Advertisement

ಜೋಗ ಜಲಪಾತ ಖಾಸಗಿಯವರಿಗೆ ಲೀಸ್‌: ಪರಿಸರಾಸಕ್ತರ ವಿರೋಧ

10:34 AM May 17, 2017 | Karthik A |

ಶಿವಮೊಗ್ಗ: ಪ್ರಸಿದ್ಧ ಜೋಗ ಜಲಪಾತದಲ್ಲಿ ಸರ್ವಋತು ಯೋಜನೆ ಜಾರಿಗೊಳಿಸಲು ರಾಜ್ಯ ಸರಕಾರ ಮುಂದಾಗಿರುವುದಕ್ಕೆ ಪರಿಸರ ಆಸಕ್ತ ಬಳಗದವರು ವಿರೋಧ ವ್ಯಕ್ತಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಳಗದ ಪ್ರಮುಖರಾದ ಹೊ.ನ. ಸತ್ಯ, ಯೋಜನೆ ಸಂಪೂರ್ಣ ಅವೈಜ್ಞಾನಿಕವಾಗಿದೆ. ಸರ್ವಋತು ಯೋಜನೆ ಹೆಸರಿನಲ್ಲಿ 60 ವರ್ಷಕ್ಕೆ ಜೋಗ ಜಲಪಾತವನ್ನು ಖಾಸಗಿ ವ್ಯಕ್ತಿಯೊಬ್ಬರಿಗೆ ಲೀಸ್‌ಗೆ ನೀಡಲಾಗಿದೆ. ಸರಕಾರ ಜಲಪಾತವನ್ನೇ ಮಾರಾಟ ಮಾಡಲು ಮುಂದಾಗಿದೆ ಎಂದು ದೂರಿದರು.

Advertisement

ಪ್ರಕೃತಿದತ್ತವಾದ ಜೋಗ ಜಲಪಾತ ಅತ್ಯಂತ ರಮಣೀಯ ಪ್ರವಾಸಿ ತಾಣ. ಮಳೆಗಾಲದಲ್ಲಿ ಮಕ್ಕಳಿಂದ ಹಿಡಿದು, ವೃದ್ಧರವರೆಗೆ ಧುಮ್ಮಿಕ್ಕುವ ಜಲಧಾರೆಯನ್ನು ಸವಿಯುವ ಯೋಗವಿದೆ. ಆದರೆ, ಈ ಪ್ರದೇಶದಲ್ಲಿ ವರ್ಷದ 365 ದಿವಸವೂ ಜಲಪಾತವನ್ನು ನಿರ್ಮಿಸುವ ಮೂಲಕ ಸರ್ವಋತು ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದ್ದು, ಇದು ಸಂಪೂರ್ಣ ಅವೈಜ್ಞಾನಿಕ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next