Advertisement

ಮಹಿಳೆಯರ ಸಬಲೀಕರಣಕ್ಕೆ ಎಲ್ಲರೂ ಕೈಜೋಡಿಸಿ: ಪ್ರಧಾನಿ

01:56 AM Oct 09, 2019 | Team Udayavani |

ಹೊಸದಿಲ್ಲಿ: ಮಹಿಳೆಯರ ಸಬಲೀಕರಣದಲ್ಲಿ ಮತ್ತಷ್ಟು ಕೆಲಸಗಳು ನಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ಜನರು ಕೈಜೋಡಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಮಂಗಳವಾರ ಹೊಸದಿಲ್ಲಿಯಲ್ಲಿ ದಸರಾ ಮತ್ತು ನವರಾತ್ರಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ ದರು. ಮಹಾತ್ಮ ಗಾಂಧಿ ಅವರ 150ನೇ ಜನ್ಮ ವರ್ಷಾಚರಣೆ ಪ್ರತೀಕವಾಗಿ ಇಂಧನ ಉಳಿಕೆ, ಆಹಾರ, ನೀರನ್ನು ಹಾಳು ಮಾಡದೆ ಇರುವ ಬಗ್ಗೆ ಪ್ರತಿಜ್ಞೆ ಕೈಗೊಳ್ಳ ಬೇಕಾಗಿದೆ ಎಂದಿದ್ದಾರೆ. ದಸರೆಯ ವೇಳೆ ದೇವಿಯರನ್ನು ಪೂಜಿಸಲಾಗುತ್ತದೆ. ಅದರಿಂದ ಪ್ರೇರಣೆ ಗೊಂಡು ಎಲ್ಲರೂ ಮಹಿಳೆಯರ ಸಬಲೀಕರಣದತ್ತ ಹೆಚ್ಚು ಗಮನಕೊಡ ಬೇಕಾಗಿದೆ ಎಂದರು. ಭಾರತ ಹಲವು ಉತ್ಸವಗಳ ದೇಶ. ಉತ್ಸವಗಳು ದೇಶದ ಜೀವ ನಾಡಿ ಎಂದರು. ಇದಕ್ಕೂ ಮೊದಲು ಅವರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ರಾಮ, ಸೀತೆ, ಲಕ್ಷ್ಮಣರ ಪ್ರತಿಮೆಗಳಿಗೆ ತಿಲಕ ಹಚ್ಚಿದರು. ಕೊನೆಯಲ್ಲಿ ರಾವಣ, ಕುಂಭಕರ್ಣ, ಮೇಘನಾದರ ಪ್ರತಿಕೃತಿ ದಹಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next