Advertisement

ಮಗುವಿನ ಬೆಳವಣಿಗೆಗೆ ಹೆತ್ತವರು ಕೈಜೋಡಿಸಿ

03:14 PM Jan 06, 2018 | Team Udayavani |

ಆಲಂಕಾರು: ಬಾಲಮೇಳವು ಮಗುವಿನ ಪ್ರತಿಭೆಗೆ ವೇದಿಕೆ. ಮಗುವಿನ ಉತ್ತಮ ಬೆಳವಣಿಗೆಗೆ ಅಂಗನವಾಡಿ ಕಾರ್ಯಕರ್ತೆಯರ ಜತೆಗೆ ಹೆತ್ತವರು ಕೈ ಜೋಡಿಸಬೇಕು ಎಂದು ಕೊಯಿಲ ಗ್ರಾಮ ಪಂಚಾಯತ್‌ ಅಧ್ಯಕ್ಷೆ ಮೀನಾಕ್ಷಿ ಬುಡಲೂರು ಹೇಳಿದರು. ಅವರು ಪುತ್ತೂರು ತಾ| ಕೊಯಿಲ ಗ್ರಾಮದ ಏಣಿತಡ್ಕ 1 ಅಂಗನವಾಡಿ ಕೇಂದ್ರದಲ್ಲಿ ನಡೆದ ಬಾಲಮೇಳ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡಿದರು.

Advertisement

ಸಾಮಾಜಿಕ ಕಾರ್ಯಕರ್ತ ಜನಾರ್ದನ ಗೌಡ ಕರಾಯ ಮಾತನಾಡಿ, ಮಗುವಿನ ಉತ್ತಮ ಭವಿಷ್ಯಕ್ಕಾಗಿ ಎಳವೆಯಲ್ಲಿ ಸಂಸ್ಕಾರ ಶಿಕ್ಷಣ ನೀಡಬೇಕು. ಪ್ರಸಕ್ತ ಕಾಲ ಘಟ್ಟದಲ್ಲಿ ನಡೆಯುತ್ತಿರುವ ಸಮಾಜ ಘಾತುಕ ಚಟುವಟಿಕೆಯಲ್ಲಿ ಯುವ ಶಕ್ತಿಗಳು ಭಾಗಿಯಾಗುತ್ತಿರುವುದು ಕಳವಳಕಾರಿ ಅಂಶ. ಯುವ ಮನಸ್ಸುಗಳು ಅನ್ಯಥಾ ಭಾವ ತಳೆಯುವುದಕ್ಕೆ ಸಂಸ್ಕಾರ ಕೊರತೆಯೇ ಕಾರಣವಾಗಿದೆ ಎಂದರು. ಅಂಗನವಾಡಿ ಪುಟಾಣಿ ಚಿರಶ್ರೀ ಪಾಣಿಯಾಲ್‌ ಕಾರ್ಯಕ್ರಮ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿದ್ದರು. ಕೊಯಿಲ ಗ್ರಾ.ಪಂ. ಉಪಾಧ್ಯಕ್ಷೆ ವಿಜಯ ಅಂಬಾ, ತಾಲೂಕು ಪಂಚಾಯಿತಿ ಸದಸ್ಯೆ ಜಯಂತಿ ಆರ್‌. ಗೌಡ, ನಿವೃತ್ತ ಶಿಕ್ಷಕಿ ಚಂದ್ರಾವತಿ ಸಂಪ್ಯಾಡಿ ಮಾತನಾಡಿ ಶುಭ ಹಾರೈಸಿದರು.

ಕೊಯಿಲ ಗ್ರಾ.ಪಂ. ಸದಸ್ಯರಾದ ಹರಿಣಿ, ತಿಮ್ಮಪ್ಪ ಗೌಡ ಸಂಕೇಶ, ಸಬಳೂರು ಉನ್ನತ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ವಾರಿಜಾ, ಎಸ್‌ಡಿಎಂಸಿ ಅಧ್ಯಕ್ಷ ಶೇಖರ ಗೌಡ ಪಾಪುದಮಂಡೆ, ನಿವೃತ್ತ ಶಿಕ್ಷಕಿ ಸುಶೀಲಾ ಪಿ.ಯು. ಅಚ್ಚಿಲ, ಸ್ತ್ರೀ ಶಕ್ತಿ ಗೊಂಚಲು ಸಮಿತಿ ಅಧ್ಯಕ್ಷೆ ಮೋಹಿನಿ ಪಾನ್ಯಾಲು, ಹಿರಿಯರಾದ ಭವಾನಿ ಗೌಡ ಸಬಳೂರು, ಬಾಲವಿಕಾಸ ಸಮಿತಿ ಸದಸ್ಯೆ ಮೀನಾಕ್ಷಿ ಬೆಳಿಯಪ್ಪ ಗೌಡ ತಿಮರೆಗುಡ್ಡೆ ಉಪಸ್ಥಿತರಿದ್ದರು.

ಅಂಗನವಾಡಿ ಕೇಂದ್ರಕ್ಕೆ ಜಾರು ಬಂಡಿ ನೀಡಿದ ವೇದಾವತಿ ಭವಾನಿ ಗೌಡ, ಡಿವಿಡಿ ನೀಡಿದ ವಿಜಯಾ ಸೀತಾರಾಮ ಪೂಜಾರಿ ಅವರನ್ನು ಸಮ್ಮಾನಿಸಲಾಯಿತು. ರಾಜ್ಯ
ಪ್ರಶಸ್ತಿ ಪುರಸ್ಕೃತೆ ಅಂಗನವಾಡಿ ಕಾರ್ಯಕರ್ತೆ ವೇದಾವತಿ ಅವರನ್ನು ಸ್ತ್ರೀ ಶಕ್ತಿ ಸಂಘದ ವತಿಯಿಂದ ಸಮ್ಮಾನಿಸಲಾಯಿತು. ಸ್ತ್ರೀಶಕ್ತಿ ಸಂಘದ ಸದಸ್ಯರಿಗೆ ಮತ್ತು
ಅಂಗನವಾಡಿ ಪುಟಾಣಿಗಳಿಗೆ ನಡೆಸಲಾದ ವಿವಿಧ ಸ್ಪರ್ಧೆ ವಿಜೇತರಿಗೆ‌ ಬಹುಮಾನ ವಿತರಿಸಲಾಯಿತು. ಪುಟಾಣಿಗಳಾದ ಭುವನ್‌ ಜಿ.ಕೆ., ಯಶ್ವಿ‌ತ್‌ ಕುಮಾರ್‌ ಎಸ್‌. ಅವರ ಹುಟ್ಟುಹಬ್ಬ ಆಚರಿಸಲಾಯಿತು. ಸುಶೀಲಾ ಒ.ಕೆ. ಸ್ವಾಗತಿಸಿದರು. ಜಾನಕಿ ವಂದಿಸಿದರು. ವೇದಾವತಿ ನಿರೂಪಿಸಿದರು. ಮೀನಾಕ್ಷಿ ಸಹಕರಿಸಿದರು.

ಸಂಸ್ಕಾರ ಶಿಕ್ಷಣ ದೊರಕಬೇಕು
ನಮ್ಮ ಆಚರಣೆಯಲ್ಲೂ ಪಾಶಿಮಾತ್ಯ ಸಂಸ್ಕೃತಿ ಬೆರೆತು ಆಚರಣೆಯ ನೈಜತೆ ಇಲ್ಲವಾಗಿದೆ. ಮಕ್ಕಳಿಗೆ ತಾಯಂದಿರ ಮುಖಾಂತಾರ ಮನೆಯಲ್ಲಿ ಹಾಗೂ ಶಿಕ್ಷಕರಿಂದ ಶಾಲೆಯಲ್ಲಿ ಸಂಸ್ಕಾರ ಶಿಕ್ಷಣ ದೊರಕಬೇಕು ಎಂದು ಜನಾರ್ದನ ಗೌಡ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next