Advertisement

ಜೋಗೇರ ಮಹಿಳೆಯರ ಬದುಕಿಗೆ ಕಷ್ಟ ತಂದ ಕೋವಿಡ್ ಲಾಕ್ ಡೌನ್

01:44 PM Apr 23, 2020 | keerthan |

ಗಂಗಾವತಿ: ಕೋವಿಡ್-19 ಸೋಂಕಿನ ಕಾರಣ ಬಹಳಷ್ಟು ಜನರ ಜೀವನ ದುಸ್ಥರವಾಗಿದೆ. ದಿನಗೂಲಿ ಮಾಡಿ ಬದುಕುತ್ತಿದ್ದ ಜನರು ಈಗ ಅನ್ನ ಆಹಾರಕ್ಕೆ ಕಷ್ಟ ಪಡುತ್ತಿದ್ದಾರೆ. ಗೃಹ ಮನೆ ಬಳಕೆ ವಸ್ತುಗಳನ್ನು ಮಾರಿ ಬದುಕು ನಡೆಸುವ ಜೋಗೇರ ಮಹಿಳೆಯರ ಕುಟುಂಬಗಳೂ ಈಗ ಕಷ್ಟದಲ್ಲಿವೆ.

Advertisement

ನಗರ ಮತ್ತು ಗ್ರಾಮೀಣ ಭಾಗದಲ್ಲಿ ಕುಂಕುಮ, ಬಾಚಣಿಕೆ,ಬಳೆ, ರಿಬ್ಬನ್, ಹೆಣ್ಣು ಮಕ್ಕಳು ಬಳಕೆ ಮಾಡುವ ಸಾಮಾಗ್ರಿಗಳನ್ನು ಮಾರಾಟ ಮಾಡಿ ಬದುಕು ನಡೆಸಿ ಕುಟುಂಬ ಸಲಹುವ ಜೋಗೇರ ಮಹಿಳೆಯರು ಕೋವಿಡ್-19 ವೈರಸ್ ಲಾಕ್ ಡೌನ್ ಕಾರಣಕ್ಕಾಗಿ ಮನೆಯಿಂದ ಹೊರ ಬರಲಾಗದೇ ಬದುಕು ನಡೆಸುವುದು ಕಷ್ಟವಾಗಿದೆ.

ಗುರುವಾರ ರಾಜ್ಯದ‌ ಕೆಲವೆಡೆ ಲಾಕ್ ಡೌನ್ ಕೊಂಚ ಕಡಿಮೆಯಾಗಿದ್ದರಿಂದ ಜೋಗೇರ ಮಹಿಳೆಯರು ಸಾಮಾನು ಹೊತ್ತು ವಾರ್ಡ್ ಗಳಲ್ಲಿ ಸಂಚಾರ ಮಾಡಿ‌ದರು. ತಮ್ಮ ಸಾಮಾಗ್ರಿಗಳನ್ನು ಮಾರಾಟ ಮಾಡಲು ಭೌತಿಕ ಅಂತರ ಕಾಪಾಡಿಕೊಂಡು  ವ್ಯವಹಾರ ನಡೆಸುತ್ತಿರುವುದು ಕಂಡು ಬಂತು.

Advertisement

Udayavani is now on Telegram. Click here to join our channel and stay updated with the latest news.

Next