ಮುಂಬೈ: 2007ರ ಟಿ20 ವಿಶ್ವಕಪ್ ಫೈನಲ್ ಪಂದ್ಯದ ಹೀರೋ ಆಲ್ ರೌಂಡರ್ ಜೋಗಿಂದರ್ ಶರ್ಮಾ ಅವರು ಇಂದು ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದಾರೆ. 39 ವರ್ಷದ ಜೋಗಿಂದರ್ ಶರ್ಮಾ ಅವರು ಎಲ್ಲಾ ಮಾದರಿ ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ದಾರೆ.
ಹರಿಯಾಣದ ಮಧ್ಯಮ ವೇಗ ಜೋಗಿಂದರ್ ಈಗ ಹರಿಯಾಣ ಪೊಲೀಸ್ ನಲ್ಲಿ ಡಿಎಸ್ ಪಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೊನೆಯದಾಗಿ 2017 ರಲ್ಲಿ ಪ್ರಥಮ ದರ್ಜೆ ಪಂದ್ಯವನ್ನು ಆಡಿದ್ದ ಅವರು ಅಧಿಕೃತವಾಗಿ ಕ್ರೀಡೆಯಿಂದ ನಿವೃತ್ತಿ ಹೊಂದಿರಲಿಲ್ಲ.
2011 ರಲ್ಲಿ ಕಾರು ಅಪಘಾತ ಜೋಗಿಂದರ್ ಅವರ ವೃತ್ತಿಜೀವನವನ್ನು ಬಹುತೇಕ ಹಾಳುಮಾಡಿತ್ತ. ಅವರು 2012-13 ಋತುವಿನಲ್ಲಿ ಪುನರಾಗಮನ ಮಾಡಿದ ಅವರು. ಕೆಲವು ಋತುಗಳ ನಂತರ ಅವರು ಕ್ರಿಕೆಟ್ ಆಡುವುದನ್ನು ನಿಲ್ಲಿಸಿದರು, ಬಳಿಕ ಅವರ ಪೊಲೀಸ್ ಕೆಲಸಕ್ಕೆ ಆದ್ಯತೆ ನೀಡಲು ಪ್ರಾರಂಭಿಸಿದರು.
ಇದನ್ನೂ ಓದಿ:ಬಿಬಿಸಿ ಸಾಕ್ಷ್ಯಚಿತ್ರ ನಿಷೇಧ: ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದ ಸುಪ್ರೀಂ
ಭಾರತದ ಪರವಾಗಿ ತಲಾ ನಾಲ್ಕು ಏಕದಿನ ಪಂದ್ಯ ಮತ್ತು ಟಿ20 ಪಂದ್ಯವಾಡಿರುವ ಜೋಗಿಂದರ್ ಶರ್ಮಾ ಅವರು 2007ರ ವಿಶ್ವಕಪ್ ಫೈನಲ್ ಪಂದ್ಯದ ಅಂತಿಮ ಓವರ್ ಕಾರಣದಿಂದ ಸದಾ ಕ್ರಿಕೆಟ್ ಪ್ರಿಯರ ನೆನಪಿನಲ್ಲಿ ಇರುತ್ತಾರೆ. 16 ಐಪಿಎಲ್ ಪಂದ್ಯಗಳಲ್ಲಿ ಜೋಗಿಂದರ್ ಶರ್ಮಾ ಭಾಗವಹಿಸಿದರು.