Advertisement

ಆಧಾರ್‌ ಜಾಗೃತಿಗೆ ಕೈಜೋಡಿಸಿ: ನಳಿನ್‌

10:09 AM Nov 18, 2017 | Team Udayavani |

ಮಹಾನಗರ: ಆಧಾರ್‌ ಕುರಿತು ಜನಜಾಗೃತಿ ಮೂಡಿಸಲು ಸರಕಾರದ ಜತೆ ಸಂಘ ಸಂಸ್ಥೆಗಳು ಕೈ ಜೋಡಿಸಬೇಕು ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಹೇಳಿದರು. ಕಲಾಕುಂಜ ರಸ್ತೆಯ ಅಟಲ್  ಜನಸ್ನೇಹಿ ಕೇಂದ್ರದಲ್ಲಿ ಶುಕ್ರವಾರ ಸೇವಾಂ ಜಲಿ ಚಾರಿಟೆಬಲ್ ಟ್ರಸ್ಟ್‌ ಹಾಗೂ ಇ-ಗವರ್ನೆನ್ಸ್‌ ಸರ್ವಿಸಸ್‌ ಇಂಡಿಯ (ಸಿಎಸ್‌ಸಿ) ವತಿಯಿಂದ ನಡೆ ಯುವ ಆಧಾರ್‌ ಮೇಳ ಉದ್ಘಾಟಿಸಿ ಮಾತನಾಡಿದರು.

Advertisement

ಸರಕಾರ ಮಾಡುತ್ತಿರುವ ಆಧಾರ್‌ ನೋಂದಣಿ ಕೇಂದ್ರಗಳ ಮುಂದೆ ಸರತಿ ಸಾಲಿನಲ್ಲಿ ನಿಂತು ಬಸವಳಿದುಕೊಳ್ಳುವಂತಹ ಪರಿಸ್ಥಿತಿಯೊಳಗೆ ಇಂತಹ ಸಂಘ ಸಂಸ್ಥೆಗಳು ಆಧಾರ್‌ ನೋಂದಣಿಗೆ ಮುಂದೆ ಬಂದಿರು ವುದು ಉತ್ತಮ ಬೆಳವಣಿಗೆ ಎಂದರು. ಟ್ರಸ್ಟ್‌ನ ಡಿ. ವೇದವ್ಯಾಸ ಕಾಮತ್‌ ಮಾತನಾಡಿ, ಮೂರು ದಿನ ನಡೆಯುವ ಈ ಆಧಾರ್‌ ನೋಂದಣಿ, ತಿದ್ದುಪಡಿಗೆ ಈಗಾಗಲೇ 3000ಕ್ಕೂ ಅಧಿಕ ಮಂದಿ ಟೋಕನ್‌ ಪಡೆದುಕೊಂಡಿದ್ದಾರೆ ಎಂದರು.

ಮಾಜಿ ಶಾಸಕ ಯೋಗೀಶ್‌ ಭಟ್ , ಟ್ರಸ್ಟ್‌ನ ಹನುಮಂತ ಕಾಮತ್‌,ಕೇಂದ್ರ ಸಿಎಸ್‌ಸಿಯ ರಾಬರ್ಟ್‌ ಡಿ’ ನೆಲ್ಸನ್‌, ರಾಜ್ಯ
ಸಿಎಸ್‌ಸಿಯ ಗಜಾನನ ನಾಯಕ್‌, ಆಧಾರ್‌ ಎಕ್ಸಿಕ್ಯೂಟಿವ್‌ಗಳಾದ ತ್ಯಾಗರಾಜನ್‌, ಸುಜೇಯ್ , ಬಿಜೆಪಿ ಮುಖಂಡರಾದ ನಾಗರಾಜ ಶೆಟ್ಟಿ, ಮೋನಪ್ಪ ಭಂಡಾರಿ, ರವಿಶಂಕರ್‌ ಮಿಜಾರು, ನಿತಿನ್‌ ಕುಮಾರ್‌, ರಾಜ ಗೋಪಾಲ ರೈ, ಸುಧೀರ್‌ ಶೆಟ್ಟಿ ಕಣ್ಣೂರು, ಪ್ರೇಮಾನಂದ ಶೆಟ್ಟಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next