ಅರಂತೋಡು: ಜೋಡುಪಾಲ, ದೇವರಕೊಲ್ಲಿ, ಅರೆಕಲ್ಲು, ಮೊಣ್ಣಂಗೇರಿ ಮತ್ತಿತರ ಕಡೆಗಳಲ್ಲಿ ನಡೆದಿರುವ ಪ್ರಾಕೃತಿಕ ವಿಕೋಪದಿಂದ ಬಾಧಿತರಾಗಿ, ನಿರಾಶ್ರಿತರ ಪರಿಹಾರ ಕೇಂದ್ರಗಳನ್ನು ಸೇರಿರುವ ಜನರಿಗೆ ಸುಳ್ಯ ತಾಲೂಕು ಬಾರ್ಬರ್ ಅಸೋಸಿಯೇಶನ್ ಮತ್ತು ಸುಳ್ಯ ತಾ| ಸವಿತಾ ಸಮಾಜದ ಕಾರ್ಯಕರ್ತರು ಉಚಿತ ಕ್ಷೌರ ಸೇವೆ ನೀಡಿದ್ದಾರೆ.
ಬಾರ್ಬರ್ ಅಸೋಸಿಯೇಶನ್ ಸದಸ್ಯರು ಒಂದು ದಿನವನ್ನು ನಿರಾಶ್ರಿತರ ಸೇವೆಗಾಗಿ ಮೀಸಲಿರಿಸಲು ನಿರ್ಧರಿಸಿ, ಕೊಡಗು ಭಾಗದ ಸಂಪಾಜೆ ಮತ್ತು ದ.ಕ. ಸಂಪಾಜೆಯ ಕಲ್ಲುಗುಂಡಿ ಶಾಲೆಯ ಕೇಂದ್ರಗಳಿಗೆ ತೆರಳಿ ಅಲ್ಲಿ ಆಶ್ರಯ ಪಡೆಯುತ್ತಿರುವ ನಿರಾಶ್ರಿತರಿಗೆ ಉಚಿತವಾಗಿ ಹೇರ್ ಕಟ್ಟಿಂಗ್ ಮತ್ತು ಶೇವಿಂಗ್ ಮಾಡಿದರು.
ಬಾರ್ಬರ್ ಅಸೋಸಿಯೇಶನ್ ಅಧ್ಯಕ್ಷ ಪದ್ಮನಾಭ ಸುಳ್ಯ, ಕಾರ್ಯದರ್ಶಿ ಅವಿನಾಶ್ ಕೇರ್ಪಳ, ಖಜಾಂಚಿ ರೋಹಿತಾಕ್ಷ ಗುತ್ತಿಗಾರು, ಸದಸ್ಯರಾದ ಸುರೇಶ್ ಕೊಲ್ಲಮೊಗ್ರ, ಸಂತೋಷ್ ಭಂಡಾರಿ ಕಾನತ್ತಿಲ, ರಕ್ಷಿತ್ ಕನಕಮಜಲು, ನೀರೇಂದ್ರ ದುಗಲಡ್ಕ, ದಾಮೋದರ ಲಾವಂತ್ತಡ್ಕ, ಜಾಲ್ಸೂರು ಕರಿಯಪ್ಪ, ವಿನಯ ದೊಡ್ಡ ತೋಟ, ಪ್ರಸನ್ನ ಪಂಜ, ಸುಬ್ರಹ್ಮಣ್ಯ ಮುಚ್ಚಿಲ, ಚಿದಾನಂದ ಸಿದ್ಧಾಪುರ, ಸೀತಾರಾಮ ಅಯ್ಯನಕಟ್ಟೆ, ಅಶೋಕ್ ಸುಳ್ಯ, ಮಲ್ಲೇಶ ಜಟ್ಟಿಪಳ್ಳ, ವೆಂಕಟೇಶ ಕ್ಯಾಂಪಸ್, ಮಹೇಶ ಸುಳ್ಯ, ನವೀನ್ ಸೂಂತೋಡು, ಸುರೇಶ್ ಮೊರಂಗಲ್ಲು, ರಾಘು ಕಲ್ಲುಗುಂಡಿ, ಪುರುಷೋತ್ತಮ ಅಜ್ಜಾವರ, ಸತೀಶ್ ಕಲ್ಲುಗುಂಡಿ, ಗುರುಪ್ರಸಾದ್ ರಿಲಾಕ್ಕ್ಸ್ , ಸೆಲ್ವ ಪಂಜ, ಪ್ರದೀಪ್ ಅಜ್ಜಾವರ, ಸವಿತಾ ಸಮಾಜದ ಅಧ್ಯಕ್ಷ ವಸಂತ ಕಡಬ, ಪುತ್ತೂರಿನ ಸವಿತಾ ಸಮಾಜದ ಮುಖಂಡರಾದ ರಮೇಶ್ ಮುರ, ವೆಂಕಟೇಶ ಭಂಡಾರಿ, ನಾಗೇಂದ್ರ, ರಮೇಶ್ ನಾವಿ, ಶ್ರೀಕಾಂತ ಹಡಪದ ಈ ವಿಶಿಷ್ಟ ಸೇವೆಯಲ್ಲಿ ಭಾಗಿಗಳಾದರು.
ಬಾರ್ಬರ್ ಅಸೋಸಿಯೇಶನ್ ಗೌರವಾಧ್ಯಕ್ಷ ಹರೀಶ್ ಬಂಟ್ವಾಳ್ ಉಪಸ್ಥಿತರಿದ್ದು, ಮಾರ್ಗದರ್ಶನಗೈದರು. ಸುಳ್ಯದಿಂದ 27 ಹಾಗೂ ಪುತ್ತೂರಿನ ಐವರು ಸಹಿತ ಒಟ್ಟು 32 ಮಂದಿ ಭಾಗವ ಹಿಸಿದ್ದರು. ಸವಿತಾ ಸಮಾಜ ಹಾಗೂ ಬಾರ್ಬರ್ ಅಸೋಸಿಯೇಶನ್ ಸೇವೆಯನ್ನು ಸಂಪಾಜೆ ಗ್ರಾ.ಪಂ. ಮಾಜಿ ಅಧ್ಯಕ್ಷ, ಸಂಪಾಜೆ ನಿರಾಶ್ರಿತರ ಕೇಂದ್ರದ ಉಸ್ತುವಾರಿ ವಹಿಸಿರುವ ಬಾಲಚಂದ್ರ ಕಳಗಿ ಸಹಿತ ಅನೇಕ ಗಣ್ಯರು, ಅಧಿಕಾರಿಗಳು ಶ್ಲಾಘಿಸಿದ್ದಾರೆ.