Advertisement

ಅಗಲಿದ ಬಾಲಿವುಡ್ ನಟ ರಿಷಿ ಕಪೂರ್ ಗೆ ಗೌರವ ಸಲ್ಲಿಸಿದ ಜಾನ್ ಸೀನ

08:17 AM May 03, 2020 | keerthan |

ಮುಂಬೈ: ಬಾಲಿವುಡ್ ನ ಖ್ಯಾತ ನಟ ರಿಷಿ ಕಪೂರ್ ಅವರು ಇತ್ತೀಚೆಗಷ್ಟೇ ಅಗಲಿದ್ದಾರೆ. ಎಲ್ಲಾ ಚಿತ್ರರಂಗದ ನಟ ನಟಿಯರು ಬಾಲಿವುಡ್ ದಿಗ್ಗಜನ ಅಗಲಿಕೆಗೆ ಕಣ್ಣೀರಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ರಿಷಿ ಕಪೂರ್ ಅವರ ಬಗ್ಗೆ ಬರೆದು ಸಂತಾಪ ಸೂಚಿಸಿದ್ದಾರೆ.

Advertisement

ಇದೀಗ ವಿಶ್ವ ರಸ್ಲಿಂಗ್ ನ ಸೂಪರ್ ಸ್ಟಾರ್ ಜಾನ್ ಸೀನಾ ಕೂಡಾ ರಿಷಿ ಕಪೂರ್ ಅವರಿಗೆ ಗೌರವ ಸೂಚಿಸಿದ್ದಾರೆ. ತನ್ನ ಸಾಮಾಜಿಕ ಜಾಲತಾಣ ಖಾತೆಯಲ್ಲಿ ರಿಷಿ ಕಪೂರ್ ಅವರ ಫೋಟೋ ಹಾಕಿ ಅಗಲಿದ ಬಾಲಿವುಡ್ ಸೂಪರ್ ಸ್ಟಾರ್ ಗೆ ಗೌರವ ಸೂಚಿಸಿದ್ದಾರೆ.

ರಿಷಿ ಕಪೂರ್ ಅವರು ಕಪ್ಪು ಬಣ್ಣದ ಸೂಟ್, ಕೆಂಪು ಟೈ ಧರಿಸಿ ನಗುತ್ತಿರುವ ಸುಂದರ ಫೋಟೋವನ್ನು WWE  ಸೂಪರ್ ಸ್ಟಾರ್ ಜಾನ್ ಸೀನ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

 

 

Advertisement

Advertisement

Udayavani is now on Telegram. Click here to join our channel and stay updated with the latest news.

Next