ಹೊಸದಿಲ್ಲಿ: ಜವಹಾರ್ ಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಚುನಾವಣೆಯ ಫಲಿತಾಂಶ ಭಾನುವಾರ ಪ್ರಕಟಗೊಂಡಿದ್ದು, ಎಡ ಪಕ್ಷ ಬೆಂಬಲಿತ ವಿದ್ಯಾರ್ಥಿಗಳು ಎಲ್ಲಾ ನಾಲ್ಕು ಸ್ಥಾನಗಳಲ್ಲಿ ಜಯಭೇರಿ ಬಾರಿಸಿದ್ದಾರೆ.
ಎಡಪಕ್ಷಗಳ ಬೆಂಬಲಿತ ವಿದ್ಯಾರ್ಥಿ ಸಂಘಟನೆಗಳಾದ ಎಐಎಸ್‌ಎ , ಎಸ್‌ಎಫ್ಐ, ಎಐಎಸ್‌ಎಫ್, ಡಿಎಸ್‌ಎಫ್ ಅಭ್ಯರ್ಥಿಗಳು ಜಯಗಳಿಸಿದ್ದು, ಎನ್‌ಎಸ್‌ಯುಐ ಮತ್ತು ಎಬಿವಿಪಿ ಮುಖಭಂಗ ಅನುಭವಿಸಿದೆ.
ಅಧ್ಯಕ್ಷರಾಗಿ ಎನ್ ಸಾಯಿ ಬಾಲಾಜಿ, ಉಪಾಧ್ಯಕ್ಷರಾಗಿ ಸಾರಿಕಾ ಚೌಧರಿ, ಅಹಮದ್ ರಾಥೇರ್ ಕಾರ್ಯದರ್ಶಿಯಾಗಿ ಮತ್ತು ಅಮೃತಾ ಜಯದೀಪ್ ಅವರು ಜೊತೆ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.
ಶನಿವಾರ ಸಂಜೆ ಮತಗಳ ಎಣಿಕೆ ಆರಂಭವಾಗಿತ್ತು, ಭಾನುವಾರ ನಸುಕಿನ ವೇಳೆ ಎಬಿವಿಪಿ ಆಕ್ಷೇಪದ ಹಿನ್ನಲೆಯಲ್ಲಿ ಮತ ಎಣಿಕೆ ಸ್ಥಗಿತಗೊಳಿಸಲಾಗಿತ್ತು.