Advertisement
ನಗರದ ಕೆ.ಜಿ.ರಸ್ತೆಯಲ್ಲಿರುವ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಂಸ್ಥಾಪಕರ ದಿನಾಚರಣೆಯಲ್ಲಿ ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ ಸ್ಮಾರಕ ಪ್ರಶಸ್ತಿ-2018 ಸ್ವೀಕರಿಸಿ ಮಾತನಾಡಿದರು.
Related Articles
Advertisement
ಮನಸ್ಥಿತಿ ಬದಲಾಗಬೇಕು: ಜೋಗದಲ್ಲಿ ಹರಿದು ನಿರುಪಯುಕ್ತವಾಗುತ್ತಿದ್ದ ನೀರು ಸರ್.ಎಂ.ವಿಶ್ವೇಶ್ವರಯ್ಯ ಅವರ ಆಲೋಚನಾ ಶಕ್ತಿಯಿಂದ ವಿದ್ಯುತ್ ಉತ್ಪಾದನೆಗೆ ಬಳಕೆಯಾಗುತ್ತಿದೆ. ಹಾಗೆಯೇ ನಮ್ಮಲ್ಲಿರುವ ಮನಸ್ಥಿತಿ ಬದಲಾದಾಗ ಮಾತ್ರ ನಿರುಪಯುಕ್ತ ವಸ್ತುವನ್ನು ಉಪಯುಕ್ತವಾಗಿ ಪರಿವರ್ತಿಸಲು ಸಾಧ್ಯ ಎಂದು ರಾಜ್ಯಸಭಾ ಸದಸ್ಯ ಸುಬ್ರಹ್ಮಣಿಯನ್ ಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.
ದೇಶದಲ್ಲಿ ಮಹಿಳೆಯರಿಗೆ ಸಮಾನವಾದ ಅವಕಾಶಗಳು ಲಭ್ಯವಾಗಬೇಕು. ನಮ್ಮಲ್ಲಿರುವ ಸಂಕುಚಿತ ಮನೋಭಾಗ ದೂರಾದಾಗ ಸಮಗ್ರ ಅಭಿವೃದ್ಧಿ ಸಾಧ್ಯ ಮತ್ತು ಆಮೂಲಕ ವಿಶ್ವೇಶ್ವರಯ್ಯನವರ ಕನಸು ಈಡೇರಿಸಿದಂತಾಗುತ್ತದೆ ಎಂದರು.
ಸಂಖ್ಯೆ ಯಾವತ್ತೂ ಮುಖ್ಯವಲ್ಲ. ಶಕ್ತಿಗಿಂತ ಯುಕ್ತಿ ಮುಖ್ಯ ಎಂಬುದನ್ನು ವಿಶ್ವೇಶ್ವರಯ್ಯ ತೋರಿಸಿಕೊಟ್ಟಾರೆ. ನೂರಾರು ಕುರಿಗಳು ಒಟ್ಟಿಗೆ ಇದ್ದರೂ, ಒಂದು ಹುಲಿ ಕಂಡು ಹೆದರಿ ಓಡುತ್ತವೆ, ಹಾಗೇ ಸಿಂಹಕ್ಕೆ ಶಕ್ತಿ ಇದ್ದರೂ, ಸರ್ಕಸ್‌ನಲ್ಲಿ ತಾಳಕ್ಕೆ ತಕ್ಕಂತೆ ಕುಣಿಯುತ್ತದೆ. ನಾವು ಬದಲಾಗಬೇಕು. ಇದಕ್ಕಾಗಿ ಮನಸ್ಥಿತಿ ಬದಲಾಯಿಸಿಕೊಳ್ಳಬೇಕು ಮತ್ತು ಸವಾಲುಗಳನ್ನು ಸ್ವೀಕರಿಸಬೇಕು ಎಂದು ಸಲಹೆ ನೀಡಿದರು.
ಭಾರತದ ನೈಜ ಇತಿಹಾಸವನ್ನು ಅರಿಯಬೇಕಿದೆ. ಮಕ್ಕಳ ಇತಿಹಾಸ ಪುಟದಲ್ಲಿ ನೈಜ ಇತಿಹಾಸ ಕಣ್ಮರೆಯಾಗಿದೆ. ಶಿವಾಜಿ, ಕೃಷ್ಣದೇವರಾಯ ಮೊದಲಾದವರ ಬಗ್ಗೆ ಒಂದು ಪುಟಕ್ಕಿಂತ ಜಾಸ್ತಿ ವರ್ಣನೆ ಇರುವುದಿಲ್ಲ. ಮುಸ್ಲಿಂ ರಾಜ್ಯ ಸಾಧನೆ, ಶ್ಲಾಘನೆ ಹತ್ತಾರು ಪುಟಗಳಷ್ಟಿರುತ್ತದೆ. ಈ ಪರಿಸ್ಥಿತಿ ಬದಲಾಗಬೇಗು ಎಂದರು.
ತಮಿಳುನಾಡು ಜನರಿಗೆ ಕುಡಿಯುವ ನೀರಿನ ಸಮಸ್ಯೆ ಇದೆ. ಹಾಗಂತ ಕಾವೇರಿ ನೀರೇ ಕುಡಿಯಲು ಬೇಕೆನ್ನುವುದು ಸರಿಯೇ ಎಂಬುದನ್ನು ಚಿಂತಿಸಬೇಕು. ಕರ್ನಾಟಕದ ಜನರಿಗೂ ಕುಡಿಯುವ ನೀರು ಬೇಕಲ್ಲವೇ. ಹೀಗಾಗಿ ಸಮುದ್ರದ ನೀರನ್ನು ಶುದ್ಧೀಕರಿಸಿ ಉಪಯೋಗಿಸ ಬಹುದಾದ ಹೊಸ ತಂತ್ರಜ್ಞಾನ ಅಳವಡಿಸಿ, ಕುಡಿಯುವ ನೀರಿನ ಸಮಸ್ಯೆಗೆ ಕಡಿವಾಣ ಹಾಕಬೇಕಿದೆ ಎಂದು ಹೇಳಿದರು.
ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಮಾತನಾಡಿ, ಮೇಲ್ಮಟ್ಟಕ್ಕೆ ಏರಿದವರೆಲ್ಲಾ ಬ್ರಹ್ಮರಲ್ಲ. ಸಿಕ್ಕ ಅವಕಾಶ ಸದ್ಬಳಕೆ ಮಾಡಿಕೊಂಡು ಇತರರನ್ನು ಬೆಳೆಸಬೇಕು. ಈ ನಿಟ್ಟಿನಲ್ಲಿ ಬಿ.ಆರ್.ಶೆಟ್ಟಿಯವರ ಸಾಧನೆ ಸಮಾಜಕ್ಕೆ ಮಾದರಿ ಎಂದರು. ಉದ್ಯಮಿ ಆರ್.ಎನ್.ಶೆಟ್ಟಿ, ಎಫ್ಕೆಸಿಸಿಐ ಅಧ್ಯಕ್ಷ ಸುಧಾಕರ ಶೆಟ್ಟಿ, ಉಪಾಧ್ಯಕ್ಷರಾದ ಸಿ.ಆರ್. ಜನಾರ್ಧನ, ಪೆರಿಕಲ್ ಎಂ. ಸುಂದರ್, ಮಾಜಿ ಅಧ್ಯಕ್ಷರಾದ ಕೆ.ರವಿ , ರಾಮಸ್ವಾಮಿ ಮೊದಲಾದವರು ಇದ್ದರು.