ಬೆಂಗಳೂರು: ಪ್ರತಿಷ್ಠಿತ ಗೀತಂ ಸ್ವಾಯತ್ತ ವಿಶ್ವವಿದ್ಯಾಲಯದ 700 ವಿದ್ಯಾರ್ಥಿಗಳಿಗೆ ವಿವಿಧ ಖಾಸಗಿ ಕಂಪೆನಿಗಳಿಂದ ಉದ್ಯೋಗದ ಆಫರ್ ಸಿಕ್ಕಿದೆ.
ಕೋವಿಡ್ ಸಾಂಕ್ರಾಮಿಕ ಕಷ್ಟದ ಕಾಲದಲ್ಲಿಯೂ ತನ್ನ ಸಾಮರ್ಥಯವನ್ನು ಗೀತಂ ವಿವಿ ಸಾಬೀತುಪಡಿಸಿದ್ದು. 2020-21ನೇ ಶೈಕ್ಷಣಿಕ ಸಾಲಿನಲ್ಲಿ ನಡೆದ ಆನ್‌ಲೈನ್ ಮೂಲಕನಡೆದ ಕ್ಯಾಂಪಸ್ ನೇಮಕಾತಿ ಪ್ರಕ್ರಿಯೆಯಲ್ಲಿ ಪ್ರತಿಷ್ಠಿತ ಅಮಜಾನ್, ಸಿಸ್ಕೊ, ಸೊಸೈಟ್
ಜನರಲ್, ಟಿಸಿಎಸ್, ಪಿಡಭಬ್ಲ್ಯೂಸಿ, ಸೂಪ್ರಾ ಸ್ಟಿರಿಯಾ, ಹ್ಯಾಕ್ಸ್‌ವೇರ್, ಲೆಗಾಟೋ, ಇನ್ಫೋಸಿಸ್, ಕಾಗ್ನಿಜೆಂಟ್, ಡಿಎಕ್ಸ್‌ಸಿ, ಆಕಂಚೆರ್, ಎನ್ ಟಿಟಿ ಡಾಟಾ ಕಂಪೆನಿಗಳು ಗೀತಂ ವಿದ್ಯಾರ್ಥಿ ಗಳಿಗೆ ಉದ್ಯೋಗದ ಆಫರ್‌ಗಳನ್ನು ನೀಡಿವೆ. ವಿಶೇಷವಾಗಿ ಪ್ರತಿಷ್ಠಿತ ಸಾಫ್ಟ್ವೇರ್ ಹಾಗೂ ಕೋರ್ ಎಂಜಿನಿಯರಿಂಗ್ ಕಂಪೆನಿಗಳಾದ ವರ್ಚುಸಾ, ವಿಪ್ರೋ, ಆಕ್ಸೆಂಚರ್, ಸಿಟಿಎಸ್ ಮತ್ತಿತರ ಕಂಪೆನಿಗಳು 700ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಾರ್ಷಿಕ 18 ಲಕ್ಷ ರೂ. ಗರಿಷ್ಠ ಪ್ಯಾಕೇಜ್ ಆಫರ್ ಮಾಡಿವೆ. ಇದು ಗೀತಂ ವಿವಿ ಇತಿಹಾಸದಲ್ಲಿ ಇದೇ ಮೊದಲು. 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆಒಂದಕ್ಕಿಂತ ಹೆಚ್ಚು ಕಂಪೆನಿಗಳಿಂದ ಆಫರ್ ಸಿಕ್ಕಿರುವುದು ವಿಶೇಷವಾಗಿತ್ತು.
ಈ ಕುರಿತು ಮಾತನಾಡಿದ ಗೀತಂ ವಿವಿ ಉಪಕುಲಪತಿ ಪ್ರಪ. ಸಿ. ಸಾಂಬಾಶಿವ ರಾವ್, ಕ್ಯಾಂಪಸ್ ನೇಮಕಾತಿಯ ಹೊರತಾಗಿ ವಿವಿಯು ವಿದ್ಯಾರ್ಥಿಗಳ ಪ್ರತಿಭೆಯನ್ನುಗುರುತಿಸಿ ಅವರಿಗೆ ಬೇರೆ ಉದ್ಯೋಗವಕಾಶಗಳ ಬಗ್ಗೆ ಪ್ರೇರೇಪಿಸುತ್ತದೆ. ಶೈಕ್ಷಣಿಕ ಚಟುವಟಿಕೆಗಳ ಮೇಲಿನ ಗಮನ, ಕೌಶಲ್ಯ ಕಾರ್ಯಕ್ರಮ ಹಾಗೂ ಸಮರ್ಥ ಮೇಲ್ವಿಚಾ ರಣೆ ಪರಿಣಾಮವಾಗಿ ಸಾಂಕ್ರಾಮಿಕದ ನಡುವೆಯೂ ವಿವಿಯ ಹೆಚ್ಚುವಿದ್ಯಾರ್ಥಿಗಳಿಗೆ ಉದ್ಯೋಗದ ಅವಕಾಶಗಳು ಸಿಗಲು ಕಾರಣವಾಯಿತು ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ ಗೀತಂ ವಿವಿ “ಸಾಧಕರ ದಿನ-2021′ ಸಂಭ್ರಮಿಸಿತು. ಇದರಲ್ಲಿ ದೊಡ್ಡ ಬಳ್ಳಾಪುರ ಕೈಗಾರಿಕಾ ಸಂಘದ ಅಧ್ಯಕ್ಷ ಟಿ.ಎಸ್.ಗುಲಾಟಿ, ಟಿಸಿಎಸ್ ಅಕಾಡೆಮಿಕ್ ರಿಲೇಷನ್ ಶಿಪ್ ಮ್ಯಾನೇಜರ್ ಶ್ರೀನಿವಾಸ ರಾಮನುಜಂ ಕಂಡೂರಿ, ವಿಪ್ರೋ ಕ್ಯಾಂಪಸ್ ಹೈರಿಂಗ್‌ಮ್ಯಾನೇಜರ್ ಕೆ. ಬಿನೋಯ್, ಅಲೆಕ್ಸಿಸ್‌ಜನರಲ್ ಮ್ಯಾನೇಜರ್ ಕೃಷ್ಣಕುಮಾರ್, ಗೀತಂ ಕರಿಯರ್ ಗೈಡನ್ಸ್ ಸೆಲ್ ನಿರ್ದೇಶಕ ಡಾ. ಕಿಶೋರ್ ಬುದ್ಧ ಮತ್ತಿತರರು ಇದ್ದರು.