Advertisement
ಸ್ವಾರಸ್ಯವೆಂದರೆ, ಜೋ ರೂಟ್ ಟೆಸ್ಟ್ ಪದಾರ್ಪಣೆಗೈದದ್ದು, 50ನೇ ಟೆಸ್ಟ್ ಆಡಿದ್ದು… ಎಲ್ಲವೂ ಭಾರತದಲ್ಲೇ. ಇದೀಗ 100ನೇ ಟೆಸ್ಟ್ ಪಂದ್ಯವನ್ನೂ ಭಾರತದಲ್ಲೇ ಆಡುತ್ತಿರುವುದು ಕಾಕತಾಳೀಯ!
ರೂಟ್ 100 ಟೆಸ್ಟ್ ಆಡಿದ ಇಂಗ್ಲೆಂಡಿನ 15ನೇ ಕ್ರಿಕೆಟಿಗನೆನಿಸಲಿದ್ದಾರೆ. ಈ ಯಾದಿಯಲ್ಲಿ ಮುಂದಿರುವವರು ಮಾಜಿ ನಾಯಕ ಅಲಸ್ಟೇರ್ ಕುಕ್. ಅವರು 161 ಟೆಸ್ಟ್ ಆಡಿದ್ದಾರೆ. ವೇಗಿ ಜೇಮ್ಸ್ ಆ್ಯಂಡರ್ಸನ್ (157), ಸ್ಟುವರ್ಟ್ ಬ್ರಾಡ್ (144), ಅಲೆಕ್ ಸ್ಟುವರ್ಟ್ (133), ಇಯಾನ್ ಬೆಲ್ (118) ಅನಂತರದ ಸ್ಥಾನದಲ್ಲಿದ್ದಾರೆ.
Related Articles
Advertisement
ಒಂದು ವೃತ್ತ ಪೂರ್ತಿಈ ಕುರಿತು ಪ್ರತಿಕ್ರಿಯಿಸಿದ ಜೋ ರೂಟ್, “ಭಾರತಕ್ಕೆ ಬಂದು ನೂರನೇ ಟೆಸ್ಟ್ ಆಡುವುದರೊಂದಿಗೆ ನನ್ನ ಕ್ರಿಕೆಟ್ ಬದುಕಿನ ವೃತ್ತವೊಂದು ಪೂರ್ತಿಗೊಳ್ಳಲಿದೆ. 2012ರ ಭಾರತ ಪ್ರವಾಸದ ವೇಳೆ ನನಗೆ ಟೆಸ್ಟ್ ಕ್ಯಾಪ್ ಧರಿಸುವ ಅದೃಷ್ಟ ಲಭಿಸಿತ್ತು. ಮೊದಲ ಸರಣಿಯಲ್ಲೇ ನಾನು ಕಲಿತ ಪಾಠ ಅಪಾರ. ಏಶ್ಯದಲ್ಲಿ ಆಡುವುದು, ಸ್ಪಿನ್ ದಾಳಿಯನ್ನು ನಿಭಾಯಿಸುವುದೆಲ್ಲ ದೊಡ್ಡ ಸವಾಲಾಗಿತ್ತು. ಇದೀಗ ಭಾರತದಲ್ಲೇ ನೂರನೇ ಟೆಸ್ಟ್ ಆಡುವ ಯೋಗ ಲಭಿಸಿದೆ. ಈ ಕ್ಷಣಕ್ಕಾಗಿ ಕಾತರಗೊಂಡಿದ್ದೇನೆ’ ಎಂದಿದ್ದಾರೆ.
ಭಾರತದಲ್ಲಿ ಈ ವರೆಗೆ 16 ಟೆಸ್ಟ್ ಆಡಿರುವ ಜೋ ರೂಟ್ 56.84ರ ಸರಾಸರಿಯಲ್ಲಿ 1,421 ರನ್ ಗಳಿಸಿದ್ದಾರೆ. ಇದರಲ್ಲಿ 4 ಶತಕ, 9 ಅರ್ಧ ಶತಕ ಸೇರಿದೆ.