Advertisement
ಕನ್ಹಯ್ಯಾ ವಿರುದ್ಧ ಸಾಕ್ಷ್ಯಗಳು ದೊರೆಯದ ಹಿನ್ನೆಲೆಯಲ್ಲಿ ದೇಶದ್ರೋಹ ಪ್ರಕರಣ ಕೈಬಿಡುವ ಸಾಧ್ಯತೆಯಿದೆ. ಆದರೆ, ಜೆಎನ್‌ಯು ಇತರೆ ವಿದ್ಯಾರ್ಥಿಗಳಾದ ಉಮರ್ ಖಾಲಿದ್ ಮತ್ತು ಅನಿರ್ಬನ್ ಭಟ್ಟಾಚಾರ್ಯ ವಿರುದ್ಧ ದೋಷಾರೋಪ ಹೊರಿಸಿರುವ ಸಾಧ್ಯತೆ ದಟ್ಟವಾಗಿದೆ. ಆರೋಪಪಟ್ಟಿಯಲ್ಲಿ ಕರಡು ಪ್ರತಿಯನ್ನು ಉಲ್ಲೇಖೀಸಿ ಮಾಧ್ಯಮಗಳು ಈ ಕುರಿತು ವರದಿ ಮಾಡಿವೆ. 40 ವಿಡಿಯೋಗಳ ಪರೀಕ್ಷೆಗಳಿಂದ ದೇಶವಿರೋಧಿ ಘೋಷಣೆ ಕೂಗಿರುವುದು ಸಾಬೀತಾಗಿದ್ದು, ಉಗ್ರ ಅಫjಲ್ ಗುರು ಬೆಂಬಲಿಸಿದ ಪೋಸ್ಟರನ್ನು ಉಮರ್ ಸಿದ್ಧಪಡಿಸಿರುವುದೂ ಗೊತ್ತಾಗಿದೆ ಎಂದು ಮೂಲಗಳು ತಿಳಿಸಿವೆ. ಇನ್ನೊಂದೆಡೆ, ದೆಹಲಿ ವಿವಿಯ ರಾಮ್‌ಜಾಸ್ ಕಾಲೇಜಿನಲ್ಲಿ ಫೆ.22ರಂದು “ಕಾಶ್ಮೀರಕ್ಕೆ ಸ್ವಾತಂತ್ರ್ಯ ಬೇಕು, ಬಸ್ತಾರ್‌ಗೆ ಸ್ವಾತಂತ್ರ್ಯ ಬೇಕು’ ಎಂದು ಘೋಷಣೆ ಕೂಗಿರುವ ವಿಡಿಯೋವೊಂದು ಇದೀಗ ಬಹಿರಂಗವಾಗಿದೆ. Advertisement
ದೇಶವಿರೋಧಿ ಘೋಷಣೆ: ಕನ್ಹಯ್ಯಾಗೆ ಕ್ಲೀನ್‌ಚಿಟ್
03:45 AM Mar 02, 2017 | |
Advertisement
Udayavani is now on Telegram. Click here to join our channel and stay updated with the latest news.