Advertisement
ಸೆಡ್ಡನ್ ಪಾರ್ಕ್‌ನಲ್ಲಿ ನಡೆದ 50 ಓವರ್‌ಗಳ ಪಂದ್ಯದಲ್ಲಿ ನಾರ್ದರ್ನ್ ಡಿಸ್ಟ್ರಿಕ್ಟ್ ತಂಡದ ಜೋ ಕಾರ್ಟರ್ ಮತ್ತು ಬ್ರೆಟ್ ಹ್ಯಾಂಪ್ಟನ್ ಓವರೊಂದರಲ್ಲಿ 43 ರನ್ ಚಚ್ಚಿ (ನೋಬಾಲ್ ಮೂಲಕ 2 ರನ್)ವಿಶ್ವದಾಖಲೆ ನಿರ್ಮಿಸಿದ್ದಾರೆ. ಇದು ಸೀಮಿತ ಓವರ್ ಕ್ರಿಕೆಟ್‌ನ ಒಂದು ಓವರ್‌ನಲ್ಲಿ ದಾಖಲಾದ ಗರಿಷ್ಠ ರನ್!
Related Articles
ವಿಲಿಯಮ್ ಲುಡಿಕ್ 46ನೇ ಓವರ್ ಬೌಲಿಂಗ್ ಮಾಡುತ್ತಿದ್ದರು. ಅದು ಈ ಇನ್ನಿಂಗ್ಸ್‌ನಲ್ಲಿ ಅವರ ಕೊನೆಯ ಓವರ್ ಆಗಿತ್ತು. ಬೌಲಿಂಗ್ ಆರಂಭಕ್ಕೆ ಮುನ್ನ 42 ರನ್ ನೀಡಿ 1 ವಿಕೆಟ್ ಪಡೆದಿದ್ದು ಅವರ ಸಾಧನೆ. ಓವರ್ ಮುಕ್ತಾಯದ ಹೊತ್ತಿಗೆ ಅವರ ಪರಿಸ್ಥಿತಿ 1 ವಿಕೆಟ್‌ಗೆ 85 ರನ್ ಎನ್ನುವಂತಾಗಿತ್ತು. ಕೇವಲ 8 ಎಸೆತಗಳ ಅಂತರದಲ್ಲಿ ಪರಿಸ್ಥಿತಿ ಬದಲಾಗಿತ್ತು!
Advertisement
ಲುಡಿಕ್ ಓವರ್‌ನ ಮೊದಲ ಎಸೆತದಲ್ಲಿ ಹ್ಯಾಂಪ್ಟನ್ ಬೌಂಡರಿ ಬಾರಿಸಿದರು. ಅದಾದ ಅನಂತರ ಸತತ ಎರಡು ನೋಬಾಲ್‌ಗಳಲ್ಲಿ ಎರಡು ಸಿಕ್ಸರ್ ಬಾರಿಸಿದರು. ಮುಂದಿನ ಎಸೆತದಲ್ಲಿ ಮತ್ತೂಂದು ಸಿಕ್ಸರ್ ಬಂತು. ಅದರ ಅನಂತರ ಒಂದು ಸಿಂಗಲ್ ತೆಗೆದು ಕಾರ್ಟರ್‌ಗೆ ಬ್ಯಾಟಿಂಗ್ ಬಿಟ್ಟುಕೊಟ್ಟರು. ಕಾರ್ಟರ್ ಮುಂದಿನ ಮೂರೂ ಎಸೆತಗಳನ್ನು ಸಿಕ್ಸರ್‌ಗಟ್ಟಿದರು. ಒಟ್ಟಾರೆ ಲುಡಿಕ್ ನೀಡಿದ ರನ್‌ಗಳು ಹೀಗಿವೆ: 4,6+1,6+1,6,1,6,6,6. ಬ್ಯಾಟ್‌ನಿಂದ 41 ರನ್ ಬಂದರೆ ಇನ್ನೆರಡು ನೋಬಾಲ್. ಒಟ್ಟು 43 ರನ್.
50 ಓವರ್ ಮುಗಿದಾಗ ಕಾರ್ಟರ್ ಅಜೇಯ 102 ರನ್ ಬಾರಿಸಿದ್ದರೆ, ಹ್ಯಾಂಪ್ಟನ್ 95 ರನ್ ಬಾರಿಸಿದ್ದರು. ನಾರ್ದರ್ನ್ ಡಿಸ್ಟ್ರಿಕ್ಟ್$Õ 313/7 ರನ್ ಗಳಿಸಿತು. ಇದನ್ನು ಬೆನ್ನತ್ತಿ ಹೊರಟ ಸೆಂಟ್ರಲ್ ಡಿಸ್ಟ್ರಿಕ್ಟ್$Õ 50 ಓವರ್‌ನಲ್ಲಿ 289/9 ರನ್ ಗಳಿಸಿತು. ಆ ತಂಡದ ಪರ ಡಾನ್ ಫಾಕ್ಸ್‌ಕ್ರಾಫ್ಟ್ ಶತಕ ಹೊಡೆದಿದ್ದು ಪ್ರಯೋಜನಕ್ಕೆ ಬರಲಿಲ್ಲ.