Advertisement

ಗಾಯಾಳು ಆರ್ಚರ್‌ ಏಕದಿನ ಸರಣಿಗಿಲ್ಲ

12:15 AM Mar 22, 2021 | Team Udayavani |

ಲಂಡನ್‌: ಭಾರತ ವಿರುದ್ಧ ಆಡಲಾಗುವ ಮೂರು ಪಂದ್ಯಗಳ ಏಕದಿನ ಸರಣಿಗಾಗಿ ರವಿವಾರ ಇಂಗ್ಲೆಂಡ್‌ ತಂಡ ಪ್ರಕಟಗೊಂಡಿದೆ. ಗಾಯಾಳು ವೇಗಿ ಜೋಫ್ರ ಆರ್ಚರ್‌ ಈ ಮುಖಾಮುಖೀಯಿಂದ ಹೊರಗುಳಿಯಲಿದ್ದಾರೆ.

Advertisement

“ಬಲ ಮಣಿಗಂಟಿನ ನೋವಿನಿಂದಾಗಿ ಜೋಫ್ರ ಆರ್ಚರ್‌ ಇಂಗ್ಲೆಂಡಿಗೆ ವಾಪಸಾಗಲಿದ್ದಾರೆ. ಟಿ20 ಸರಣಿ ವೇಳೆಯೇ ಅವರಿಗೆ ಈ ಸಮಸ್ಯೆ ಕಾಡಿತ್ತು. ಹೀಗಾಗಿ ಏಕದಿನ ಸರಣಿಯಿಂದ ಕೈಬಿಡಲಾಯಿತು’ ಎಂದು ಇಸಿಬಿ ಪ್ರಕಟಿಸಿದೆ.

14 ಸದಸ್ಯರ ತಂಡದೊಂದಿಗೆ ಮೂವರು ಮೀಸಲು ಆಟಗಾರರನ್ನೂ ಹೆಸರಿಸಲಾಗಿದೆ. ಇವರೆಂದರೆ ಡೇವಿಡ್‌ ಮಾಲನ್‌, ಕ್ರಿಸ್‌ ಜೋರ್ಡನ್‌ ಮತ್ತು ಜೇಕ್‌ ಬಾಲ್‌.

ಐಪಿಎಲ್‌ಗ‌ೂ ಇಲ್ಲ :

ಗಾಯಾಳು ಜೋಫ್ರ ಆರ್ಚರ್‌ 14ನೇ ಐಪಿಎಲ್‌ ಪಂದ್ಯಾವಳಿಯ ಮೊದಲ ಹಂತದಲ್ಲಿ ಆಡುವುದಿಲ್ಲ ಎಂದೂ ಇಸಿಬಿ ಇದೇ ವೇಳೆ ಸ್ಪಷ್ಟಪಡಿಸಿದೆ. ಐಪಿಎಲ್‌ನಲ್ಲಿ ಅವರು ರಾಜಸ್ಥಾನ್‌ ರಾಯಲ್ಸ್‌ ತಂಡದ ಸದಸ್ಯರಾಗಿದ್ದಾರೆ.

Advertisement

ಡೇ-ನೈಟ್‌ ಪಂದ್ಯಗಳು :

ಭಾರತ ಮತ್ತು ವಿಶ್ವ ಚಾಂಪಿಯನ್‌ ಇಂಗ್ಲೆಂಡ್‌ ನಡುವಿನ 3 ಪಂದ್ಯಗಳು ಮಾ. 23, 26 ಮತ್ತು 28ರಂದು ಪುಣೆಯಲ್ಲಿ ನಡೆಯಲಿವೆ. ಎಲ್ಲವೂ ಅಹರ್ನಿಶಿ ಪಂದ್ಯಗಳಾಗಿದ್ದು, ಅಪರಾಹ್ನ 1.30ಕ್ಕೆ ಆರಂಭವಾಗಲಿವೆ. ಪ್ರೇಕ್ಷಕರಿಗೆ ನಿರ್ಬಂಧ ವಿಧಿಸಲಾಗಿದೆ.

ಇಂಗ್ಲೆಂಡ್‌ ತಂಡ :

ಇಯಾನ್‌ ಮಾರ್ಗನ್‌ (ನಾಯಕ), ಜಾಸನ್‌ ರಾಯ್‌, ಜಾನಿ ಬೇರ್‌ಸ್ಟೊ, ಜಾಸ್‌ ಬಟ್ಲರ್‌, ಬೆನ್‌ ಸ್ಟೋಕ್ಸ್‌, ಮೊಯಿನ್‌ ಅಲಿ, ಸ್ಯಾಮ್‌ ಬಿಲ್ಲಿಂಗ್ಸ್‌, ಸ್ಯಾಮ್‌ ಕರನ್‌, ಟಾಮ್‌ ಕರನ್‌, ಲಿಯಮ್‌ ಲಿವಿಂಗ್‌ಸ್ಟೋನ್‌, ಮ್ಯಾಟ್‌ ಪಾರ್ಕಿನ್ಸನ್‌, ಆದಿಲ್‌ ರಶೀದ್‌, ರೀಸ್‌ ಟಾಪ್ಲಿ, ಮಾರ್ಕ್‌ ವುಡ್‌.

ಮೀಸಲು ಆಟಗಾರರು: ಜೇಕ್‌ ಬಾಲ್‌, ಕ್ರಿಸ್‌ ಜೋರ್ಡನ್‌, ಡೇವಿಡ್‌ ಮಾಲನ್‌.

Advertisement

Udayavani is now on Telegram. Click here to join our channel and stay updated with the latest news.

Next