ನವದೆಹಲಿ: ಪ್ರಸಿದ್ಧ ಐಟಿ ಸಂಸ್ಥೆಗಳಾದ ಟಿಸಿಎಸ್ ಮತ್ತು ಇನ್ಫೋಸಿಸ್ ಈ ಆರ್ಥಿಕ ವರ್ಷದಲ್ಲಿ ಒಟ್ಟು 90,000 ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳಲಿವೆ.
ಅದರಲ್ಲಿ ಟಿಸಿಎಸ್ 40,000 ಸಿಬ್ಬಂದಿ ನೇಮಕಾತಿ ಯೋಜನೆ ಹಾಕಿಕೊಂಡಿದ್ದರೆ, ಇನ್ಫೋಸಿಸ್ 50,000 ಸಿಬ್ಬಂದಿ ನೇಮಕಾತಿ ಯೋಜನೆ ಹಾಕಿಕೊಂಡಿದೆ.
ಇದನ್ನೂ ಓದಿ:ಅಪಘಾತ: ಹೊಸಪೇಟೆ ಆಕಾಶವಾಣಿ ಮುಖ್ಯಸ್ಥ ಎಂ.ಎಸ್.ನಾಗೇಂದ್ರ ಪವಾಡ ಸದೃಶ ಪಾರು
ಕಳೆದ ಆರ್ಥಿಕ ವರ್ಷದಲ್ಲಿ ಟಿಸಿಎಸ್ 1 ಲಕ್ಷ ಫ್ರೆಶರ್‌ಗಳನ್ನು ಹಾಗೂ ಇನ್ಫೋಸಿಸ್ 85,000 ಫ್ರೆಶರ್‌ಗಳನ್ನು ನೇಮಕ ಮಾಡಿಕೊಂಡಿತ್ತು. ಇನ್ಫೋಸಿಸ್ ಈ ವರ್ಷ ಕಳೆದ ವರ್ಷಕ್ಕಿಂತ ಕನಿಷ್ಠ 50,000 ಫ್ರೆಶರ್‌ಗಳನ್ನು ಹೆಚ್ಚುವರಿಯಾಗಿ ನೇಮಕಾತಿ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದೆ.
ಎರಡೂ ಐಟಿ ಕಂಪನಿಗಳಲ್ಲಿ ವರ್ಕ್ ಫ್ರಂ ಹೋಂ ಮುಂದುವರಿಯಲಿದೆ.