Advertisement
ಇದನ್ನೂ ಓದಿ:ಮೋದಿ ಹೆದರುವವನು ಅಲ್ಲ…: ಛತ್ತೀಸ್ ಗಢದಲ್ಲಿ ಗುಡುಗಿದ ಪ್ರಧಾನಿ ಮೋದಿ
Related Articles
Advertisement
ಪತಿಯ ತವರು ಮನೆಯಲ್ಲಿದ್ದ ಪತ್ನಿ ಹಲವು ಬಾರಿ ಪತಿಗೆ ಕರೆ ಮಾಡಿದ್ದರು ಕೂಡಾ ಆತ ಕರೆಯನ್ನು ಸ್ವೀಕರಿಸಿರಲಿಲ್ಲವಾಗಿತ್ತು. ನಂತರ ಪತಿಯ ಹುಟ್ಟುಹಬ್ಬದ ದಿನದಂದು ಖುದ್ದಾಗಿ ಮಕ್ಕಳ ಜೊತೆ ಪತಿಯನ್ನು ಭೇಟಿಯಾಗಲು ನಿರ್ಧರಿಸಿದ್ದಳು. ಆ ನಿಟ್ಟಿನಲ್ಲಿ ಜೋಧ್ ಪುರದಲ್ಲಿ ಪತಿಯ ನಿವಾಸಕ್ಕೆ ಬಂದ ವೇಳೆ ಆತ ಮತ್ತೊಬ್ಬಳು ಯುವತಿಯೊಂದಿಗೆ ವಾಸವಾಗಿರುವುದನ್ನು ಕಂಡು ಆಘಾತಕ್ಕೊಳಗಾಗಿದ್ದಳು ಎಂದು ವರದಿ ವಿವರಿಸಿದೆ.
ಪತಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಹಾಕಿಕೊಂಡ ಘಟನೆ ನಂತರ ಆಕ್ರೋಶಗೊಂಡ ಪತ್ನಿ ತನ್ನಿಬ್ಬರು ಮಕ್ಕಳೊಂದಿಗೆ ರೈಲ್ವೆ ನಿಲ್ದಾಣಕ್ಕೆ ಬಂದು ಸರಕು ಸಾಗಣೆ ರೈಲಿನ ಮುಂಭಾಗದಲ್ಲಿ ಹಾರಿಬಿಟ್ಟಿದ್ದಳು. ಕೂಡಲೇ ಗೂಡ್ಸ್ ರೈಲನ್ನು ನಿಲ್ಲಿಸಲಾಗಿತ್ತು. ಆದರೆ ಮಹಿಳೆ ಮತ್ತು ಇಬ್ಬರು ಮಕ್ಕಳ ದೇಹ ಛಿದ್ರ, ಛಿದ್ರವಾಗಿ ಹೋಗಿತ್ತು. ಶವದ ತುಂಡುಗಳನ್ನು ಒಟ್ಟುಗೂಡಿಸಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಪತಿಗಾಗಿ ಶೋಧ ಕಾರ್ಯ ನಡೆಸುತ್ತಿರುವುದಾಗಿ ವರದಿ ತಿಳಿಸಿದೆ.