Advertisement

Joe Biden; ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ

01:01 AM Jul 13, 2024 | Team Udayavani |

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಡೆಮಾಕ್ರಾಟ್‌ ಅಭ್ಯರ್ಥಿ ಜೋ ಬೈಡೆನ್‌ ಸ್ಪರ್ಧೆಯಿಂದ ಹಿಂದೆ ಸರಿಯುವ ಸಾಧ್ಯತೆ ಇದೆ ಎಂಬ ಸುದ್ದಿಗಳಿಗೆ ಸ್ವತಃ ಬೈಡೆನ್‌ ತೆರೆ ಎಳೆದಿದ್ದಾರೆ. ಶುಕ್ರವಾರ ಮಹತ್ವದ ಸುದ್ದಿಗೋಷ್ಠಿ ನಡೆಸಿ, ತಾವು ಡೆಮಾಕ್ರಾಟಿಕ್‌ ಪಕ್ಷದ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಉಳಿಯಲಿದ್ದೇನೆ. ಅದಕ್ಕೆ ನಾನು ಅತ್ಯಂತ ಸೂಕ್ತ ವ್ಯಕ್ತಿ ಎಂದು ಬಲವಾಗಿ ಪ್ರತಿಪಾದಿಸಿದ್ದಾರೆ. ಆದರೆ 12ಕ್ಕೂ ಅಧಿಕ ಡೆಮಾಕ್ರಾಟ್‌ ಸಂಸದರು ಅಧ್ಯಕ್ಷೀಯ ಸ್ಪರ್ಧೆಯಿಂದ ಹೊರಗುಳಿಯುವಂತೆ ಬೈಡೆನ್‌ಗೆ ಆಗ್ರಹಿಸಿದ್ದಾರೆ.

Advertisement

ಕಮಲಾ ಅಧ್ಯಕ್ಷೆಯಾಗಲು ಅರ್ಹ: ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಅಧ್ಯಕ್ಷೆ ಆಗುವ ಸಾಮರ್ಥ್ಯ ಹೊಂದಿದ್ದಾರೆ ಎಂದೂ ಬೈಡೆನ್‌ ಹೇಳಿದ್ದಾರೆ.

ಬೈಡೆನ್‌ ಎಡವಟ್ಟು
ನ್ಯಾಟೋ ಸಮಾವೇಶದಲ್ಲಿ ಬೈಡೆನ್‌ ಎರಡೆರಡು ಬಾರಿ ಹೆಸರನ್ನು ತಪ್ಪಾಗಿ ಹೇಳಿ ಮುಜುಗರ ಎದುರಿಸಿದ್ದಾರೆ. ಉಕ್ರೇನ್‌ ಅಧ್ಯಕ್ಷ ಝೆಲೆನ್‌ಸ್ಕಿ ಅವರನ್ನು “ಪ್ರಸಿಡೆಂಟ್‌ ಪುತಿನ್‌’ ಎಂದು ಬೈಡೆನ್‌ ಕರೆದಿದ್ದಾರೆ. ಅದರ ಬೆನ್ನಲ್ಲೇ ಕಮಲಾ ಹ್ಯಾರಿಸ್‌ರನ್ನು “ಉಪಾಧ್ಯಕ್ಷೆ ಟ್ರಂಪ್‌’ ಎಂದಿದ್ದಾರೆ. ಟ್ರಂಪ್‌ ಜತೆಗಿನ ಚರ್ಚೆಯಲ್ಲೂ ಬೈಡೆನ್‌ ತಡವರಿಸಿ ಟೀಕೆಗೊಳಗಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next