Advertisement
ಸಾಮಾನ್ಯ ವರ್ಗದ ಅಭ್ಯರ್ಥಿ ಗಳಿಗೆ 989, ಆರ್ಥಿಕವಾಗಿ ಹಿಂದುಳಿದ ವರ್ಗ 113, ಇತರ ಹಿಂದುಳಿದ ವರ್ಗ 417, ಎಸ್‌ಸಿ 360 ಹಾಗೂ ಎಸ್‌ಟಿ ವರ್ಗದ ಅಭ್ಯರ್ಥಿಗಳಿಗೆ 121 ಹುದ್ದೆಗಳು ಮೀಸಲಿದ್ದು, ಆಸಕ್ತರು ನಿಗದಿತ ದಿನಾಂಕ 09-01-2021ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ.
ಯಾವುದೇ ಪ್ರಮಾಣೀಕೃತ ವಿಶ್ವವಿದ್ಯಾನಿಲಯದಲ್ಲಿ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಪಡೆದಿರಬೇಕು. ಜತೆಗೆ ಕಂಪ್ಯೂಟರ್ ಜ್ಞಾನ ಅಗತ್ಯ. ಅರ್ಜಿ ಸಲ್ಲಿಕೆ ಹೇಗೆ?
ಸಹಾಯಕ ಗುಪ್ತಚರ ಹುದ್ದೆಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಮೊದಲಿಗೆ www.mha.gov.in ಅಥವಾ www.ncs.gov.in ನಲ್ಲಿ ಲಾಗಿನ್ ಆಗಿ, ಪರೀಕ್ಷೆಗೆ ಸಂಬಂಧಿಸಿದಂತೆ ಇರುವ ಅಗತ್ಯ ಮಾಹಿತಿಗಳನ್ನು ಅರಿತು ಅರ್ಜಿ ಸಲ್ಲಿಸಲು ಮುಂದಾಗಬೇಕು. ಈಗಾಗಲೇ ಅರ್ಜಿ ಸಲ್ಲಿಸಿದ್ದರೆ ರಿಜಿಸ್ಟ್ರೇಷನ್ ನಂಬರ್ ನಮೂದಿಸಿ ಮುಂದುವರಿಯಿರಿ. ಹೊಸ ಅಭ್ಯರ್ಥಿಗಳಿಗೆ ಮುಂದಿನ ಪರದೆಯಲ್ಲಿ ರಿಜಿಸ್ಟ್ರೇಷನ್ ಫಾರಂವೊಂದು ತೆರೆದುಕೊಳ್ಳುತ್ತದೆ. ಅದರಲ್ಲಿ ಹೆಸರು, ಇ-ಮೇಲ್ ವಿಳಾಸ, ಲಿಂಗ, ವರ್ಗ, ಜನ್ಮದಿನಾಂಕ, ಮೊಬೈಲ್ ಸಂಖ್ಯೆ, ಹೊಂದಲಿರುವ ಹುದ್ದೆ ಇತ್ಯಾದಿ ಮಾಹಿತಿ ತುಂಬಿ, ದೃಶ್ಯದಲ್ಲಿರುವ ಕೋಡ್ ಸಂಖ್ಯೆ ಬರೆದು ನೋಂದಾವಣಿ ಆಗಿ. ಬಳಿಕ ಬರುವ ಪರದೆಯಲ್ಲಿ ಪೋಷಕರ ಹೆಸರು, ತಮ್ಮ ವಿದ್ಯಾರ್ಹತೆ ಮತ್ತು ವಿಳಾಸ ಸಂಬಂಧಿಸಿದ ಪೂರಕ ಮಾಹಿತಿ ತುಂಬಿ ಪರೀಕ್ಷಾ ಕೇಂದ್ರ ನಮೂದಿಸಿ. ಮುಂದಿನ ಪರದೆಯಲ್ಲಿ ಭಾವಚಿತ್ರ ಮತ್ತು ಸಹಿ ಚಿತ್ರ ಪ್ರತಿಯನ್ನು ಅಪ್‌ಲೋಡ್ ಮಾಡಿ. ಮುಂದಿನ ಪರದೆಯಲ್ಲಿ ಅರ್ಜಿ ಶುಲ್ಕವನ್ನು ಆನ್‌ಲೈನ್‌ನಲ್ಲಿಯೇ ಪಾವತಿಸಿ ಮತ್ತು ಪಾವತಿಸಿದ ಪ್ರತಿಯನ್ನು ಡೌನ್‌ಲೋಡ್ ಮಾಡಿಕೊಳ್ಳಿ. ಫಾರಂ ಸಂಖ್ಯೆ, ಪಾಸ್‌ವರ್ಡ್ ನೆನಪಿನಲ್ಲಿಟ್ಟುಕೊಳ್ಳಿ.
Related Articles
Advertisement
– ಸಹಾಯಕ ಗುಪ್ತಚರ ಹುದ್ದೆಗೆ 18ರಿಂದ 27 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಪರಿಶಿಷ್ಟ ಜಾತಿ/ವರ್ಗಕ್ಕೆ ವಯೋಮಿತಿಯಲ್ಲಿ 5 ವರ್ಷ ಮತ್ತು ಇತರ ಹಿಂದುಳಿದ ವರ್ಗಕ್ಕೆ 3 ವರ್ಷಗಳ ಸಡಿಲಿಕೆಯಿದೆ.– ಸಹಾಯಕ ಗುಪ್ತಚರ ಹುದ್ದೆಗೆ ಕೇಂದ್ರ ಸರಕಾರ ನಿಗದಿ ಪಡಿಸಿದ ವೇತನ ಶ್ರೇಣಿ ಮತ್ತು ಸವಲತ್ತುಗಳು ಲಭಿಸಲಿವೆ. ಅಲ್ಲದೆ ಅವರ ಕಾರ್ಯವೈಖರಿಯ ಆಧಾರದ ಮೇಲೆ ವೇತನದಲ್ಲಿ ಹೆಚ್ಚಳ ಮತ್ತು ಪದೋನ್ನತಿ ದೊರೆಯಲಿವೆ. ಆಯ್ಕೆ ಹೇಗೆ?
– ಅಭ್ಯರ್ಥಿಗಳು ಹುದ್ದೆ ಪಡೆಯಲು ಲಿಖೀತ ಪರೀಕ್ಷೆ ಹಾಗೂ ಸಂದರ್ಶನ ಎದುರಿಸಬೇಕಾಗುತ್ತದೆ. ಲಿಖೀತವಾಗಿ ಶ್ರೇಣಿ 1 ಮತ್ತು ಶ್ರೇಣಿ 2 ಎಂಬ 100 ಮತ್ತು 50 ಅಂಕಗಳ ಪರೀಕ್ಷೆ ಇರುತ್ತದೆ.
– ಶ್ರೇಣಿ 1ರಲ್ಲಿ ಆಬೆಕ್ಟಿವ್ ಮಾದರಿಯಲ್ಲಿ 20 ಪ್ರಶ್ನೆಗಳಿಗೆ ಉತ್ತರಿಸಬೇಕು.
– ಶ್ರೇಣಿ 2ರಲ್ಲಿ 30 ಅಂಕಗಳಿಗೆ ಪ್ರಬಂಧ ಮತ್ತು 20 ಅಂಕಗಳಿಗೆ ಇಂಗ್ಲಿಷ್ ಕಾಂಪ್ರನ್ಶನ್ ಬರೆಯಬೇಕು. ಪರೀಕ್ಷೆಯಲ್ಲಿ ಪಡೆದ ಅಂಕಗಳು ಮತ್ತು ಸಂದರ್ಶನವನ್ನು ಎದುರಿಸಿದ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. (ಟ್ರೈನಿಂಗ್ ಸಮಯದಲ್ಲಿ ದೈಹಿಕ ಪರೀಕ್ಷೆ ನಡೆಸಲಾಗುತ್ತದೆ.)
– ಕರ್ನಾಟಕ ಸಹಿತ ದೇಶದ 28 ರಾಜ್ಯಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಕರ್ನಾಟಕದಲ್ಲಿ ಬೆಳಗಾವಿ, ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗದಲ್ಲಿ ಪರೀಕ್ಷಾ ಕೇಂದ್ರಗಳಿರಲಿವೆ. ಆಯ್ಕೆಯಾದ ಅಭ್ಯರ್ಥಿಗಳು ದೇಶದ ಯಾವುದೇ ಭಾಗದಲ್ಲಿ ಕರ್ತವ್ಯ ನಿರ್ವಹಿಸಲು ಸಿದ್ಧರಿರಬೇಕು. ಶುಲ್ಕ ಹಾಗೂ ಕೊನೆಯ ದಿನ
ಮೊದಲ ಬಾರಿಗೆ ಪರೀಕ್ಷೆ ಬರೆಯುತ್ತಿರುವ ಅಭ್ಯರ್ಥಿಗಳಿಗೆ 100 ರೂ. ಪರೀಕ್ಷಾ ಶುಲ್ಕ ನಿಗದಿ ಪಡಿಸಲಾಗಿದೆ. ಅರ್ಜಿ ಸಲ್ಲಿಕೆಗೆ ಜನವರಿ 9 ಕೊನೆಯ ದಿನವಾಗಿದೆ.