Advertisement
ಸಂಪುಟ ಸಭೆಯಲ್ಲಿ “ಕರ್ನಾಟಕ ರಾಜ್ಯ ಕೈಗಾರಿಕೆಗಳು, ಕಾರ್ಖಾನೆಗಳು ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ಉದ್ಯೋಗ ಮಸೂದೆ -2024’ಕ್ಕೆ ಅನುಮೋದನೆ ದೊರೆತಿದ್ದ ಬಗ್ಗೆ ಸಿಎಂ ಸಿದ್ದರಾಮಯ್ಯ, ಕಾರ್ಮಿಕ ಸಚಿವ ಸಂತೋಷ್ ಲಾಡ್ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದರು.
ಇದೇ ವಿಚಾರದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಪದ್ಮಶ್ರೀ ಪುರಸ್ಕೃತ ಉದ್ಯಮಿ ಮೋಹನ ದಾಸ್ ಪೈ ಅವರು, ಇದೊಂದು ಪ್ರಗತಿಪರವಲ್ಲದ, ಅನಾವಶ್ಯಕ, ಕ್ರೂರ, ಸಂವಿ ಧಾನಬಾಹಿರ, ಕಾನೂನು ಬಾಹಿರ ಮಸೂದೆ ಎಂದು ಟೀಕಿಸಿದ್ದರು.
Related Articles
Advertisement
ಇದಕ್ಕೆ ಎಸೆಸೆಲ್ಸಿ ಪ್ರಮಾಣಪತ್ರವನ್ನು ಸಾಕ್ಷಿಯಾಗಿ ಪರಿಗಣಿಸುವುದಾಗಿ ತಿಳಿಸಿದೆ. ನನ್ನ ಬಳಿ ಈ ಪ್ರಮಾಣಪತ್ರ ಇಲ್ಲವಾದರೆ ನಾನು ಉದ್ಯೋಗಕ್ಕೆ ಅರ್ಜಿ ಸಲ್ಲಿಸುವಂತಿಲ್ಲವೇ? ನನ್ನನ್ನು ಸ್ಥಳೀಯ ಎಂದು ಪರಿಗಣಿಸಲಾಗುತ್ತದೆಯೇ? ಬೆಂಗಳೂರಿನಲ್ಲಿ ರಸ್ತೆಗುಂಡಿಗಳನ್ನು ಸರಿಪಡಿಸಿ, ಸ್ಥಳೀಯರಿಗೆ ಉತ್ತಮ ಶಿಕ್ಷಣ ಕೊಡುವುದರತ್ತ ಗಮನಿಸಿ ಎಂದು ಸರಕಾರಕ್ಕೆ ಸಲಹೆ ಕೊಟ್ಟಿದ್ದರು.
“ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ನಮಗೆ ಕೌಶಲಭರಿತ ಪ್ರತಿಭೆಗಳ ಅಗತ್ಯವಿದೆ. ಸ್ಥಳೀಯರಿಗೆ ಉದ್ಯೋಗ ಕೊಡಬೇಕೆಂಬ ಭರದಲ್ಲಿ ತಂತ್ರಜ್ಞಾನ ಕ್ಷೇತ್ರ ದಲ್ಲಿ ಮುಂದಿರುವ ನಮ್ಮ ಸ್ಥಾನದ ಮೇಲೆ ದುಷ್ಪರಿಣಾಮ ಆಗಬಾರದು.” -ಕಿರಣ್ ಮಜೂಮ್ದಾರ್ ಶಾ, ಬಯೋಕಾನ್ ಅಧ್ಯಕ್ಷೆ
ಇದು ಸಂವಿಧಾನದ ಉಲ್ಲಂಘನೆಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಮೀಸಲಾತಿ ಒದಗಿಸುವ ಕರ್ನಾಟಕ ಸರಕಾರದ ಕ್ರಮ ಅರ್ಥವ್ಯವಸ್ಥೆಗೆ ಒಳ್ಳೆಯದಲ್ಲ. ಜತೆಗೆ ಅದು ಪ್ರತಿಕೂಲವಾಗಿ ಪರಿಮಿಸಲಿದೆ. ಯಾವುದೇ ರಾಜ್ಯದಲ್ಲಿಯೇ ಆಗಲಿ, ಇಂಥ ವ್ಯವಸ್ಥೆ ಜಾರಿಯಲ್ಲಿದ್ದರೆ ಅದು ಸಂವಿಧಾನದ ಉಲ್ಲಂಘನೆಯೇ ಆಗಲಿದೆ.
-ಜಯಂತ್ ಚೌಧರಿ, ಕೇಂದ್ರ ಸಚಿವ ಸೌಹಾರ್ದಯುತ ಪರಿಹಾರ ಅಗತ್ಯ
“ತಾಂತ್ರಿಕ ಕ್ಷೇತ್ರದಲ್ಲಿ ಹಾಗೂ ರಾಷ್ಟ್ರದ ಪ್ರಮುಖ ಕೈಗಾರಿಕೀಕರಣಗೊಂಡ ರಾಜ್ಯವಾಗಲು ನಮಗೆ ನುರಿತ ಪ್ರತಿಭಾವಂತರ ಅಗತ್ಯವಿದೆ. ಈ ನಿಟ್ಟಿನಲ್ಲಿ ಸರಕಾರ ಪ್ರಸ್ತಾಪಿಸಿರುವ ವಿಧೇಯಕವನ್ನು ಪುನರ್ ಪರಿಶೀಲಿಸುವ ಅಗತ್ಯವಿದೆ. ಕನ್ನಡಿಗರಿಗೆ ವಿಶೇಷವಾಗಿ ಮ್ಯಾನೇಜ್‌ಮೆಂಟ್ ಕೋಟದಲ್ಲಿ ಶೇ. 25ರಷ್ಟನ್ನು ಕೊಡಬೇಕು. ಈ ನಿಟ್ಟಿನಲ್ಲಿ ಸೌಹಾರ್ದಯುತ ಪರಿಹಾರ ಸರಕಾರ ಕಂಡುಕೊಳ್ಳಬೇಕು.” – ರಮೇಶ್‌ಚಂದ್ರ ಲಹೋಟಿ, ಎಫ್ಕೆಸಿಸಿಐ ಅಧ್ಯಕ್ಷ