Advertisement
ಮಾ. 15ರಂದು ಕಾಂದಿವಲಿ ಪೂರ್ವದ ಹೊಟೇಲ್ ಅವೆನ್ಯೂ ಸಭಾಂಗಣದಲ್ಲಿ ನಡೆದ ಬಂಟರ ಸಂಘ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿವಿಧ ಶಿಕ್ಷಣ ಕ್ಷೇತ್ರಗಳಿಗೆ ಕೊಡುಗೆಯಾದ ನಮ್ಮ ಸಂಸ್ಥೆ ಬೊರಿವಲಿ ಪಶ್ಚಿಮದಲ್ಲಿ ಶಿಕ್ಷಣ ಸಂಸ್ಥೆಯೊಂದನ್ನು ಪ್ರಾರಂಭಿಸುತ್ತಿದ್ದು, ಈ ಸಮಿತಿಗೆ ಹೆಮ್ಮೆಯ ವಿಷಯವಾಗಿದೆ. ಇದು ಪ್ರಸಕ್ತ ಮತ್ತು ಹಿಂದಿನ ಹಲವಾರು ವರ್ಷಗಳ ಕಾರ್ಯಾಧ್ಯಕ್ಷರು ಹಾಗೂ ಪದಾಧಿಕಾರಿಗಳ ಕೊಡುಗೆಯಾಗಿದ್ದು, ಈ ಪ್ರಾದೇಶಿಕ ಸಮಿತಿಯನ್ನು ನಮ್ಮ ಸಮಾಜದಲ್ಲಿ ಉನ್ನತ ಮಟ್ಟಕ್ಕೆ ಕೊಂಡೊಯ್ದಿದೆ ಎಂದು ತಿಳಿಸಿ ನೂತನ ಪದಾಧಿಕಾರಿಗಳನ್ನು ಅಭಿನಂದಿಸಿ ಶುಭ ಹಾರೈಸಿದರು.
Related Articles
Advertisement
ನಿರ್ಗಮನ ಕಾರ್ಯಾಧ್ಯಕ್ಷ ರವೀಂದ್ರ ಎಸ್. ಶೆಟ್ಟಿ ಮಾತನಾಡಿ, ತನ್ನ ಕಾರ್ಯಾವಧಿಯಲ್ಲಿ ವೈಶಿಷ್ಟ್ಯ ಪೂರ್ಣ ಕಾರ್ಯಕ್ರಮಗಳನ್ನು ನೀಡುವ ಸಮಿತಿಯ ಯಶಸ್ಸಿಗೆ ಶ್ರಮಿಸಿದ ತನ್ನೆಲ್ಲ ಕಾರ್ಯಕಾರಿ ಸಮಿತಿಯ ಸದಸ್ಯರಿಗೆ ಅಭಿನಂದನೆ ಸಲ್ಲಿಸಿ, ನೂತನ ಪದಾಧಿಕಾರಿಗಳನ್ನು ಅಭಿನಂದಿಸಿ ಶುಭ ಹಾರೈಸಿದರು. ಕಳೆದ ಮೂರು ವರ್ಷಗಳ ಸಮಿತಿಯ ಸಾಧನೆಗಳನ್ನು ನಿರ್ಗಮನ ಕಾರ್ಯದರ್ಶಿ ಪ್ರೇಮನಾಥ್ ಶೆಟ್ಟಿ ತಿಳಿಸಿದರು.
ಬಂಟರ ಸಂಘದ ವಿವಿಧ ಪದಾಧಿಕಾರಿಗಳನ್ನು ಹಾಗೂ ಪ್ರಾದೇಶಿಕ ಸಮಿತಿಯ ಪದಾಧಿಕಾರಿಗಳನ್ನು ಗೌರವಿಸಲಾಯಿತು. ಬಂಟರ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಆರ್. ಕೆ. ಶೆಟ್ಟಿ , ಕೋಶಾಧಿಕಾರಿ ಸಿಎ ಹರೀಶ್ ಶೆಟ್ಟಿ , ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಮಾ ಕೆ. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಸಾಗರ್ ಡಿ. ಶೆಟ್ಟಿ, ಸ್ಥಳೀಯ ಪ್ರಾದೇಶಿಕ ಸಮಿತಿಯ ಉಪ ಕಾರ್ಯಾಧ್ಯಕ್ಷ ಕೊಂಡಾಡಿ ಪ್ರೇಮನಾಥ್ ಶೆಟ್ಟಿ, ಗೌರವ ಕೋಶಾಧಿಕಾರಿ ಗಂಗಾಧರ ಎ. ಶೆಟ್ಟಿ , ಸಲಹೆಗಾರರಾದ ವಿಜಯ ಆರ್. ಭಂಡಾರಿ, ಮನೋಹರ ಎನ್. ಶೆಟ್ಟಿ , ಪ್ರವೀಣ್ ಜೆ. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಸಲಹೆಗಾರರಾದ ಪ್ರಭಾಕರ ಬಿ. ಶೆಟ್ಟಿ , ನೂತನ ಜತೆ ಕೋಶಾಧಿಕಾರಿ ಅವಿನಾಶ್ ಶೆಟ್ಟಿ , ಸದಸ್ಯತ್ವ ನೋಂದಣಿ ಸಮಿತಿಯ ಕಾರ್ಯಾಧ್ಯಕ್ಷ ಎನ್. ಜಯ ಶೆಟ್ಟಿ , ಕ್ರೀಡಾ ಸಮಿತಿಯ ಸಂಕೇಶ್ ಶೆಟ್ಟಿ , ಸಾಂಸ್ಕೃತಿಕ ಸಮಿತಿಯ ಸಹನಾ ಡಿ. ಶೆಟ್ಟಿ , ವೈದ್ಯಕೀಯ ಸಮಿತಿಯ ನಾಗರಾಜ ಎ. ಶೆಟ್ಟಿ , ಐಟಿ ಸಮಿತಿಯ ವರುಣ್ ಶೆಟ್ಟಿ , ವೈವಾಹಿಕ ಸಮಿತಿಯ ಪ್ರವೀಣ್ ಶೆಟ್ಟಿ ಶಿಮಂತೂರು, ಇ ಎಂಪ್ಲಾಯಿಮೆಂಟ್ ಸಮಿತಿಯ ಸವಿತಾ ಶೆಟ್ಟಿ , ಮಹಿಳಾ ವಿಭಾಗದ ನೂತನ ಕಾರ್ಯಕಾರಿ ಸಮಿತಿಯ ಸದಸ್ಯೆಯರಾದ ಉಪಕಾರ್ಯಾಧ್ಯಕ್ಷೆ ಸುನೀತಾ ನಿತ್ಯಾನಂದ ಹೆಗ್ಡೆ , ಕಾರ್ಯದರ್ಶಿ ರೇಖಾ ಯೋಗೇಶ್ ಶೆಟ್ಟಿ , ಜತೆ ಕಾರ್ಯದರ್ಶಿ ಮಹೇಶ್ ಶೆಟ್ಟಿ , ಕೋಶಾಧಿಕಾರಿ ಯೋಗಿನಿ ಎಸ್. ಶೆಟ್ಟಿ , ಜತೆ ಕೋಶಾಧಿಕಾರಿ ಶುಭಾಂಗಿ ಶೇಖರ್ ಶೆಟ್ಟಿ ಅವರು ಅತಿಥಿ-ಗಣ್ಯರು, ಸಮ್ಮಾನಿತರನ್ನು ಪರಿಚಯಿಸಿದರು. ಶಿಮಂತೂರು ಪ್ರವೀಣ್ ಶೆಟ್ಟಿ , ಪ್ರಾದೇಶಿಕ ಸಮಿತಿಯ ಜತೆ ಕಾರ್ಯದರ್ಶಿ
ರಘುನಾಥ್ ಎನ್. ಶೆಟ್ಟಿ ಅವರು ಕಾರ್ಯಕ್ರಮ ನಿರ್ವಹಿಸಿದರು. ಪ್ರಾದೇಶಿಕ ಸಮಿತಿಯ ಕಾರ್ಯದರ್ಶಿ ಅಶೋಕ್ ವಿ. ಶೆಟ್ಟಿ ವಂದಿಸಿದರು.
ಐಕಳ ಹರೀಶ್ ಶೆಟ್ಟಿ ಅವರ ಪ್ರೇರಣೆಯಿಂದ ಹಲವಾರು ಹುದ್ದೆಗಳನ್ನು ಅಲಂಕರಿಸಿದ ನನಗೆ ಈ ಬಾರಿ ಮೂರು ಪ್ರಾದೇಶಿಕ ಸಮಿತಿಗಳ ಸಮನ್ವಯಕನಾಗಿ ಜವಾಬ್ದಾರಿ ದೊರೆತಿದೆ. ಓರ್ವ ಅನುಭವಿ ಕಾರ್ಯಾಧ್ಯಕ್ಷರಾದ ಎಂ. ಜಿ. ಶೆಟ್ಟಿ ಅವರ ಸೇವೆ ಈ ಪ್ರಾದೇಶಿಕ ಸಮಿತಿಯನ್ನು ಇನ್ನಷ್ಟು ಸದೃಢಗೊಳಿಸಲಿದೆ. ಅವರ ಕಂಕಣ ಭಾಗ್ಯ ಯೋಜನೆ ಯಶಸ್ವಿಯಾಗಲಿ. ಅದಕ್ಕಾಗಿ ನಾವೆಲ್ಲರೂ ಸಹಕರಿಸೋಣ. –ಶಶಿಧರ ಶೆಟ್ಟಿ ಇನ್ನಂಜೆ, ಸಮನ್ವಯಕ, ಬಂಟರ ಸಂಘ ಪಶ್ಚಿಮ ವಿಭಾಗ ಪ್ರಾದೇಶಿಕ ಸಮಿತಿಗಳು
ಬಂಟರು ಸದಾ ಪರಿಶ್ರಮ ಜೀವಿಗಳು. ಹಾಗಾಗಿ ಎಲ್ಲ ಕ್ಷೇತ್ರಗಳಲ್ಲಿ ಅವರ ಕೊಡುಗೆ ಅಪಾರವಾಗಿದೆ. ಹಿರಿಯರು ಕಟ್ಟಿದ ಈ ಸಂಸ್ಥೆಯನ್ನು ನಾವು ಸಾಮಾಜಿಕವಾಗಿ, ಸಾಂಸ್ಕೃತಿಕ, ಶೈಕ್ಷಣಿಕ,ವೈದ್ಯಕೀಯ ಇನ್ನಿತರ ಕ್ಷೇತ್ರಗಳಲ್ಲಿ ಅಭಿವೃದ್ಧಿಯತ್ತ ಕೊಂಡೊಯ್ಯಬೇಕು. ಕಂಕಣ ಭಾಗ್ಯದಂತಹಸಮಾಜದ ಅಭಿವೃದ್ಧಿಯ ಕಾರ್ಯಕ್ರಮಗಳಿಗೆ ನಾವೆಲ್ಲರೂಕೈಜೋಡಿಸಬೇಕು. ಬೊರಿವಲಿಯ ನೂತನ ಶಿಕ್ಷಣಯೋಜನೆ ಚಂದ್ರಹಾಸ ಶೆಟ್ಟಿ ಅವರ ಕಾರ್ಯಾವಧಿಯಲ್ಲಿ ಪೂರ್ಣಗೊಳ್ಳಲು ಎಲ್ಲರ ಸಹಕಾರ ಅಗತ್ಯವಾಗಿದೆ. –ಮುಂಡಪ್ಪ ಎಸ್. ಪಯ್ಯಡೆ ಜತೆ ಕಾರ್ಯದರ್ಶಿ, ಬಂಟರ ಸಂಘ ಮುಂಬಯಿ
ಚಿತ್ರ-ವರದಿ: ರಮೇಶ್ ಉದ್ಯಾವರ