Advertisement

ಜೋಹ್ರಿ ಪ್ರಕರಣ: ಪೊಲೀಸರೊಂದಿಗೆ ಜೆಎನ್‌ಯು ವಿದ್ಯಾರ್ಥಿಗಳ ಕಾಳಗ

07:20 PM Mar 23, 2018 | udayavani editorial |

ಹೊಸದಿಲ್ಲಿ : ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪ ಹೊಂದಿರುವ ಪ್ರೊ. ಅತುಲ್‌ ಜೋಹ್ರಿ ಅವರ ಅಮಾನತನ್ನು ಆಗ್ರಹಿಸಿ ಇಲ್ಲಿನ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಸದಸ್ಯರು ಮತ್ತು ಜೆಎನ್‌ಯು ಟೀಚರ್ಸ್‌ ಅಸೋಸಿಯೇಶನ್‌ ಸದಸ್ಯರು ಜತೆಗೂಡಿ ಸಂಸತ್ತಿಗೆ ನಡೆಸಿದ ಪ್ರತಿಭಟನಾ ಮೆರವಣಿಗೆಯನ್ನು ಪೊಲೀಸರು ತಡೆದಾಗ ಅರಾಜಕ ಸನ್ನಿವೇಶ ಮತ್ತು ಹಿಂಸೆ ತಲೆದೋರಿತೆಂದು ವರದಿಯಾಗಿದೆ.

Advertisement

ಐಎನ್‌ಎ ಮಾರ್ಕೆಟ್‌ ಪ್ರದೇಶದಲ್ಲಿ ಪ್ರತಿಭಟನಕಾರರನ್ನು ತಡೆದಾಗ ಅವರು ಪೊಲೀಸರೊಂದಿಗೆ ಕಾಳಗಕ್ಕೆ ಇಳಿದರು. ಪರಿಸ್ಥಿತಿಯು ಹತೋಟಿ ತಪ್ಪಿದಾಗ ಪೊಲೀಸರು ನೀರಿನ ಗುಂಡುಗಳನ್ನು ಪ್ರತಿಭಟನಕಾರರ ಮೇಲೆ ಪ್ರಯೋಗಿಸಿದರು. 

ಪೊಲೀಸರ ಈ ಕ್ರಮಗಳಿಂದ ನಿಯಂತ್ರಣಕ್ಕೆ ಬಾರದ ಪ್ರತಿಭಟನಕಾರರು ತಮ್ಮ ಮೆರವಣಿಗೆಯನ್ನು ಹಠದಿಂದ ಮುಂದುವರಿಸಿದಾಗ ಹಿಂಸೆ, ಅರಾಜಕತೆ ತಲೆದೋರಿತು. 

ಲೈಂಗಿಕ ಕಿರುಕುಳದ ಆರೋಪಿ ಪ್ರೊ. ಜೋಹ್ರಿ ಯನ್ನು ವಿವಿ ಆಡಳಿತೆ ಇನ್ನೂ ಅಮಾನತು ಮಾಡದಿರುವುದು ಪ್ರತಿಭಟನಕಾರರ ಆಕ್ರೋಶಕ್ಕೆ ಕಾರಣವಾಗಿದೆ. 
 

Advertisement

Udayavani is now on Telegram. Click here to join our channel and stay updated with the latest news.

Next