Advertisement
ರಾಂಚಿಯಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಒಂದು ಹಂತದಲ್ಲಿ ಇಂಗ್ಲೆಂಡ್ ತಂಡ ಸತತ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ತಾಳ್ಮೆಯ ಆಟವಾಡಿದ ರೂಟ್ ತಂಡಕ್ಕೆ ಆಧಾರವಾದರು. 226 ಎಸೆತ ಎದುರಿಸಿರುವ ರೂಟ್ ಅಜೇಯ 106 ರನ್ ಗಳಿಸಿದ್ದಾರೆ.
Related Articles
Advertisement
ರಾಂಚಿ ಪಂದ್ಯದಲ್ಲಿ ತನ್ನ ಸಾಂಪ್ರದಾಯಿಕ ಶೈಲಿಯ ಬ್ಯಾಟಿಂಗ್ ಗೆ ಮರಳಿದ ರೂಟ್ ನಿಧಾನವಾಗಿ ಇನ್ನಿಂಗ್ಸ್ ಕಟ್ಟಿದರು. ಮೊದಲ ಸೆಶನ್ ನಲ್ಲಿ ಐದು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಆಂಗ್ಲರ ತಂಡವನ್ನು ರೂಟ್ ಫೋಕ್ಸ್ ಜತೆ ಸೇರಿ ಆಧರಿಸಿದರು.
ಮೊದಲ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ ತಂಡವು ಏಳು ವಿಕೆಟ್ ನಷ್ಟಕ್ಕೆ 302 ರನ್ ಗಳಿಸಿದೆ. 106 ರನ್ ಗಳಿಸಿದ ಜೋ ರೂಟ್ ಮತ್ತು 31 ರನ್ ಗಳಿಸಿದ ಒಲಿ ರಾಬಿನ್ಸನ್ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಆಕಾಶ್ ಸ್ಮರಣೀಯ ಪದಾರ್ಪಣೆ
ಬೆಂಗಾಳ ಬೌಲರ್ ಆಕಾಶ್ ದೀಪ್ ಅವರು ಇಂದಿನ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದರು. ಆರಂಭದಲ್ಲಿಯೇ ಇಂಗ್ಲೆಂಡ್ ಬ್ಯಾಟರ್ ಗಳ ಮೇಲೆ ಸವಾರಿ ಮಾಡಿದ ಆಕಾಶ್ ದೀಪ್ ಮೊದಲ ಮೂರು ವಿಕೆಟ್ ಪಡೆದರು.
ಮೊಹಮ್ಮದ್ ಸಿರಾಜ್ ಎರಡು ವಿಕೆಟ್ ಕಿತ್ತರೆ, ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ತಲಾ ಒಂದು ವಿಕೆಟ್ ಪಡೆದರು.