Advertisement
ಯತಿದ್ವಯರ, ಕಟೀಲಿನ ಹರಿನಾರಾಯಣ ದಾಸ ಆಸ್ರಣ್ಣ ಮತ್ತು ಕಮಲಾದೇವೀ ಪ್ರಸಾದ ಆಸ್ರಣ್ಣ ರವರ ಉಪಸ್ಥಿತಿಯಲ್ಲಿ ಧಾರ್ಮಿಕ ಸಭೆ ನಡೆಯಿತು. ಮಾಣಿಲ ಶ್ರಿಗಳು ತಮ್ಮ ಆಶೀರ್ವಚನದಲ್ಲಿ ರಾಷ್ಟ್ರ ಬೆಳೆಯಲು ನಮ್ಮ ಆಚರಣೆಗಳು ಉಳಿಯಬೇಕು ಎಂದರು. ಕೊಂಡೆವೂರುಶ್ರೀಗಳು ತಮ್ಮ ಆಶೀರ್ವಚನದಲ್ಲಿ ಸಮಸ್ತರ ಬೆಂಬಲದಿಂದ ಸವಾಲುಗಳನ್ನೆದುರಿಸಿ ಮಠ ಬೆಳೆಯುತ್ತಿದೆ, ಅಳಿಯುತ್ತಿರುವ ಕಾಸರಗೋಡು ತಳಿಯ ಗೋಸಂರಕ್ಷಣೆಗಾಗಿ ಸಮಸ್ತ ಸಮಾಜ ಕೈ ಜೋಡಿಸಿದರೆ ಈ ಮಹಾನ್ ಕಾರ್ಯದಲ್ಲಿ ಶ್ರೀಮಠ ದಿಟ್ಟ ಹೆಜ್ಜೆಯನ್ನಿಟ್ಟು ಪವಿತ್ರ ಗೋಮಾತೆ ಸೇವೆ, ಸಂರಕ್ಷಣೆಯಲ್ಲಿ ಮುನ್ನಡೆಯಲಿದೆ ಎಂದರು.
ಸಮಾರಂಭದಲ್ಲಿ ವೈದ್ಯ, ಸಾಮಾಜಿಕ ಧಾರ್ಮಿಕ ಮುಂದಾಳು ಡಾಣ ಶ್ರೀಧರ ಭಟ್ ಉಪ್ಪಳ ದಂಪತಿಯನ್ನು ಯತಿದ್ವಯರು, ಆಸ್ರಣ್ಣದ್ವಯರು ಮತ್ತು ಅತಿಥಿಗಳು ಸಮ್ಮಾನಿಸಿದರು ಸಮ್ಮಾನಕ್ಕೆ ಉತ್ತರಿಸಿದ ಡಾಣ ಭಟ್‌ರವರು ಸಾಮಾಜಿಕ ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಜೀವನ ಸಾಫಲ್ಯವನ್ನು ಅನುಭವಿಸಿದ್ದೇನೆಂದರು.
Related Articles
Advertisement
ದಿನಕರ್ ಹೊಸಂಗಡಿ ಸಮ್ಮಾನ ಪತ್ರ ವಾಚಿಸಿದರು. ಅಶೋಕ ಬಾಡೂರು ವಂದಿಸಿದರು. ಹರೀಶ್ ಮಾಡ ನಿರೂಪಿಸಿದರು. ಶ್ರೀ ಕ್ಷೇತ್ರದಲ್ಲಿ ಸೂರ್ಯಾಸ್ತದಿಂದ ಅಖಂಡ ಭಜನಾ ಸಪ್ತಾಹ ಆರಂಭಗೊಂಡು ಮಾ.1 ರಂದು ಮಂಗಲಾಚರಣೆಯಾಗಲಿದೆ.