Advertisement

ಅಮೇರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡೆನ್ ಭರ್ಜರಿ ಗೆಲುವು! 46ನೇ ಅಧ್ಯಕ್ಷರಾಗಿ ಆಯ್ಕೆ

10:50 PM Nov 07, 2020 | sudhir |

ವಾಷಿಂಗ್ಟನ್: ತೀವ್ರ ಕುತೂಹಲ ಕೆರಳಿಸಿದ್ದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿನ ಗೊಂದಲ ಅಂತ್ಯಗೊಂಡಿದೆ. ಪೆನ್ಸಿಲ್ವೇನಿಯಾದಲ್ಲಿ ಗೆಲುವು ಸಾಧಿಸುವ ಮೂಲಕ ಅಮೆರಿಕದ 46ನೇ ಅಧ್ಯಕ್ಷರಾಗಿ ಡೆಮಾಕ್ರಟಿಕ್ ಪಕ್ಷದ ಜೋ ಬೈಡೆನ್ ಅಂತಿಮವಾಗಿ ಆಯ್ಕೆಯಾಗಿದ್ದು ಹಾಲಿ ಅಧ್ಯಕ್ಷ ಹಾಗೂ ರಿಪಬ್ಲಿಕನ್​ ಪಕ್ಷದ ಡೊನಾಲ್ಡ್​ ಟ್ರಂಪ್​ ಹೀನಾಯ ಸೋಲನ್ನು ಅನುಭವಿಸಿದ್ದಾರೆ. ಭಾರತ ಮೂಲದ ಕಮಲಾ ಹ್ಯಾರಿಸ್ ಉಪಾಧ್ಯಕ್ಷೆ ಸ್ಥಾನಕ್ಕೆ ಏರಲಿದ್ದಾರೆ.

Advertisement

ಸ್ವಿಂಗ್ ರಾಜ್ಯ’ದಲ್ಲಿ ಪ್ರಮುಖವಾದ ಪೆನ್ಸಿಲ್ವೇನಿಯಾದಲ್ಲಿ ಬಿಡೆನ್​ ಭರ್ಜರಿ ಜಯ ಸಾಧಿಸುತ್ತಿದ್ದಂತೆ ಅಮೆರಿಕ ಮಾಧ್ಯಮಗಳಲ್ಲಿ ಮುಂದಿನ ಅಧ್ಯಕ್ಷ ಬಿಡೆನ್ ಎಂದು ಪ್ರದರ್ಶಿಸಲಾಯಿತು.​

ಒಟ್ಟು 538 ಮತಗಳ ಪೈಕಿ ಅಧ್ಯಕ್ಷ ಗಾದಿಗೇರಲು ಕನಿಷ್ಠ 270 ಎಲೆಕ್ಟ್ರೋಲ್ ಮತಗಳನ್ನು ಪಡೆಯುವ ಅಗತ್ಯವಿದ್ದು, ಜೋ ಬಿಡೆನ್​ 284 ಮತಗಳ ಮುನ್ನಡೆಯೊಂದಿಗೆ ಭರ್ಜರಿ ಜಯ ಸಾಧಿಸಿದ್ದಾರೆ. ಹಾಲಿ ಅಧ್ಯಕ್ಷ ಟ್ರಂಪ್​ 214 ಮತಗಳನ್ನು ಹಿನ್ನಡೆಯೊಂದಿಗೆ ಹೀನಾಯ ಸೋಲನ್ನು ಅನುಭವಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next