Advertisement

SSCಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

12:37 AM Jan 03, 2021 | Team Udayavani |

ಸಿಬಂದಿ ನೇಮಕಾತಿ ಆಯೋಗ (ಎಸ್‌ಎಸ್‌ಸಿ) ವು ಕಂಬೈನ್ಡ್ ಗ್ರಾಜುಯೇಟ್‌ ಲೆವೆಲ್‌ (ಸಿಜಿಎಲ್‌) ಪರೀಕ್ಷೆ -2020 ಸಂಬಂಧ ಅಧಿಸೂಚನೆ ಹೊರಡಿಸಿದೆ. ಈ ಪರೀಕ್ಷೆಗಾಗಿ ಈಗಾಗಲೇ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ssc.nic.in ಮೂಲಕ ಅರ್ಹ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದು.

Advertisement

ಎಷ್ಟು ಹುದ್ದೆಗಳು
ಮೀಸಲಾತಿಗೆ ಅನುಗುಣವಾಗಿ ಒಟ್ಟು 6,506 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. (ಗ್ರೂಪ್‌ “ಬಿ’ ಗೆಜೆಟೆಡ್‌ 250, ಗ್ರೂಪ್‌ “ಬಿ’ ನಾನ್‌-ಗೆಜೆಟೆಡ್‌-3,513, ಗ್ರೂಪ್‌ “ಸಿ’ 2,743) ಹುದ್ದೆಗಳಿವೆ.

ಅರ್ಹತೆ ಮತ್ತು ವಯೋಮಿತಿ
ಅಂಗೀಕೃತ ವಿ.ವಿ.ಗಳಿಂದ ಯಾವುದೇ ಪದವಿ ವಿದ್ಯಾರ್ಹತೆ ಪಡೆದವರು ಅರ್ಜಿ ಸಲ್ಲಿಸಬಹುದಾಗಿದೆ. ವಿವಿಧ ಹುದ್ದೆಗಳಿಗೆ ಭಿನ್ನ ವಯೋಮಿತಿಯನ್ನು ನಿಗದಿಪಡಿಸಲಾಗಿದೆ. ಪೋಸ್ಟ್‌ ಲೆವೆಲ್‌-8ರ ಹುದ್ದೆಗಳಿಗೆ 30 ವರ್ಷ, ಪೋಸ್ಟ್‌ ಲೆವೆಲ್-7ಕ್ಕೆ 20-30 ವರ್ಷ, ಇನ್‌ಸ್ಪೆಕ್ಟರ್‌ ಹುದ್ದೆಗಳಿಗೆ 18-30 ವರ್ಷ, ಪೋಸ್ಟ್‌ ಲೆವೆಲ್‌-5 ಹುದ್ದೆಗಳಿಗೆ 18-27 ವರ್ಷ ಎಂದು ವಯೋಮಿತಿ ನಿಗದಿಪಡಿಸಲಾಗಿದೆ.

ನೋಂದಣಿ ಶುಲ್ಕ
ಅರ್ಜಿ ಶುಲ್ಕ 100 ರೂ. ಎಂದು ನಿಗದಿ ಪಡಿಸಲಾಗಿದೆ. ಅಭ್ಯರ್ಥಿಗಳು ಯುಪಿಐ, ನೆಟ್‌ ಬ್ಯಾಂಕಿಂಗ್‌ ಮೂಲಕ ಅಥವಾ ವೀಸಾ, ಮಾಸ್ಟರ್‌ಕಾರ್ಡ್‌, ಮೆಸ್ಟ್ರೋ, ರುಪೇ ಕ್ರೆಡಿಟ್‌ ಅಥವಾ ಡೆಬಿಟ್‌ ಕಾರ್ಡ್‌ ಮೂಲಕ ಶುಲ್ಕ ಪಾವತಿಸಬಹುದು. ಎಸ್‌ಬಿಐ ಶಾಖೆಗಳಲ್ಲಿ ಚಲನ್‌ ಮೂಲಕವೂ ಪಾವತಿಸಬಹುದಾಗಿದೆ. ಪರಿಶಿಷ್ಟ ಜಾತಿ (ಎಸ್‌ಸಿ), ಪರಿಶಿಷ್ಟ ಪಂಗಡ (ಎಸ್‌ಟಿ), ವಿಕಲಚೇತನರು (ಪಿಡಬ್ಲ್ಯುಡಿ), ಮಾಜಿ ಸೈನಿಕ (ಇಎಸ್‌ಎಂ) ಮತ್ತು ಮಹಿಳಾ ಅಭ್ಯರ್ಥಿಗಳು ಮತ್ತು ಅರ್ಜಿದಾರರು ಶುಲ್ಕವನ್ನು ಪಾವತಿಸಬೇಕಾಗಿಲ್ಲ.

ಹೆಚ್ಚಿನ ಮಾಹಿತಿಗೆ ಆಯೋಗದ ಅಧಿಕೃತ ಜಾಲತಾಣ ssc.nic.inನಲ್ಲಿ ನೋಟಿಫಿಕೇಶನ್‌ ಪಿಡಿಎಫ್ ಫೈಲ್‌ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು.

Advertisement

ಯಾವೆಲ್ಲ ಹುದ್ದೆಗಳು?
ಸಿಬಂದಿ ನೇಮಕಾತಿ ಆಯೋಗವು ಕಂಬೈನ್ಡ್ ಗ್ರಾಜುಯೇಟ್‌ ಲೆವೆಲ್‌ ಪರೀಕ್ಷೆ-2020 ರ ಮೂಲಕ ವಿವಿಧ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಿದೆ. ಹುದ್ದೆಗಳಿಗೆ ಟೈಯರ್‌-1 ಪರೀಕ್ಷೆ 2021ರ ಮೇ 29ರಿಂದ ಜೂನ್‌ 7ರ ನಡುವೆ ನಡೆಯಲಿದೆ. ಎಸ್‌ಎಸ್‌ಸಿ ಸಿಜಿಎಲ್‌ ಪರೀಕ್ಷೆ ಮೂಲಕ ಕೇಂದ್ರ ಸರಕಾರದ ವಿವಿಧ ಇಲಾಖೆ, ಸಚಿವಾಲಯಗಳಲ್ಲಿನ ಗ್ರೂಪ್‌ “ಬಿ’ ಮತ್ತು ಗ್ರೂಪ್‌ “ಸಿ’ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತದೆ.

– ಸಹಾಯಕ ಲೆಕ್ಕಪರಿಶೋಧಕ ಅಧಿಕಾರಿ (Assistant Audit Officer)
– ಸಹಾಯಕ ಖಾತೆ ಅಧಿಕಾರಿ (Assistant Accounts Officer)
– ಸಹಾಯಕ ವಿಭಾಗ ಅಧಿಕಾರಿ (Assistant Section Officer)
– ಸಹಾಯಕ (Assistant)
– ಇನ್‌ಸ್ಪೆಕ್ಟರ್‌ (Inspector)
– ಸಬ್‌ಇನ್‌ಸ್ಪೆಕ್ಟರ್‌ (Sub Inspector)
– ಕಿರಿಯ ಸಂಖ್ಯಾಶಾಸ್ತ್ರೀಯ ಅಧಿಕಾರಿ (Junior Statistical Officer)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next