Advertisement

Bollywood: ʼವೇದಾʼನಾಗಿ ಮಾಸ್‌ ಅವತಾರದಲ್ಲಿ ಜಾನ್‌ ಅಬ್ರಹಾಂ: ರಿಲೀಸ್ ಡೇಟ್‌ ಅನೌನ್ಸ್

05:17 PM Feb 07, 2024 | Team Udayavani |

ಮುಂಬಯಿ: ನಟ ಜಾನ್ ಅಬ್ರಹಾಂ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ʼವೇದಾʼ ಸಿನಿಮಾದ ರಿಲೀಸ್‌ ಡೇಟ್‌ ಅನೌನ್ಸ್‌ ಆಗಿದೆ. ಹೊಸ ಪೋಸ್ಟರ್‌ ಮಾಡುವ ಮೂಲಕ ಸಿನಿಮಾದ ಬಿಡುಗಡೆ ದಿನಾಂಕವನ್ನು ರಿವೀಲ್‌ ಮಾಡಲಾಗಿದೆ.

Advertisement

ಈ ಹಿಂದೆ ಜಾನ್‌ ಅಬ್ರಹಾಂ ಅವರೊಂದಿಗೆ ʼಬಾಟ್ಲಾ ಹೌಸ್‌ʼ ಸಿನಿಮಾವನ್ನು ಮಾಡಿದ್ದ ನಿಖಿಲ್‌ ಅಡ್ವಾಣಿ ಅವರು ಮತ್ತೆ ಜಾನ್‌ ಅಬ್ರಹಾಂ ಜೊತೆ ʼವೇದಾʼ ಮೂಲಕ ಜೊತೆಯಾಗುತ್ತಿದ್ದಾರೆ.

ಸಮಾಜದಲ್ಲಿ ನಡೆದ ಘಟನೆಗಳ ಪ್ರತಿಬಿಂಬವನ್ನೇ ʼವೇದಾʼ ದಲ್ಲಿ ಹೇಳಲಾಗಿದೆ. ಇದೊಂದು ಆ್ಯಕ್ಷನ್-ಡ್ರಾಮಾ ಸಿನಿಮಾವಾಗಲಿದೆ ಎಂದು ಚಿತ್ರತಂಡ ಹೇಳಿದೆ.

ಸಿನಿಮಾದ ಪೋಸ್ಟರ್‌ ಜೊತೆಗೆ ರಿಲೀಸ್‌ ಡೇಟ್‌ ನ್ನು ಅನೌನ್ಸ್‌ ಮಾಡಲಾಗಿದೆ. ಇದೇ ಜುಲೈ 12 ರಂದು ಸಿನಿಮಾ ತೆರೆ ಕಾಣಲಿದೆ.ʼಆಕೆಗೆ ರಕ್ಷಕಬೇಕಿತ್ತು, ಆದರೆ ಅವಳಿಗೆ ಆಯುಧವೇ ಸಿಕ್ಕಿತುʼ ಎಂದು ಪೋಸ್ಟರ್‌ ಕೆಳಗೆ ಮಾಸ್‌ ಅಂಶವನ್ನು ಸಾರುವ ಕ್ಯಾಪ್ಷನ್‌ ನ್ನು ಬರೆಯಲಾಗಿದೆ.

ಜೀ ಸ್ಟುಡಿಯೋಸ್‌ ಸಿನಿಮಾವನ್ನು ನಿರ್ಮಾಣ ಮಾಡಲಿದೆ. ಸಿನಿಮದಲ್ಲಿ ಜಾನ್‌ ಅಬ್ರಹಾಂ ಜೊತೆ ಶಾರ್ವರಿ ಮತ್ತು ಅಭಿಷೇಕ್ ಬ್ಯಾನರ್ಜಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Advertisement

ಇದಾದ ಬಳಿಕ ಜಾನ್‌ ಅಬ್ರಹಾಂ ಅವರು, ಶಿವಂ ನಾಯರ್ ಅವರ ‘ದಿ ಡಿಪ್ಲೋಮ್ಯಾಟ್’ ಕಾಣಿಸಿಕೊಳ್ಳಲಿದ್ದಾರೆ.

 

 

Advertisement

Udayavani is now on Telegram. Click here to join our channel and stay updated with the latest news.

Next