Advertisement

ಕೋವಿಡ್‌ ವಿರುದ್ಧ ಹೋರಾಟಕ್ಕೆ ಕೈ ಜೋಡಿಸಿ

08:07 PM May 31, 2021 | Girisha |

ವಿಜಯಪುರ: ನರೇಂದ್ರ ಮೋದಿ ದೇಶದ ಪ್ರಧಾನಿಯಾಗುತ್ತಲೇ ದೇಶದ ಅಭಿವೃದ್ಧಿ ದಿಕ್ಕನ್ನೇ ಬದಲಿಸಿದರು. ಎರಡು ವರ್ಷಗಳಿಂದ ದೇಶದಲ್ಲಿ ಕಾಣಿಸಿಕೊಂಡಿರುವ ಕೋವಿಡ್‌ ನಿಯಂತ್ರಣದ ವಿಷಯದಲ್ಲಿ ಸಂಜೀವಿನಿ ಎನಿಸಿದ ಲಸಿಕೆ, ಔಷ ಧ ಕಂಡು ಹಿಡಿಯುವಂಥ ಮಹತ್ವದ ಹೆಜ್ಜೆಯಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಸಜ್ಜನಶೀಲವಾಗಿ ಕೆಲಸ ಮಾಡಲು ಬಾರದ ಪ್ರತಿಪಕ್ಷಗಳು ಜನರ ಮನಸ್ಸಿನಲ್ಲಿ ಗೊಂದಲ ಮೂಡಿಸುವ ಕೆಲಸ ಮಾಡುತ್ತಿವೆ ಎಂದು ಸಂಸದ ರಮೇಶ ಜಿಗಜಿಣಗಿ ಟೀಕಿಸಿದರು. ರವಿವಾರ ನಗರದಲ್ಲಿ ಮೋದಿ ಅವರ ಎರಡನೇ ಅವ ಧಿಯ ಸರ್ಕಾರ ಅ ಧಿಕಾರಕ್ಕೆ ಬಂದ ಎರಡನೇ ವರ್ಷದ ಸಂಭ್ರಮಾಚರಣೆ ಸಂದರ್ಭದಲ್ಲಿ ಸೇವಾ ಸಪ್ತಾಹದ ಅಂಗವಾಗಿ ಬಿಜೆಪಿ ನಗರ ಘಟಕ ಹಮ್ಮಿಕೊಂಡಿದ್ದ ಮಾಸ್ಕ್, ಸ್ಯಾನಿಟೈಸರ್‌, ಆಹಾರ ಕಿಟ್‌ ವಿತರಣೆ ಹಾಗೂ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಪೌರಕಾರ್ಮಿಕರಿಗೆ ಸನ್ಮಾನ ಮಾಡಿ ಮಾತನಾಡಿದ ಅವರು, ಕೋವಿಡ್‌-19ರ ವಿರುದ್ಧ ಹೋರಾಟಕ್ಕೆ ನಾವೆಲ್ಲ ಪ್ರಧಾನಿಯವರ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಕೋವಿಡ್‌ ಸಂಕಷ್ಟದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಬಿಡುವಿಲ್ಲದೆ ಕೋವಿಡ್‌ ವಿರುದ್ಧ ಹೋರಾಟದಲ್ಲಿ ನಿರಂತರ ಶ್ರಮಿಸುತ್ತಿದ್ದಾರೆ. ಕೋವಿಡ್‌ ನಿಯಂತ್ರಣಕ್ಕೆ ಭಾರತ ಕೈಗೊಂಡ ಕ್ರಮಗಳಿಗೆ ವಿಶ್ವದ ದೇಶಗಳು ಭಾರತವನ್ನು, ಪ್ರಧಾನಿ ಮೋದಿ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿವೆ ಎಂದರು.

ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಪಕ್ಷದ ಬೆಳಗಾವಿ ವಿಭಾಗ ಪ್ರಭಾರಿ ಚಂದ್ರಶೇಖರ ಕವಟಗಿ, ವಿಭಾಗ ಸಂಘಟನಾ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ, ನಗರ ಮಂಡಲ ಅಧ್ಯಕ್ಷ ಮಳುಗೌಡ ಪಾಟೀಲ, ಉಮೇಶ ಕಾರಜೋಳ, ಶಿವರುದ್ರ ಬಾಗಲಕೋಟ, ರವಿಕಾಂತ ಬಗಲಿ, ಗೋಪಾಲ ಘಟಕಾಂಬಳೆ, ಪಾಪುಸಿಂಗ್‌ ರಜಪೂತ, ಸಂತೋಷ ನಿಂಬರಗಿ, ವಿಜಯ ಜೋಶಿ, ಸತೀಶ ಪಾಟೀಲ ಸೇರಿದಂತೆ ಇತರರು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಬಿಜೆಪಿ ಎಸ್‌ಸಿ ಮೋರ್ಚಾದಿಂದ ಮಹಾನಗರ ಪಾಲಿಕೆ ಪೌರಕಾರ್ಮಿಕರಿಗೆ ಸನ್ಮಾನಿಸಿ ಉಪಾಹಾರ ವಿತರಿಸಲಾಯಿತು. ಅಲ್ಲದೇ ಕೊಲ್ಲಾಪುರದ ಕನೇರಿಮಠ ಕಾಡಸಿದ್ದೇಶ್ವರ ಶ್ರೀಗಳಿಂದ ಹಾಗೂ ಆರೆಸ್ಸೆಸ್‌ ತಯಾರಿಸಿದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ನೀರಿನ ಬಾಟಲ್‌ ವಿತರಿಸಲಾಯಿತು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next