Advertisement
“ದುರದೃಷ್ಟವಶಾತ್ ನನ್ನ ಕೋವಿಡ್ ಟೆಸ್ಟ್ ಫಲಿತಾಂಶ ಪಾಸಿಟಿವ್ ಬಂದಿದೆ. ಹೀಗಾಗಿ ಮನೆಯಲ್ಲೇ ಕುಳಿತು ಯುಎಸ್ ಓಪನ್ ಪಂದ್ಯಗಳನ್ನು ವೀಕ್ಷಿಸುತ್ತೇನೆ. ಶೀಘ್ರದಲ್ಲಿ ಕಮೆಂಟ್ರಿ ತಂಡ ಸೇರಿಕೊಳ್ಳುವ ವಿಶ್ವಾಸ ನನ್ನದು’ ಎಂಬುದಾಗಿ ಮೆಕೆನ್ರೊ ಹೇಳಿದ್ದಾರೆ. ಅವರು ಇಎಸ್ಪಿಎನ್ ಚಾನೆಲ್ನ ತಜ್ಞ ಟೆನಿಸ್ ವಿಶ್ಲೇಷಕರಾಗಿದ್ದರು.“ಮೆಕೆನ್ರೊ ಶೀಘ್ರ ಚೇತರಿಸಿಕೊಳ್ಳಲಿ ಎಂಬ ಹಾರೈಕೆ ನಮ್ಮದು. ಅವರನ್ನು ಮರಳಿ ಸ್ವಾಗತಿಸಲು ನಾವು ಸಿದ್ಧರಿದ್ದೇವೆ’ ಎಂಬುದಾಗಿ ಇಎಸ್ಪಿಎನ್ ತಿಳಿಸಿದೆ. ಜಾನ್ ಮೆಕೆನ್ರೊ 7 ಗ್ರ್ಯಾನ್ಸ್ಲಾಮ್ ಪ್ರಶಸ್ತಿಗಳನ್ನು ಜಯಿಸಿದ್ದು, ಇದರಲ್ಲಿ 4 ಯುಎಸ್ ಓಪನ್ ಪ್ರಶಸ್ತಿಗಳಾಗಿವೆ.