ವಾಷಿಂಗ್ಟನ್: ಜ.20ರಿಂದ ಅಮೆರಿಕದಲ್ಲಿ “ಜೋ ಬೈಡೆನ್ ಪರ್ವ’ ಶುರು. “ಜೋ ಅಧ್ಯಕ್ಷ ಚುಕ್ಕಾಣಿ ಹಿಡಿದ ಕೂಡಲೇ ಮಾಡುವ ಮೊದಲ ಕೆಲಸಗ ಳೇನು?’- ಜಗತ್ತಿನ ಈ ಕುತೂಹಲಕ್ಕೆ ನಿಯೋಜಿತ ವೈಟ್‌ಹೌಸ್ ಸಿಬಂದಿ ಮುಖ್ಯಸ್ಥ ರಾನ್ ಕ್ಲೇನ್ ತೆರೆ ಎಳೆದಿದ್ದಾರೆ. “ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಬೈಡೆನ್, ಪ್ರಸ್ತುತ ಅಮೆರಿಕ ಎದುರಿಸು ತ್ತಿರುವ 4 ಬಿಕ್ಕಟ್ಟುಗಳ ತುರ್ತು ಸುಧಾರಣೆಗಾಗಿ ಒಟ್ಟು 12 ನೀತಿಗಳಿಗೆ ಸಹಿಹಾಕಲಿದ್ದಾರೆ’ ಎನ್ನುವ ಸುಳಿವನ್ನು ವೈಟ್‌ಹೌಸ್‌ಗೆ ಸಲ್ಲಿಸಿರುವ ಜ್ಞಾಪನ ಪತ್ರದಲ್ಲಿ ತಿಳಿಸಿದ್ದಾರೆ.
4 ಬಿಕ್ಕಟ್ಟುಗಳೇನು?: “ಕೋವಿಡ್ ಬಿಕ್ಕಟ್ಟು, ಆರ್ಥಿಕ ಫಲಿತಾಂಶ ಬಿಕ್ಕಟ್ಟು, ಹವಾಮಾನ ಬಿಕ್ಕಟ್ಟು ಮತ್ತು ಜನಾಂಗೀಯ ನ್ಯಾಯ ಬಿಕ್ಕಟ್ಟುಗಳ ನಿವಾರಣೆಗೆ ಬೈಡೆನ್ ತುರ್ತು ಕ್ರಮ ಕೈಗೊಳ್ಳಲಿದ್ದಾರೆ’ ಎಂದು ಕ್ಲೇನ್ ತಿಳಿಸಿದ್ದಾರೆ.
ಆರಂಭದಲ್ಲೇ ಕ್ಷಿಪ್ರ ಹೆಜ್ಜೆ!: ಬೈಡೆನ್‌ರ ಆರಂಭಿಕ ಆದ್ಯತೆಗಳಲ್ಲಿ ಚುನಾವಣ ಪ್ರಚಾರ ವೇಳೆ ನೀಡಿದ ಭರವಸೆಗಳೇ ತುಂಬಿಕೊಂಡಿವೆ. ವಿದ್ಯಾರ್ಥಿಗಳ ಸಾಲ ಪಾವತಿಗೆ ಚಾಲ್ತಿಯಲ್ಲಿರುವ ವಿರಾಮ ಇನ್ನಷ್ಟು ವಿಸ್ತರಣೆ, ಪ್ಯಾರೀಸ್ ಒಪ್ಪಂದಕ್ಕೆ ಮರುಸೇರ್ಪಡೆ, ಮುಸ್ಲಿಮರ ಮೇಲಿನ ನಿರ್ಬಂಧಗಳ ವಾಪಸಾತಿಗೆ ಬೈಡೆನ್ ಕ್ರಮ ಜರಗಿಸುವ ಸಾಧ್ಯತೆ ಇದೆ ಎಂದಿದ್ದಾರೆ.
ಬೈಡೆನ್- ಕಮಲಾಗೆ ರಂಗೋಲಿ ಸ್ವಾಗತ! :
ಜ.20ರ ಪದಗ್ರಹಣ ಸಮಾರಂಭಕ್ಕೆ ಆಗಮಿ ಸುವ ಅಧ್ಯಕ್ಷ- ಉಪಾಧ್ಯಕ್ಷೆಯನ್ನು ಭಾರತೀಯ ಸಂಸ್ಕೃತಿಯ ಪ್ರತೀಕವಾದ “ಕೋಲಂ’ (ರಂಗೋಲಿ ರೀತಿ) ಸ್ವಾಗತಿಸಲಿದೆ. ಟೈಲ್ಸ್ ರೀತಿಯ ಸಣ್ಣ ಫಲಕಗಳಲ್ಲಿ ರಚಿಸಲಾಗಿ ರುವ ಸಾವಿರಾರು ಕೋಲಂ ಚಿತ್ರಗಳನ್ನು ಕ್ಯಾಪಿಟಲ್ ಹಿಲ್ ಹಾದಿಯಲ್ಲಿ ಸಾಲಾಗಿ ಅಲಂಕರಿಸುವ ಕಾರ್ಯ ಭರದಿಂದ ಸಾಗಿದೆ. ಇದನ್ನು ಅಮೆರಿಕದ ವಿವಿಧೆಡೆ ನೆಲೆಸಿರುವ 1,800ಕ್ಕೂ ಅಧಿಕ ಭಾರತೀಯ ಮೂಲದ ವರು ರಚಿಸಿದ್ದಾರೆ. ತಮಿಳುನಾಡಿನ ಸಾಂಪ್ರ ದಾಯಿಕ ಕೋಲಂ ಅನ್ನು ಅಕ್ಕಿ ಹಿಟ್ಟಿನ ಕಲಾ ಸೃಷ್ಟಿ. ಕಮಲಾ ಹ್ಯಾರಿಸ್ ಗೆದ್ದಾಗಲೂ ತಮಿ ಳು ನಾಡಿನ ಆಕೆಯ ಪೂರ್ವಜರ ಹಳ್ಳಿಯಲ್ಲಿ ಬಣ್ಣ ಬಣ್ಣದ ಕೋಲಂ ಬಿಡಿಸಲಾಗಿತ್ತು.