Advertisement

ಲಾಕ್ ಡೌನ್ ಎಫೆಕ್ಟ್ : ನಿರುದ್ಯೋಗದಿಂದ ನೊಂದ ನಟ ಆತ್ಮಹತ್ಯೆಗೆ ಯತ್ನ!

03:32 PM Jun 09, 2021 | Team Udayavani |

ಕೊಲ್ಕತ್ತಾ : ಕೋವಿಡ್ ಸೋಂಕು ಎಷ್ಟೋ ಜನರ ಬದಕನ್ನೇ ಕಿತ್ತುಕೊಂಡಿದೆ. ಲಕ್ಷಾಂತರ ಜನರ ಉಸಿರನ್ನೇ ನಿಲ್ಲಿಸಿದೆ. ಇದೇ ಹಿನ್ನೆಲೆಯಲ್ಲಿ ಕೋವಿಡ್ ನಿಂದ ಕೆಲಸವಿಲ್ಲದೆ ನೊಂದ ನಟನೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

Advertisement

ಹೌದು ಲಾಕ್ ಡೌನ್ ವೇಳೆ ಎಲ್ಲೂ ಕೆಲಸ ಸಿಗದೆ ನಿರುದ್ಯೋಗದಿಂದ ಬಳಲಿದ ಬೆಂಗಾಲಿ ನಟನೊಬ್ಬ ಕೊಲ್ಕತ್ತಾದಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ. ಅದೃಷ್ಟವಶಾತ್ ಪೊಲೀಸರು ನಟನನ್ನು ಕಾಪಾಡಿದ್ದಾರೆ.

ನಿದ್ದೆ ಮಾತ್ರೆಯನ್ನು ನುಂಗಿದ 31 ವರ್ಷದ ಟೆಲಿವಿಷನ್ ನಟ ಫೇಸ್ ಬುಕ್ ಲೈವ್ ಮಾಡಿದ್ದಾನೆ. ಇದನ್ನು ಗಮನಿಸಿದ ಕೆಲವರು ಸುದ್ದಿಯನ್ನು ಪೊಲೀಸರಿಗೆ ತಿಳಿಸಿದ್ದಾರೆ. ತಕ್ಷಣ ಫೇಸ್ ಬುಕ್ ಲೈವ್ ಅನ್ನು ಟ್ರ್ಯಾಕ್ ಮಾಡಿದ ಪೊಲೀಸರು ನಟನನ್ನು ಕಾಪಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next