Advertisement
ಅಮೆರಿಕದ ರಾಷ್ಟ್ರೀಯ ಸೋಂಕು ರೋಗ ಗಳ ಸಂಸ್ಥೆಯ ನಿರ್ದೇಶಕ ಡಾ| ಆ್ಯಂಥೊನಿ ಫಾಸಿ, ಮುಂಚೂಣಿ ಆರೋಗ್ಯ ಕಾರ್ಯ ಕರ್ತರು ಹಾಗೂ ಜನಾಂಗೀಯ ನ್ಯಾಯ ಹೋರಾಟದ ಆಯೋಜಕರನ್ನು ಟೈಮ್ “ವರ್ಷದ ಪೋಷಕರು’ ಎಂದು ಕರೆದಿದೆ. ದ.ಕೊರಿಯಾದ ಬಾಲಕರ ಬ್ಯಾಂಡ್ ಬಿಟಿಎಸ್ “ವರ್ಷದ ಮನೊರಂಜಕ’ ಹಾಗೂ ಬಾಸ್ಕೆಟ್‌ಬಾಲ್ ಆಟಗಾರ ಲೆಬ್ರಾನ್ ಜೇಮ್ಸ್ “ವರ್ಷದ ಅಥ್ಲೀಟ್’ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಕಪ್ಪುವರ್ಣೀಯ ಜಾರ್ಜ್ ಫ್ಲಾಯ್ಡ ಹತ್ಯೆಯ ಬಳಿಕ ಅಮೆರಿಕದಲ್ಲಿ ಆರಂಭವಾದ ಜನಾಂಗೀಯ ದೌರ್ಜನ್ಯದ ವಿರುದ್ಧದ ಹೋರಾಟದ ವೇಳೆ ಸುಮಾರು 70 ಮಂದಿ ಪ್ರತಿಭಟನಕಾರರಿಗೆ ತಮ್ಮ ಮನೆಯಲ್ಲೇ ಆಶ್ರಯ ನೀಡಿದ್ದ ಭಾರತೀಯ -ಅಮೆರಿಕನ್ ರಾಹುಲ್ ದುಬೆ “ವರ್ಷದ ಹೀರೋ’ ಗೌರವಕ್ಕೆ ಪಾತ್ರರಾಗಿದ್ದಾರೆ. ಈ ವರ್ಷ ತಮ್ಮ ಕರ್ತವ್ಯಕ್ಕೂ ಮಿಗಿಲಾಗಿ ಉತ್ತಮ ಕೆಲಸಗೈದ ವ್ಯಕ್ತಿಗಳ ಪೈಕಿ ದುಬೆ ಅವರೂ ಒಬ್ಬರು ಎಂದು ಟೈಮ್ ಮ್ಯಾಗಜಿನ್ ಹೇಳಿದೆ.