Advertisement
ಬಹುತೇಕ ಗ್ರಾ.ಪಂ.ಗಳಲ್ಲಿ ಪಿಡಿಒ, ಗ್ರಾ.ಪಂ. ಕಾರ್ಯದರ್ಶಿ, ದ್ವಿ.ದ. ಲೆಕ್ಕ ಸಹಾಯಕರ ಹುದ್ದೆಗಳು ಖಾಲಿ ಇವೆ. ಕೊರೊನಾ ಕಾರಣಕ್ಕೆ ಆರ್ಥಿಕ ಮಿತವ್ಯಯ ಹೇರಿದ್ದರ ಪರಿಣಾಮ ಒಂದು ವರ್ಷದಿಂದ ಹೊಸ ನೇಮಕ ಆಗಿಲ್ಲ. ಇದು ಆಡಳಿತ ಮತ್ತು ಅಭಿವೃದ್ಧಿಯ ಮೇಲೆ ಪರಿಣಾಮ ಬೀರುತ್ತಿವೆ.
ರಾಜ್ಯದ ಸಂಸದರು, ಕೇಂದ್ರ ಸಚಿವರು, ರಾಜ್ಯದ ಸಚಿವರು, ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರ ಬಳಿ ನಿಯೋಜನೆ ಮತ್ತು ಅನ್ಯ ಕಾರ್ಯ ನಿಮಿತ್ತ 50ಕ್ಕೂ ಹೆಚ್ಚು ಮಂದಿ ಪಿಡಿಒಗಳನ್ನು ನಿಯೋಜಿಸಲಾಗಿದೆ. 8 ಸಾವಿರ ಹುದ್ದೆಗಳು ಖಾಲಿ
ಗ್ರಾ. ಮತ್ತು ಪಂ. ರಾಜ್ ಇಲಾಖೆಯಲ್ಲಿ ಒಟ್ಟು 4,928, ಪಂ. ರಾಜ್ ಎಂಜಿನಿಯರಿಂಗ್ ಇಲಾಖೆಯಲ್ಲಿ 1,537, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ 1,594 ಹುದ್ದೆ ಖಾಲಿ ಇವೆ.