ಯ, ಕಾರ್ಯದರ್ಶಿ ಬಿ.ಎನ್. ಪ್ರಸಾದ್, ಚೆಂಬುವಿನ ಶ್ರೀರಾಮ ಯುವಕ ಸಂಘದ ಪ್ರಜ್ವಲ್ ಬೊಳ್ತಜೆ, ಪೊನ್ನಂಪೇಟೆ ಅಂಬೇಡ್ಕರ್ ಕಲಾ ಯುವತಿ ಮಂಡಳಿಯ ಜೆ. ನಿರ್ಮಲ, ಪೊನ್ನಂಪೇಟೆಯ ಚೈತನ್ಯ ಕಲಾ ಯುವತಿ ಮಂಡಳಿಯ ವೀಣಾ ಮನು ಕುಮಾರ್ ಪ್ರಶಸ್ತಿ ಗಳಿಸಿದರು. ನಮ್ಮೂರ ಶಾಲೆಗೆ ನಮ್ಮ ಯುವ ಜನ ಕಾರ್ಯಕ್ರಮದ ಅನುದಾನದಡಿ ಬಿಳಿಗೇರಿಯ ಶ್ರೀ ಭಗವತಿ ಯುವಕ ಸಂಘ, ಮಾಯಮುಡಿಯ ಕಾವೇರಿ ಯುವಕ ಸಂಘ, ತೋಳೂರು ಶೆಟ್ಟಳ್ಳಿಯ ಗಂಧರ್ವ ಯುವಕ ಸಂಘಕ್ಕೆ ತಲಾ 1 ಲಕ್ಷ ರೂ. ನೀಡಲಾಯಿತು. ಕ್ರೀಡಾ ಮಿತ್ರ ಕಾರ್ಯಕ್ರಮದಡಿ ಅವಂದೂರು ಗ್ರಾಮದ ಶ್ರೀ ಗೋಪಾಲಕೃಷ್ಣ ಯುವಕ ಸಂಘ, ಕಬ್ಬಡಗೇರಿ ಗ್ರಾಮದ ಕಬ್ಬಡಗೇರಿ ಯುವಕ ಸಂಘ, ಬಿಳಿಗೇರಿ ಗ್ರಾಮದ ಶ್ರೀ ಭಗವತಿ ಯುವಕ ಸಂಘ, ಅರವತ್ತೂಕ್ಲು ಗ್ರಾಮದ ಪ್ರತಿಭಾ ಯುವಕ ಸಂಘ, ಪೊನ್ನಂಪೇಟೆಯ ಜೈ ಭೀಮ್ ಕಲಾ ಯುವಕ ಸಂಘ ಹಾಗೂ ನಿಸರ್ಗ ಯುವತಿ ಮಂಡಳಿ ತಲಾ 25 ಸಾವಿರವನ್ನು ಪಡೆಯಿತು.