Advertisement

ಕ್ಯಾಂಪಸ್ ನೊಳಗೆ ಬಿರಿಯಾನಿ ತಯಾರಿಸಿ ತಿಂದ JNU ವಿದ್ಯಾರ್ಥಿಗೆ ದಂಡ

03:59 PM Nov 10, 2017 | Sharanya Alva |

ನವದೆಹಲಿ: ಯೂನಿರ್ವಸಿಟಿ ಅಡ್ಮಿನಿಸ್ಟ್ರೇಟಿವ್ ಕಟ್ಟಡದ ಮುಂಭಾಗದ ಮೆಟ್ಟಿಲಿನ ಮೇಲೆ ಬಿರಿಯಾನಿ ಅಡುಗೆ ತಯಾರಿಸಿ ತಿಂದ ಜವಾಹರಲಾಲ್ ನೆಹರು ಯೂನಿರ್ವಸಿಟಿಯ ವಿದ್ಯಾರ್ಥಿಗಳಿಗೆ 6000 ರೂಪಾಯಿ ದಂಡ ವಿಧಿಸಿರುವ ಘಟನೆ ನಡೆದಿದೆ.

Advertisement

ಜೂನ್ 27ರಂದು ಜೆಎನ್ ಯುನ ಎಂಎ ವಿದ್ಯಾರ್ಥಿ ಅಮಿರ್ ಮಲಿಕ್ ಎಂಬಾತ ಮೆಟ್ಟಿಲಿನ ಸಮೀಪ ಬಿರಿಯಾನಿ ಅಡುಗೆ ತಯಾರಿಸಿದ್ದ. ಶಿಸ್ತುಪಾಲನಾ ಸಮಿತಿಯ ವಿಚಾರಣೆಯಲ್ಲಿ ಅಡ್ಮಿನಿಷ್ಟ್ರೇಟಿವ್ ಕಟ್ಟಡದ ಮುಂಭಾಗದ ಮೆಟ್ಟಿಲಿನ ಮೇಲೆ ಬಿರಿಯಾನಿ ಅಡುಗೆ ತಯಾರಿಸಿರುವ ಪ್ರಕರಣದಲ್ಲಿ ಶಾಮೀಲಾಗಿರುವುದು ತಪ್ಪಿತಸ್ಥ ಎಂಬುದಾಗಿ ಪತ್ತೆ ಹಚ್ಚಲಾಗಿದೆ. ಮಲಿಕ್ ಇತರ ವಿದ್ಯಾರ್ಥಿಗಳ ಜತೆ ಸೇರಿ ಬಿರಿಯಾನಿ ತಿಂದಿದ್ದ.

ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಇಂತಹ ಕೃತ್ಯಗಳಲ್ಲಿ ತೊಡಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಜೆಎನ್ ಯು ಎಚ್ಚರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next