Advertisement
ಪಟ್ಟಣದ ಗುಡ್ ನ್ಯೂಸ್ ಕಾಲೇಜು ಆವರಣದಲ್ಲಿ ರವಿವಾರ ನಡೆದ ಬೃಹತ್ ಉದ್ಯೋಗ ಮೇಳದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಸಾವಿರಾರು ಪ್ರತಿಭಾನ್ವಿತನಿರುದ್ಯೋಗಿ ಯುವಕ–ಯುವತಿಯರು ಉದ್ಯೋಗಕ್ಕಾಗಿ ತಮ್ಮ ಹೆಸರನ್ನು ನೋಂದಾಯಿಸಿರುವುದು ನಿರುದ್ಯೋಗ ಸಮಸ್ಯೆ ಎತ್ತಿ ತೋರಿಸುತ್ತಲಿದೆ. ನೋಂದಣಿಯನ್ನು 1934 ಅಭ್ಯರ್ಥಿಗಳು ಮಾಡಿದ್ದು, ಕೊನೆ ಕ್ಷಣದಲ್ಲಿ ಬಂದಂತಹ ನೂರಾರು ಅಭ್ಯರ್ಥಿಗಳಿಗೂ ಸಂದರ್ಶನದ ಅವಕಾಶ ನೀಡಲಾಗಿದೆ. ಸಂದರ್ಶನಕ್ಕೆ ಭಾಗವಹಿಸಿದವರಲ್ಲಿ 784 ನಿರುದ್ಯೋಗ ಯುವಕ–ಯುವತಿಯರಿಗೆ ವಿವಿಧ ಕಂಪನಿಗಳ ಆಯ್ಕೆ ಪತ್ರ ನೀಡಲಾಗಿದೆ ಎಂದರು.
Related Articles
Advertisement
ಗುಡ್ ನ್ಯೂಸ್ ಕಾಲೇಜಿನ ಪ್ರಾಂಶುಪಾಲ ಡಾ| ಬಿ.ಜಿ. ಬಿರಾದರ, ಫ್ರೋ ಬಿ.ಜಿ ಬಿದರಿ,ಪ್ರೊ ಜಿ.ಸಿ.ಗುಮ್ಮಗೋಳಮಠ, ಡಾ| ಮಹೇಶ ಹೊರಕೇರಿ, ಫ್ರೋ| ಕುಸುಗಲ್, ಬಿಜೆಪಿ ಅಧ್ಯಕ್ಷ ನಿಂಗಪ್ಪ ಸುತಗಟ್ಟಿ, ಶಾಸಕರ ಆಪ್ತ ಸಹಾಯಕ ಮಾರುತಿ ಹಂಚಿನಮನಿ, ತಾಪಂ ಅಧ್ಯಕ್ಷೆ ಸುನಿತಾ ಮ್ಯಾಗಿನಮನಿ, ಉಪಾಧ್ಯಕ್ಷ ಚಂದ್ರಗೌಡ ಪಾಟೀಲ, ಐ.ಸಿ ಗೋಕುಲ, ಎಸ್. ಎಂ. ಚಿಕ್ಕಣ್ಣವರ, ನರೇಶ ಮಲಾ°ಡ, ಶಶಿಧರ ಹುಲಿಕಟ್ಟಿ, ಬಸವರಾಜ ಶೇರೆವಾಡ, ವಜ್ರಕುಮಾರ ಮಾದನಭಾವಿ, ಲಿಂಗರಾಜ ತಿರ್ಲಾಪುರ, ರಾಜು ಚಿಕ್ಕಮಠ, ಮಹಾಂತೇಶ ಅಂಬಲಿ, ಬಸವರಾಜ ಹೊನ್ನಳ್ಳಿ, ಪರಶುರಾಮ ರಜಪೂತ, ಸುರೇಶ ಶೀಲವಂತರ, ಅಶೋಕ ಆಡಿನವರ ಇದ್ದರು.