ಹೊಸದಿಲ್ಲಿ: ಭಾರೀ ವಿರೋಧಗಳ ನಡುವೆಯೇ ಕೇಂದ್ರ ಸರಕಾರ ಸೇನಾ ನೇಮಕಾತಿಗೆ ಅಗ್ನಿಪಥ ಯೋಜನೆಯನ್ನು ಜಾರಿ ಮಾಡಿದ್ದು ಹಳೆಯ ಸುದ್ದಿ. ಈಗ ಅಗ್ನಿವೀರರಿಗೆ ಒಂದು ಸಂತೋಷದ ಸುದ್ದಿ ನೀಡಿದೆ.
ನಿವೃತ್ತ ಅಗ್ನಿವೀರರಿಗೆ ಬಿಎಸ್‌ಎಫ್ನಲ್ಲಿ ಶೇ.10 ಮೀಸಲಾತಿ ನೀಡಲಾಗುತ್ತದೆ. ಇವರು ಸೇನಾವಧಿ ಮುಗಿದ ಮೇಲೆ ಬಿಎಸ್‌ಎಫ್ನಲ್ಲಿ ಹುದ್ದೆ ಸಂಪಾದಿಸಿಕೊಳ್ಳಬಹುದು. ಇದಕ್ಕಾಗಿ ಬಿಎಸ್‌ಎಫ್ ನೇಮಕಾತಿ ನಿಯಮಕ್ಕೂ ತಿದ್ದುಪಡಿ ತರಲಾಗಿದೆ. ಇಲ್ಲಿಗೆ ಅರ್ಜಿ ಸಲ್ಲಿಸುವ ಮೊದಲ ಬ್ಯಾಚ್‌ನ ಮಾಜಿ ಅಗ್ನಿವೀರರ ವಯೋಮಿತಿಯನ್ನು 5 ವರ್ಷ, 2ನೇ ಬ್ಯಾಚ್‌ನ ಅಗ್ನಿವೀರರ ವಯೋಮತಿಯನ್ನು 3 ವರ್ಷ ಏರಿಸಲಾಗಿದೆ.
ಅಂದರೆ ಅಗ್ನಿಪಥದಲ್ಲಿ ಗರಿಷ್ಠವೆಂದರೆ 25 ವರ್ಷಕ್ಕೆ ಸೇವಾವಧಿ ಮುಗಿಸುವ ಅಗ್ನಿವೀರರು ತಮ್ಮ 30ನೇ ವರ್ಷದಲ್ಲೂ ಬಿಎಸ್‌ಎಫ್ಗೆ ಅರ್ಜಿ ಸಲ್ಲಿಸಬಹುದು. ಇನ್ನು 2ನೇ ಬ್ಯಾಚ್‌ನ ಯೋಧರು 28ನೇ ವರ್ಷದವರೆಗೆ ಅರ್ಜಿ ಸಲ್ಲಿಸಬಹುದು. ಹಾಗೆಯೇ ಈ ಯೋಧರು ದೈಹಿಕ ಪರೀಕ್ಷೆಗೆ ಹಾಜರಾಗಬೇಕಾದ ಅಗತ್ಯವೂ ಇಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.